ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಿಜೆಐ ಕಟ್ಟುನಿಟ್ಟಿನ ನಿಯಮ: 13 ನ್ಯಾಯಪೀಠಕ್ಕೆ ತಲಾ 20 ಪ್ರಕರಣಗಳ ಕಡ್ಡಾಯ ತೀರ್ಮಾನದ ಹೊಣೆ
ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಿಜೆಐ ಕಟ್ಟುನಿಟ್ಟಿನ ನಿಯಮ: 13 ನ್ಯಾಯಪೀಠಕ್ಕೆ ತಲಾ 20 ಪ್ರಕರಣಗಳ ಕಡ್ಡಾಯ ತೀರ್ಮಾನದ ಹೊಣೆ
ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವ ಜಾಮೀನು ಪ್ರಕರಣಗಳು ಮತ್ತು ವರ್ಗಾವಣೆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಡಿವೈ ಚಂದ್ರಚೂಡ್ ನೂತನ ನಿಯಮವನ್ನು ಜಾರಿಗೊಳಿಸಿದ್ದಾರೆ.
ಸುಪ್ರೀಂ ಕೋರ್ಟಿನ 13 ಪೀಠಗಳು ಇನ್ನು ಮುಂದೆ ಪ್ರತಿ ದಿನ 10 ಜಾಮೀನು ಅರ್ಜಿಗಳನ್ನು ಹಾಗೂ 10 ವರ್ಗಾವಣೆ ಪ್ರಕರಣಗಳನ್ನು ತೀರ್ಮಾನಿಸಬೇಕು ಎಂದು ಸಿಜೆಐ ತಾಕೀತು ಮಾಡಿದ್ದಾರೆ.
ಇದರಿಂದ ಪ್ರತಿ ದಿನ 130 ಪ್ರಕರಣಗಳು ಇತ್ಯರ್ಥಗೊಳ್ಳಲಿದ್ದು, ವಾರದಲ್ಲಿ ಜಾಮೀನು ಪ್ರಕರಣಗಳು ಮತ್ತು ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದ 650 ಪ್ರಕರಣಗಳು ತೀರ್ಮಾನವಾಗಲಿದೆ. ಅದರಲ್ಲೂ ಜಾಮೀನು ಪ್ರಕರಣಗಳಿಗೆ ಆದ್ಯತೆ ನೀಡಲಾಗುತ್ತದೆ.
ಪ್ರಸ್ತುತ ಸುಪ್ರೀಂ ಕೋರ್ಟಿನಲ್ಲಿ 13 ಸಾವಿರ ವರ್ಗಾವಣೆ ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ.
ಪೂರಕ ಪಟ್ಟಿಯನ್ನು ಕಡಿಮೆ ಮಾಡಿ, ಆದ್ಯತೆ ಪ್ರಕರಣಗಳನ್ನು ನ್ಯಾಯಪೀಠದ ಮುಂದೆ ಪಟ್ಟಿ ಮಾಡಲಾಗುತ್ತದೆ. ಇದು ಸಿಜೆಐ ಸೂಚನೆಯ ಮೇರೆಗೆ ಮಾಡಲಾಗುತ್ತದೆ ಎಂದು ನ್ಯಾಯಾಂಗ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
---