-->
ವ್ಯಕ್ತಿಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು ಕಾರಣ ವಿವರಿಸಿ ದಾಖಲೆ ನೀಡಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ

ವ್ಯಕ್ತಿಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು ಕಾರಣ ವಿವರಿಸಿ ದಾಖಲೆ ನೀಡಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ

ವ್ಯಕ್ತಿಯ ಬಂಧನದ ವೇಳೆ ಪೊಲೀಸ್ ಅಧಿಕಾರಿಗಳು ಕಾರಣ ವಿವರಿಸಿ ದಾಖಲೆ ನೀಡಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ





ಯಾವುದೇ ವ್ಯಕ್ತಿಯನ್ನು ಬಂಧಿಸುವುದಕ್ಕೆ ಮುನ್ನ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಮತ್ತು ಯಾವ ಕಾರಣಕ್ಕೆ ಈ ಬಂಧನ ಎಂಬ ಬಗ್ಗೆ ಸೂಕ್ತ ದಾಖಲೆಯನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.



ಒಂದು ವೇಳೆ, ಯಾವುದೇ ಕಾರಣ ನೀಡದೆ ವ್ಯಕ್ತಿಯನ್ನು ಬಂಧಿಸಿದರೆ, ಆ ವ್ಯಕ್ತಿಯ ಪರಿಣಾಮಕಾರಿ ಪ್ರಾತಿನಿಧ್ಯ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ನ್ಯಾ. ಅಜಯ್ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.



ಮಣಿಪುರ ಪೊಲೀಸರು ಅಬ್ದುಲ್ ಹನಾನ್ ಎಂಬಾತನನ್ನು ಎನ್‌ಡಿಪಿಎಸ್(ಮಾದಕ ದ್ರವ್ಯ ಕಳ್ಳಸಾಗಣೆ) ಕಾಯ್ದೆಯಡಿ ಬಂಧಿಸಿದ್ದರು.



ಈ ಬಂಧನವನ್ನು ಪ್ರಶ್ನಿಸಿ ಅಬ್ದುಲ್ ಹನ್ನಾನ್ ಹೈಕೋರ್ಟ್ ಮೆಟ್ಟಿಲೇರಿದ್ದ. ಬಂಧನದ ಸಮಯದಲ್ಲಿ, ತನಗೆ ಅಧಿಕಾರಿಗಳು ಯಾವ ಕಾರಣಕ್ಕಾಗಿ ನನ್ನನ್ನು ಬಂಧಿಸಲಾಗುತ್ತಿದೆ ಎಂಬ ಕುರಿತು ದಾಖಲೆಯನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದರು. ಹನ್ನಾನ್ ಅವರ ಈ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿತ್ತು.



ಹೈಕೋರ್ಟ್ ತೀರ್ಪು ವಿರುದ್ಧ ಮಣಿಪುರ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕಾನೂನಿನಡಿ ನಿಗದಿಪಡಿಸಲಾಗಿರುವ ಕ್ರಮಗಳನ್ನು ಅನಸರಿಸುವುದು ಪೊಲೀಸರ ಕರ್ತವ್ಯ. ಈ ಕಾನೂನಿನ ಕ್ರಮವನ್ನು ಅನುಸರಿಸದೆ ವ್ಯಕ್ತಿಯನ್ನು ಬಂಧಿಸುವ ಮೂಲಕ ತಾತ್ಕಾಲಿಕವಾಗಿಯೂ ಆತನ ಹಕ್ಕನ್ನು ಉಲ್ಲಂಘಿಸಬಾರದು ಎಂದು ನ್ಯಾಯಪೀಠ ಪೊಲೀಸರಿಗೆ ಹೇಳಿದೆ.



Ads on article

Advertise in articles 1

advertising articles 2

Advertise under the article