ಮಹಿಳಾ ವಕೀಲರ ಜೊತೆ ಪೊಲೀಸ್ ಅಧಿಕಾರಿಯ ದುರ್ವರ್ತನೆ: ದೂರು ದಾಖಲಿಸದ ಡಿಸಿ, ಎಸ್‌ಪಿ ವಿರುದ್ಧ ವಕೀಲರ ಸಂಘದ ಬೃಹತ್ ಪ್ರತಿಭಟನೆ
ಮಹಿಳಾ ವಕೀಲರ ಜೊತೆ ಪೊಲೀಸ್ ಅಧಿಕಾರಿಯ ದುರ್ವರ್ತನೆ: ದೂರು ದಾಖಲಿಸದ ಡಿಸಿ, ಎಸ್‌ಪಿ ವಿರುದ್ಧ ವಕೀಲರ ಸಂಘದ ಬೃಹತ್ ಪ್ರತಿಭಟನೆ
ಧಾರವಾಡ ಮಹಿಳಾ ವಕೀಲರೊಬ್ಬರ ಜೊತೆಗೆ ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ್ ಕುಸುಗಲ್ ಅನುಚಿತವಾಗಿ ವರ್ತಿಸಿದ್ದು, ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಧಾರವಾಡ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನಾಲ್ಕು ತಾಸುಗಳ ಕಾಲ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಧಾರವಾಡ ಮಹಿಳಾ ವಕೀಲರೊಬ್ಬರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಪ್ಯಾರಾ ಲೀಗಲ್ ಸಿಬ್ಬಂದಿಯಾಗಿ ( ಮಹಿಳಾ ಕಾನೂನು ಆಧಿಕಾರಿ) ನೇಮಕವಾಗಿದ್ದರು.
ಸದರಿ ಮಹಿಳಾ ವಕೀಲರು ಧಾರವಾಡ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರ ಹಾಗೂ ಸಖಿ ಒನ್ ಸೆಂಟರ್ ಸ್ಟಾಪ್ ನ ಆಡಳಿತಾಧಿಕಾರಿಯ ಮೌಖಿಕ ಆದೇಶದ ಮೇರೆಗೆ ಇಲಾಖೆಯ ಅಧಿಕಾರ ಪತ್ರದೊಂದಿಗೆ ವಿವಿಧ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಅತ್ಯಾಚಾರ, ದೌರ್ಜನ್ಯ, ಅಪಹರಣ, ಲೈಂಗಿಕ ದೌರ್ಜನ್ಯ, ಹಾಗೂ ಇತರ ಗಂಭೀರ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಪಡೆಯುವ ಕಾರ್ಯದಿಂದ ಮಾಹಿತಿ ಸಂಗ್ರಹಿಸಬೇಕಿತ್ತು.
ಧಾರವಾಡ ಜಿಲ್ಲೆ ಮತ್ತು ಹುಬ್ಬಳ್ಳಿ - ಧಾರವಾಡ ಮಾಹನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳಲ್ಲಿ ಅವರು ಈ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ನಿಯುಕ್ತರಾಗಿದ್ದರು.
ಅದಕ್ಕಾಗಿ ಮಹಿಳಾ ವಕೀಲರು ಕರಿ ಕೋಟ್ ಧರಿಸಿಕೊಂಡು ಧಾರವಾಡ ಗ್ರಾಮಿಣ ಪೋಲಿಸ್ ಠಾಣೆಗೆ ಬೇಟಿ ನೀಡಿದಾಗ ಧಾರವಾಡ ಗ್ರಾಮಿಣ ಪೋಲಿಸ್ ಠಾಣೆಯ ಸಿ.ಪಿ.ಐ.ಮಂಜುನಾಥ ಕುಸುಗಲ್ ಅನುಚಿತವಾಗಿ ವರ್ತಿಸಿದ್ದಾರೆ.
ಮಂಜುನಾಥನ ಈ ಅನುಚಿತ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮಹಿಳಾ ವಕೀಲರು ಸ್ಥಳದಲ್ಲೇ ಆ ಅಧಿಕಾರಿಗೆ ಛೀಮಾರಿ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡು ಕ್ಷೇಮ ಕೇಳುವ ನಾಟಕವನ್ನು ಅಧಿಕಾರಿ ಮಂಜುನಾಥ ಮಾಡಿದ್ದಾರೆ.
