SC, ST ಮೀಸಲಾತಿಯಲ್ಲಿ ಹೆಚ್ಚಳ: ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ಜಾರಿಗೆ ಕರ್ನಾಟಕ ಸರ್ವ ಪಕ್ಷ ಒಪ್ಪಿಗೆ
SC, ST ಮೀಸಲಾತಿಯಲ್ಲಿ ಹೆಚ್ಚಳ: ನ್ಯಾ. ನಾಗಮೋಹನ್ನಾಗಮೋಹನ್ ದಾಸ್ ಸಮಿತಿ ವರದಿ ಜಾರಿಗೆ ಕರ್ನಾಟಕ ಸರ್ವ ಪಕ್ಷ ಒಪ್ಪಿಗೆ
ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ಜಾರಿ ಮಾಡಲು ಒಪ್ಪಿಕೊಂಡ ಕರ್ನಾಟಕ ಸರ್ಕಾರ
ಸರ್ವ ಪಕ್ಷಗಳ ಸಮ್ಮತಿ ಮೇರೆಗೆ ಶೆಡ್ಯೂಲ್ 9ರ ಮೂಲಕ ಜಾರಿ ಮಾಡಲು ತೀರ್ಮಾನ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC-ST) ಸೇರಿದ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮಹತ್ವದ ತೀರ್ಮಾನವನ್ನು ಕರ್ನಾಟಕ ಸರ್ಕಾರ ಮಾಡಿದೆ.
"SC ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಹೆಚ್ಚಿಸಲು ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ಶಿಫಾರಸು ಮಾಡಿದೆ. ಹಾಗೆಯೇ, ST ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. STಗೆ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ 7.5ರಷ್ಟು ನಿಗದಿಪಡಿಸಬೇಕು ಎಂದು ವಾಲ್ಮೀಕಿ ಸಮುದಾಯ ಹೋರಾಟ ನಡೆಸುತ್ತಿದೆ. ಸರ್ವಪಕ್ಷ ಸಭೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ಜಾರಿ ಒಮ್ಮತದಿಂದ ಒಪ್ಪಿಕೊಂಡಿದ್ದು, ಸರ್ಕಾರ ವರದಿಯನ್ನು ಜಾರಿಗೊಳಿಸಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
"SC, ST ಮೀಸಲಾತಿ ಪ್ರಮಾಣ ಹೆಚ್ಚಿಸುವ ಹಾಗೂ ಎರಡೂ ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನ ದಾಸ್ ಆಯೋಗ ಹಾಗೂ ನ್ಯಾಯಮೂರ್ತಿ ಸುಭಾಷ್ ಅಡಿ ನೇತೃತ್ವದ ಸಮಿತಿಗಳ ಶಿಫಾರಸುಗಳನ್ನೂ ಒಪ್ಪಿಕೊಳ್ಳಲಾಗಿದೆ” ಎಂದರು.
"ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಳ ಅಧಿವೇಶನದಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ, ಮೀಸಲಾತಿ ಪ್ರಮಾಣ ಶೇಕಡ 50 ಮೀರುವಂತಿಲ್ಲ. ಸಂವಿಧಾನದ ಪರಿಚ್ಚೇದ 9ರ ವ್ಯಾಪ್ತಿಗೆ ಕರ್ನಾಟಕದ ಮೀಸಲಾತಿ ವಿಷಯವನ್ನು ಸೇರಿಸಿದರೆ ನ್ಯಾಯಾಲಯದ ಪರಿಶೀಲನೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯ" ಎಂದು ಸಿಎಂ ತಿಳಿಸಿದರು.
SC, ST ಸಮುದಾಯಗಳ ಜನರ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡಲು ವರದಿ ಸೂಚಿಸಿದೆ. ಇದನ್ನು ಸೇರಿದಂತೆ ನ್ಯಾ. ನಾಗಮೋಹನ್ ದಾಸ್ ವರದಿಯ ಬಹುತೇಕ ಶಿಫಾರಸುಗಳಿಗೆ ಸರ್ವ ಪಕ್ಷ ಸಮ್ಮತಿ ಸೂಚಿಸಿದೆ.
ಮೀಸಲಾತಿ ಶೇ. 50 ಮೀರಿದರೆ ಕೋರ್ಟ್ ತಕರಾರು ತೆಗೆಯುತ್ತದೆ. ರಾಜ್ಯಗಳಲ್ಲಿ ಮೀಸಲಾತಿ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಹಾಗಿದ್ದರೂ, ಕೆಲ ರಾಜ್ಯಗಳು ಈ ವಿಷಯದಲ್ಲಿ ಪರಿಹಾರ ಕಂಡುಕೊಂಡಿವೆ. ತಮಿಳು ನಾಡು ಶೇ. 69 ಮೀಸಲಾತಿ ಜಾರಿ ಮಾಡಿದೆ. ಕರ್ನಾಟಕ ಕೂಡ ಶೆಡ್ಯೂಲ್ 9 ಮೂಲಕ ಮೀಸಲಾತಿ ಜಾರಿ ತರಲಿದೆ.
"ನ್ಯಾ ನಾಗಮೋಹನ್ ದಾಸ್ ವರದಿ ಅನುಷ್ಠಾನ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಎಲ್ಲ ನಾಯಕರ ಸಲಹೆ ಪಡೆದು ಈ ತೀರ್ಮಾನಕ್ಕೆ ಬರಲಾಗಿದೆ.
ಇದನ್ನೂ ಓದಿ
SC, ST ದೌರ್ಜನ್ಯ ತಡೆ ಕಾಯ್ದೆ: ಬಹಿರಂಗ ನಿಂದನೆ ಇದ್ದರೆ ಮಾತ್ರ ಅಪರಾಧ: ಕರ್ನಾಟಕ ಹೈಕೋರ್ಟ್