-->
Consumer Case: ಗ್ರಾಹಕ ವ್ಯಾಜ್ಯಗಳ ಶೀಘ್ರ ವಿಲೇವಾರಿ: ನಿತ್ಯ ಕಲಾಪ ನಡೆಸಿ- ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಿದ ಹೈಕೋರ್ಟ್

Consumer Case: ಗ್ರಾಹಕ ವ್ಯಾಜ್ಯಗಳ ಶೀಘ್ರ ವಿಲೇವಾರಿ: ನಿತ್ಯ ಕಲಾಪ ನಡೆಸಿ- ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಿದ ಹೈಕೋರ್ಟ್

ಗ್ರಾಹಕ ವ್ಯಾಜ್ಯಗಳ ಶೀಘ್ರ ವಿಲೇವಾರಿ: ನಿತ್ಯ ಕಲಾಪ ನಡೆಸಿ- ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಿದ ಹೈಕೋರ್ಟ್





ದೆಹಲಿಯಲ್ಲಿ ಗ್ರಾಹಕ ವಿವಾದಗಳ ಪ್ರಕರಣಗಳು ವರ್ಷಗಟ್ಟಲೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಕಲಾಪ ನಡೆಸುವಂತೆ ವ್ಯಾಜ್ಯಗಳ ಪಟ್ಟಿ ಮಾಡಲು ಜಿಲ್ಲಾ ಗ್ರಾಹಕರ ಆಯೋಗದ ರಿಜಿಸ್ಟ್ರಾರ್‌ಗಳಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.



ದೆಹಲಿಯ ಜನಕಪುರಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ 2007ರಿಂದ ಯಾವುದೇ ಪ್ರಕರಣವನ್ನು ಇತ್ಯರ್ಥ ಮಾಡಿಲ್ಲ ಎಂಬ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಸಿಂಗ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.



ದೆಹಲಿಯ ಜಿಲ್ಲಾ ಗ್ರಾಹಕರ ವೇದಿಕೆಗಳಲ್ಲಿ 9,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಕೆಲವು ಜಿಲ್ಲೆಗಳಲ್ಲಿ ಗ್ರಾಹಕರ ವ್ಯಾಜ್ಯಗಳ ಫಸ್ಟ್ ಹಿಯರಿಂಗ್ ಕೂಡ ನಡೆದಿಲ್ಲ. ಈ ರೀತಿಯಾದರೆ ಗ್ರಾಹಕರ ಹಕ್ಕುಗಳಿಗೆ ದೊಡ್ಡ ಪ್ರಮಾಣದ ಬಾಧೆ ಉಂಟಾಗುತ್ತದೆ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.



ಈ ಹಿನ್ನೆಲೆಯಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಕೇಸು ದಾಖಲಾದ ದಿನವನ್ನು ಆಧರಿಸಿ ಪ್ರತಿನಿತ್ಯ ಮಧ್ಯಾಹ್ನ 2-30ಕ್ಕೆ ವಿಚಾರಣೆಗೆ ಅಂತಿಮ ವಿಷಯಗಳ ಪಟ್ಟಿ ಮಾಡಲು ಜಿಲ್ಲಾ ಗ್ರಾಹಕರ ವೇದಿಕೆಗಳ ರಿಜಿಸ್ಟ್ರಾರ್‌ಗಳಿಗೆ ಹೈಕೋರ್ಟ್ ಆದೇಶ ನೀಡಿದೆ.



ಹಳೆಯ ಪ್ರಕರಣಗಳಿಂದ ಪ್ರಾರಂಭಿಸಿ, ಕಾಲಕ್ರಮದಂತೆ ಪ್ರಕರಣಗಳ ಪಟ್ಟಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ, ಈ ಪ್ರಕರಣಗಳನ್ನು ಕಾರಣ ಪಟ್ಟಿಯಲ್ಲಿ ಮುಂಚಿತವಾಗಿ ಪ್ರಕಟಿಸಬೇಕು ಹಾಗೂ ಸಂಬಂಧಪಟ್ಟ ವಕೀಲರು ಮತ್ತು ದೂರುದಾರರಿಗೆ ಕಲಾಪ ನಡೆಯುವ ದಿನಾಂಕವನ್ನು ಮುಂಚಿತವಾಗಿ ತಿಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.



ಪ್ರಕರಣಗಳ ವಿಲೇವಾರಿ ಕುರಿತ ಮಾಸಿಕ ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸುವಂತೆ ಗ್ರಾಹಕರ ವೇದಿಕೆಗಳ ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.



ಲಭ್ಯ ಇರುವ ಡಾಟಾ ಪ್ರಕಾರ, ದೆಹಲಿಯ 10 ಜಿಲ್ಲಾ ಗ್ರಾಹಕರ ವೇದಿಕೆಗಳಲ್ಲಿ 9,181 ಪ್ರಕರಣಗಳು "ಸಾಕ್ಷಾಧಾರಗಳ ದಾಖಲೀಕರಣದ ನಂತರ ಅಂತಿಮ ವಾದಕ್ಕೆ" ಬಾಕಿ ಉಳಿದಿವೆ. ಈ ಪೈಕಿ ನೈಋತ್ಯ ಜಿಲ್ಲೆ ಅಂತಹ 2,827 ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದೆ.



Dispose the Consumer Case at Earliest- Delhi High Court Directs Consumer Forum

Ads on article

Advertise in articles 1

advertising articles 2

Advertise under the article