ಮಹಿಳಾ ವಕೀಲರ ಪತಿಯೂ ವಕೀಲರಾಗಿದ್ದು. ಮಹಿಳಾ ವಕೀಲರ ಪತಿ ಹಾಗೂ ವಕೀಲರ ಸ್ನೇಹಿತ ಗ್ರಾಮಿಣ ಪೋಲಿಸ್ ಠಾಣೆಗೆ ಭೇಟಿ ನೀಡಿ ಸದರಿ ಘಟನೆ ಕುರಿತು ವಿಚಾರಿಸಲು ಹೊದಾಗ ಸಿ.ಪಿ.ಐ. ಮಂಜುನಾಥ ಕುಸುಗಲ್ ರವರು ಮಹಿಳಾ ವಕೀಲರು ಹಾಗೂ ಮಹಿಳಾ ವಕೀಲರ ಪತಿ ಹಾಗೂ ಇನ್ನೊಬ್ಬ ವಕೀಲರ ಮೊಬೈಲ್ ಕಸಿದುಕೊಳ್ಳಲು ತಮ್ಮ ಸಿಬ್ಬಂದಿಗೆ ತಿಳಿಸಿ ತಮ್ಮ ಕಚೇರಿಯ ಬಾಗಿಲು ಹಾಕಿ ಆಕ್ರಮವಾಗಿ ಕೂಡಿ ಹಾಕಿದಾಗ ತಕ್ಷಣವೇ ಮೂರು ಜನ ವಕೀಲರ ಸದರಿ ಕೃತ್ಯವನ್ನು ಪ್ರತಿಭಟಿಸಿ ಠಾಣೆಯಿಂದ ಹೊರ ಬಂದಿದ್ದಾರೆ.
ಈ ಘಟನೆಯ ಕುರಿತು ಮಹಿಳಾ ವಕೀಲರು ಧಾರವಾಡ ವಕೀಲರ ಸಂಘಕ್ಕೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ತಕ್ಷಣ ವಕೀಲರ ಸಂಘದ ನೇತೃತ್ವದಲ್ಲಿ ಅದೇ ದಿನ ಘಟನೆಯ ಕುರಿತು ಧಾರವಾಡ ಜಿಲ್ಲಾಧಿಕಾರಿಗಳಿಗೆ ಹಾಗೂ ಧಾರವಾಡ ಜಿಲ್ಲಾ ಎಸ್.ಪಿ ಯವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
ದಿನಾಂಕ 29-10-2022 ರಂದು ಧಾರವಾಡ ವಕೀಲರ ಸಂಘದ ಪಧಾದಿಕಾರಿಗಳು ಹಾಗೂ ಹಲವಾರು ವಕೀಲರ ಧಾರವಾಡ ಜಿಲ್ಲಾಧಿಕಾರಿಗಳನ್ನು ಬೇಟಿಯಾಗಿ ಸದರಿ ಘಟನೆ ಕುರಿತು ಮಾಹಿತಿ ನೀಡಿದ್ದರು. ಆದರೆ, ಜಿಲ್ಲಾಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳದ ಕಾರಣ 29-10- 2022 ರಂದು ಸಂಜೆ 6-00 ಗಂಟೆಗೆ ಧಾರವಾಡ ವಕೀಲರ ಸಂಘದ ನೇತೃತ್ವದಲ್ಲಿ ಸದರಿ ಘಟನೆ ಕುರಿತು ಧಾರವಾಡ ಉಪ ನಗರ ಪೋಲಿಸ್ ಠಾಣಗೆ ತೆರಳಿ ದೂರು ಲಿಖಿತ ದೂರು ನೀಡಲಾಯಿತು.
