ಜಿಲ್ಲಾ ನ್ಯಾಯಾಧೀಶರು ಅಧೀನ ಜಡ್ಜ್‌ಗಳಲ್ಲ, ಅವರನ್ನೂ ಸಮಾನರಂತೆ ಪರಿಗಣಿಸಿ: ಸಿಜೆಐ ಚಂದ್ರಚೂಡ್
ಜಿಲ್ಲಾ ನ್ಯಾಯಾಧೀಶರು ಅಧೀನ ಜಡ್ಜ್‌ಗಳಲ್ಲ, ಅವರನ್ನೂ ಸಮಾನರಂತೆ ಪರಿಗಣಿಸಿ: ಸಿಜೆಐ ಚಂದ್ರಚೂಡ್
ದೇಶದ ಎಲ್ಲೆಡೆ ಡಿಸ್ಟ್ರಿಕ್ಟ್ ಕೋರ್ಟ್‌ಗಳಲ್ಲಿ ನ್ಯಾಯಾಂಗ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ನ್ಯಾಯಾಧೀಶರು ಅಧೀನ ಜಡ್ಜ್‌ಗಳಲ್ಲ, ಅವರನ್ನೂ ಸಮಾನರಂತೆ ಪರಿಗಣಿಸಿ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಿಜೆಐ ಡಿ.ವೈ. ಚಂದ್ರಚೂಡ್ ಕರೆ ನೀಡಿದ್ದಾರೆ.
ಬಹುತೇಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಜಿಲ್ಲಾ ನ್ಯಾಯಾಲಯದ ಜಡ್ಜರ ಬಗ್ಗೆ ಉಪೇಕ್ಷೆ ಇದೆ. ಅವರು ಅಧೀನ ಜಡ್ಜ್ ಎಂಬಂತೆ ಪರಿಗಣಿಸಲಾಗುತ್ತಿದೆ. ಅದು ಸಲ್ಲದು. ಅವರೂ ನಮಗೆ ಸಮಾನರು ಎಂಬಂತೆ ಪರಿಗಣಿಸಿ ಎಂದು ಅವರು ಕರೆ ನೀಡಿದ್ದಾರೆ.
ಉನ್ನತ ಸ್ಥರದಲ್ಲಿ ಜಿಲ್ಲಾ ನ್ಯಾಯಾಧೀಶರನ್ನು ಅಧೀನರು ಎಂಬಂತೆ ಕರೆಯುವ ಪದ್ಧತಿ ಇದೆ. ನಾನು ಅದನ್ನು ಉದ್ದೇಶಪೂರ್ವಕವಾಗಿ ಅವಾಯ್ಡ್ ಮಾಡುತ್ತೇನೆ. ಏಕೆಂದರೆ, ಅವರು ಅಧೀನ ಜಡ್ಜ್‌ಗಳಲ್ಲ. ಅವರು ಜಿಲ್ಲಾ ನ್ಯಾಯಾಂಗಕ್ಕೆ ಸೇರಿದವರು ಎಂದು ಚಂದ್ರಚೂಡ್ ಹೇಳಿದರು.
ಕೆಲವೆಡೆ, ಹೈಕೋರ್ಡ್ ನ್ಯಾಯಾಧೀಶರು ಡೈನಿಂಗ್ ಮಾಡುವಾಗ ಜಿಲ್ಲಾ ನ್ಯಾಯಾಧೀಶರು ನಿಂತಿರುವುದನ್ನು ನೋಡಿದ್ದೇನೆ. ಕೆಲವೊಂದು ಸಂದರ್ಭದಲ್ಲಿ, ಅವರೇ ಬಡಿಸುವಂತಹ ಅತಿರೇಕದ ಸಂಗತಿಯೂ ನಡೆದಿದೆ. ಇದು ಸರಿಯಲ್ಲ. ಅವರು ನಮ್ಮಂತೆ ಒಟ್ಟಿಗೆ ಕುಳಿತು ಊಟ, ತಿಂಡಿ ಸೇವಿಸುವಂತಾಗಬೇಕು ಎಂದು ಸಿಜೆಐ ಅಭಿಪ್ರಾಯಪಟ್ಟರು.
ಕೆಲವು ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಕುಳಿತುಕೊಳ್ಳಲೂ ಹೆದರುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ದೇಶದ ವಿವಿಧೆಡೆ ಪ್ರವಾಸ ಮಾಡುವ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಗಡಿಭಾಗದಲ್ಲಿ ಅವರನ್ನು ಸ್ವೀಕರಿಸಲು ಹಾರ, ತುರಾಯಿ ಇಟ್ಟುಕೊಂಡು ಕಾಯುವುದನ್ನೂ ನೋಡಿದ್ದೇವೆ. ಇದೆಲ್ಲ ನಮ್ಮ ವಸಾಹತುಶಾಹಿ ಮನೋಭಾವವನ್ನು ತೋರಿಸುತ್ತವೆ ಎಂದು ಚಂದ್ರಚೂಡ್ ಅತೀವ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ
NI Act : ಹೆಚ್ಚುವರಿ ಆರೋಪಿಯ ಸೇರ್ಪಡೆ ಕಾಗ್ನಿಜೆನ್ಸ್ ಮುನ್ನ ಮಾತ್ರ ಅವಕಾಶ: ಸುಪ್ರೀಂ ಕೋರ್ಟ್
ಕ್ಯಾರಿ ಬ್ಯಾಗಿಗೆ 24 ರೂ.: ಗ್ರಾಹಕನಿಗೆ 7000 ರೂ. ಪರಿಹಾರ ನೀಡಲು ರಿಲಯನ್ಸ್ ರಿಟೇಲ್‌ಗೆ ಆದೇಶ