ನ್ಯಾಯಾಲಯದ ಭಾಷೆ ಇಂಗ್ಲಿಷ್ ಎಂದ ಸುಪ್ರೀಂ ಕೋರ್ಟ್; ಹಿಂದಿಯಲ್ಲಿ ವಾದ ಆಲಿಸದ ನ್ಯಾಯಪೀಠ
ನ್ಯಾಯಾಲಯದ ಭಾಷೆ ಇಂಗ್ಲಿಷ್ ಎಂದ ಸುಪ್ರೀಂ ಕೋರ್ಟ್; ಹಿಂದಿಯಲ್ಲಿ ವಾದ ಆಲಿಸದ ನ್ಯಾಯಪೀಠ
ಸುಪ್ರೀಂ ಕೋರ್ಟ್‌ನಲ್ಲಿ ಇಂಗ್ಲಿಷ್ ಕಡ್ಡಾಯ. ನ್ಯಾಯಾಲಯದ ಭಾಷೆ ಇಂಗ್ಲಿಷ್ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಹಿರಿಯ ನಾಗರಿಕರೊಬ್ಬರು ಹಿಂದಿಯಲ್ಲಿ ವಾದ ಮಂಡಿಸಲು ಮುಂದಾದಾಗ ನ್ಯಾ. ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ದ್ವಿಸದಸ್ಯ ಪೀಠ ಈ ವಿಷಯ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಭಾಷೆ ಇಂಗ್ಲಿಷ್ ಆಗಿದೆ. ನಮಗೆ ನೀವು ಏನು ಹೇಳುತ್ತಿದ್ದೀರಿ ಎಂಬುದು ಅರ್ಥ ಆಗುತ್ತಿಲ್ಲ. ನೀವು ಒಪ್ಪುವುದಾದರೆ ನಾವೇ ವಕೀಲರನ್ನು ಒದಗಿಸುತ್ತೇವೆ ಎಂದು ಅರ್ಜಿದಾರರಿಗೆ ನ್ಯಾಯಪೀಠ ಸಲಹೆ ನೀಡಿತು.
ದೇಶದ ಹಲವು ನ್ಯಾಯಾಗಳಲ್ಲಿ ಅರ್ಜಿಯ ವಿಚಾರಣೆ ಆಗಿದೆ. ಆದರೆ, ಎಲ್ಲೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಅರ್ಜಿದಾರರು ಹಿಂದಿಯಲ್ಲಿ ವಾದ ಮಂಡಿಸಲು ಮುಂದಾಗಿದ್ದರು. ಆಗ ನ್ಯಾಯಪೀಠ ಈ ವಿಷಯ ಸ್ಪಷ್ಟಪಡಿಸಿತ್ತು.
ವಕೀಲರನ್ನು ಒದಗಿಸುವ ನ್ಯಾಯಪೀಠದ ಪ್ರಸ್ತಾಪವನ್ನು ಅರ್ಜಿದಾರರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಾದ ಅರ್ಜಿದಾರರಿಗೆ ಅವರ ಪರ ವಾದ ಮಂಡಿಸಲು ವಕೀಲರೊಬ್ಬರನ್ನು ಸ್ಥಳದಲ್ಲೇ ನೇಮಿಸಲಾಯಿತು.
ನ್ಯಾಯಾಧೀಶರ ಹುದ್ದೆಗೆ ನೇಮಕಾತಿ: ಅರ್ಹ ವಕೀಲರ ಕೊರತೆ: ಸುಪ್ರೀಂ ಕೋರ್ಟ್ ಬೇಸರ
ಕಿವುಡರು, ದೃಷ್ಟಿಹೀನರೂ ನ್ಯಾಯಾಧೀಶರಾಗಲು ಸಾಧ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
..