ದೂರು ಪಡೆದು ತಡ ರಾತ್ರಿವರೆಗೂ ವಕೀಲರ ಸಂಘದ ಪಧಾದಿಕಾರಿಗಳನ್ನು ಮತ್ತು ವಕೀಲರನ್ನು ಕಾಯಿಸಿ FIR ದಾಖಲಿಸುವಲ್ಲಿ ವಿಳಂಬ ನೀತಿ ಅನುಸರಿಸಿ ಪೋಲಿಸ್ ರು ಘಟನೆಗೆ ಕಾರಣರಾದ ಸಿ.ಪಿ.ಐ ರವರನ್ನು ರಕ್ಷಣೆ ಮಾಡುವ ಹುನ್ನಾರ ಮಾಡಿದಾಗ ವಕೀಲರ ಸಂಘದ ಪಧಾದಿಕಾರಿಗಳು FIR ದಾಖಲಿಸಲು ವಿಳಂಬ ನೀತಿ ಅನುಸರಿಸಿದ ಪೋಲಿಸ್ ರ ನಡೆ ಖಂಡಿಸಿ ರಾತ್ರಿ 12-00 ಗಂಟೆಗೆ ಠಾಣೆಯಿಂದ ಹೊರ ಬಂದರು.
ದಿನಾಂಕ 31-10-2022 ರಂದು ಸದರಿ ಘಟನೆ ಕುರಿತು ಚೆರ್ಚೆ ನಡೆಸಲು ಧಾರವಾಡ ವಕೀಲರ ಸಂಘದ ಸರ್ವ ಸದಸ್ಯರ ತುರ್ತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದರಿ ಘಟನೆಯನ್ನು ಖಂಡಿಸಲಾಯಿತು.
ಘಟನೆಗೆ ಕಾರಣರಾದ ಧಾರವಾಡ ಗ್ರಾಮಿಣ ಪೋಲಿಸ್ ಠಾಣೆಯ ಸಿ.ಪಿ.ಐರವರ ವಿರುದ್ದ FIR ದಾಖಲಿಸಲು ಒತ್ತಾಯಿಸಿ ಧಾರವಾಡದ ಜುಬಿಲಿ ಸರ್ಕಲ್ ನಲ್ಲಿ ನಿರಂತರವಾಗಿ ನಾಲ್ಕು ತಾಸುಗಳ ಕಾಲ ಬೃಹತ್ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಗೆ ಮಣಿದ ಪೊಲೀಸರು ಸಿ.ಪಿ.ಐರವರ ವಿರುದ್ದು ದೂರು ದಾಖಲಿಸಿಕೊಂಡು ಭಾರತ ದಂಡ ಸಂಹಿತೆ ಕಲಂ 353(a) ,342,506,509 ರಡಿ ಪ್ರಕರಣ ನಮೂದಿಸಿ ಧಾರವಾಡ ಉಪ ನಗರ ಪೋಲಿಸ್ ಠಾಣೆ ಅಪರಾಧ ಸಂಖ್ಯೆ 245/2022 ರಡಿ FIR ದಾಖಲಿಸಿದರು.
ಪ್ರಕರಣ ದಾಖಲಾದ ತಕ್ಷಣವೇ ಘಟನೆಗೆ ಕಾರಣರಾದ ಸಿ.ಪಿ.ಐ ಮಂಜುನಾಥ ಕುಸುಗಲ್ ರವರನ್ನು ಇಲಾಖೆ ವಿಚಾರಣೆ ಮಾಡಿ ವಜಾಗೊಳಿಸಲು ಹಾಗೂ ಇಲಾಖಾ ವಿಚಾರಣೆ ಮುಗಿಯುವವರೆಗೂ ಸದರಿ ಪೋಲಿಸ್ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಲಾಗಿದೆ. ಒಂದು ವೇಳೆ ಅಮಾನತ್ತು ಮಾಡದಿದ್ದಲ್ಲಿ ಧಾರವಾಡ ವಕೀಲರ ಸಂಘದ ನೇತೃತ್ವದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡುವುದಾಗಿ ಧಾರವಾಡ ವಕೀಲರ ಸಂಘದಿಂದ. ಧಾರವಾಡ ಎಸ್ ಪಿ.ಯವರಿಗೆ ಮನವಿ ಸಲ್ಲಿಸಲಾಗಿದೆ.