ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
ನ್ಯಾಯಾಲಯ ಕಲಾಪದಲ್ಲಿ ವಿಚಾರಣೆಯನ್ನು ವಿಳಂಬ ಮಾಡಿದ್ದಾರೆ ಎಂಬ ಕಾರಣಕ್ಕೆ ನ್ಯಾಯಾಧೀಶರನ್ನೇ ಚಾಕು ತೋರಿಸಿ ಬೆದರಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಇಲ್ಲಿ ಬರ್ಹಾಂಪುರ ನ್ಯಾಯಾಲಯದಲ್ಲಿ ಆರೋಪಿಯೊಬ್ಬ ಮಾರಕಾಸ್ತ್ರ ತೋರಿಸಿ ನ್ಯಾಯಾಧೀಶರನ್ನು ಬೆದರಿಸಿದ್ದು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಮಧ್ಯಪ್ರವೇಶದಿಂದ ನ್ಯಾಯಾಧೀಶರು ಅಪಾಯವಿಲ್ಲದೆ ಪಾರಾಗಿದ್ದಾರೆ.
51 ವರ್ಷದ ಭಗವಾನ್ ಸಾಹು ನ್ಯಾಯಾಲಯದಲ್ಲಿ ಈ ಕೃತ್ಯ ಎಸಗಿದ್ದು, ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ತನ್ನ ವಿರುದ್ಧ ದಾಖಲಾಗಿರುವ 4 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ತಡವಾಗಿ ನಡೆಯುತ್ತಿದ್ದು, ವಿಚಾರಣೆ ವಿಳಂಬಗೊಂಡಿರುವ ಕಾರಣ ಆಕ್ರೋಶಿತನಾದ ಆರೋಪಿ ಭಗವಾನ್, ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ್ಧಾನೆ.
ಕೋರ್ಟ್ ಕಲಾಪದಲ್ಲಿ ಭಾಗಿಯಾಗಿರುವ ಕೆಲ ವಕೀಲರು ಮತ್ತು ಕೋರ್ಟ್ ಸಿಬ್ಬಂದಿ ತಕ್ಷಣ ಆರೋಪಿಯನ್ನು ಹಲ್ಲೆ ನಡೆಸದಂತೆ ತಡೆದಿದ್ದಾರೆ. ವಕೀಲರು ನೀಡಿದ ಮಾಹಿತಿಯಂತೆ ಆರೋಪಿಯನ್ನು ತಕ್ಷಣ ಪೊಲೀಸರು ಬಂಧಿಸಿದ್ದಾರೆ.
ಉಪ ವಿಭಾಗೀಯ ನ್ಯಾಯಿಕ ದಂಡಾಧಿಕಾರಿ ಪ್ರಂಗ್ಯಾ ಪರಿಮಿತ ಪರಿಹಾರಿ ದಾಳಿಗೆ ಒಳಗಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿ ವಿರುದ್ಧ ಮಹಿಳೆಯರ ವಿರುದ್ಧ ದೌರ್ಜನ್ಯ, ಕೊಲೆ ಯತ್ನ, ಸುಲಿಗೆ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ ವಿಚಾರಣೆ ಮಾನ್ಯ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.
ಇದನ್ನೂ ಓದಿ
ಬೀಳ್ಕೊಡುಗೆ ಸಮಾಂಭದಲ್ಲಿ ಜಡ್ಜ್ ಸಾಹೇಬರ ನಾಗಿನ್ ಡ್ಯಾನ್ಸ್: ಜಡ್ಜ್, ಕೋರ್ಟ್ ಸಿಬ್ಬಂದಿ ಸಸ್ಪೆಂಡ್
ವಯೋವೃದ್ಧ ಮನೆ ಬಾಗಿಲಿಗೆ ತೆರಳಿ ಮನವಿ ಸ್ವೀಕರಿಸಿ ನ್ಯಾಯಾಧೀಶರು
ಲಾಯರ್ ಫೀಸಿಗೂ ಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ; ಕೇಸು ಗುಣವಾಗದಿದ್ದರೆ ಅದು ವಕೀಲರ ನಂಬಿಕೆ ದ್ರೋಹವಲ್ಲ