ರೂಲ್ಸ್ ಬ್ರೇಕ್ ತಡೆಗೆ ಪೊಲೀಸರು ಫೈಲ್: ಫೀಲ್ಡಿಗಿಳಿದು ಫೈನ್ ಹಾಕಿದ ಜಡ್ಜ್ ಸಾಹೇಬರು!
ರೂಲ್ಸ್ ಬ್ರೇಕ್ ತಡೆಗೆ ಪೊಲೀಸರು ಫೈಲ್: ಫೀಲ್ಡಿಗಿಳಿದು ಫೈನ್ ಹಾಕಿದ ಜಡ್ಜ್ ಸಾಹೇಬರು!
ಅತಿಯಾದ ಟ್ರಾಫಿಕ್ ಸಮಸ್ಯೆ ಸಂದರ್ಭದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಕೇಸು ಹಾಕಲು ಪೊಲೀಸರು ವಿಫಲರಾದಾಗ ಸ್ವತಃ ನ್ಯಾಯಾಧೀಶರೇ ಫೀಲ್ಡ್‌ಗೆ ಇಳಿದು ದಂಡ ಹಾಕಿದ ಅಪರೂಪದ ಪ್ರಸಂಗ ಕರ್ನಾಟಕದ ಗ್ರಾಮವೊಂದರಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಜಡ್ಜ್ ಸಾಹೇಬರೇ ಫೀಲ್ಡ್‌ಗೆ ಇಳಿದು ದಂಡ ಹಾಕಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಗುಬ್ಬಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳ ಹುಂಡಿ ಶಿವಪ್ಪ ಅವರು ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುವ ದಿಟ್ಟ ನಿರ್ಧಾರ ಕೈಗೊಂಡವರು.
ಪೊಲೀಸರ ಅಸಹಾಯಕತೆ ಕಂಡು ಜಡ್ಜ್ ಆಗಿರುವ ಮಂಜುಳಾ ಸ್ವತಃ ರಸ್ತೆಗೆ ಇಳಿದು ಅಪ್ರಾಪ್ತ ಬೈಕ್ ಸವಾರರನ್ನು ಹಿಡಿದು ದಂಡ ಹಾಕಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ದಿನ ಬೆಳಗಾದರೆ ಬೈಕ್ ಸವಾರರು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದರು. ಕೆಲವೊಮ್ಮೆ ಅಪ್ರಾಪ್ತ ವಯಸ್ಕರೂ ಈ ದುಷ್ಕೃತ್ಯಕ್ಕೆ ಇಳಿಯುತ್ತಿದ್ದರು. ಅಪ್ರಾಪ್ತರಿಗೆ ಬೈಕ್ ಯಾ ಕಾರು ನೀಡುವ ಪೋಷಕರು ಇನ್ಮುಂದೆ ಎಚ್ಚರವಾಗೋದು ಒಳಿತು.
ಇದನ್ನೂ ಓದಿ
ಜಡ್ಜ್ ಸಾಹೇಬರ ಸಖತ್ ಸ್ಟೆಪ್ಸ್: ನಾಗಿನ್ ಡ್ಯಾನ್ಸ್ ಮಾಡಿದ ಜಡ್ಜ್, ಸಿಬ್ಬಂದಿ ಅಮಾನತು
...