-->
ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತರಿಗೂ ಹಕ್ಕುಪತ್ರ: ಸರ್ಕಾರ ಮಹತ್ವದ ಸುತ್ತೋಲೆ

ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತರಿಗೂ ಹಕ್ಕುಪತ್ರ: ಸರ್ಕಾರ ಮಹತ್ವದ ಸುತ್ತೋಲೆ

ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತರಿಗೂ ಹಕ್ಕುಪತ್ರ: ಸರ್ಕಾರ ಮಹತ್ವದ ಸುತ್ತೋಲೆ





ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತರಿಗೂ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.


ಸುತ್ತೋಲೆ: ಕಂಇ 08 ಸಿಸಿಆರ್‌ವಿ 2022 Dated 8-11-2022


ರಾಜ್ಯದಲ್ಲಿ ನೆಲೆಸಿರುವ ಜನವಸತಿಗಳಿಗೂ ವಾಸ್ತವ್ಯದ ಹಕ್ಕು ದಾಖಲೆಗಳನ್ನು ಒದಗಿಸಿ ಅಂತಹ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮುಖ್ಯ ಉದ್ದೇಶದಿಂದ ಈ ಸುತ್ತೋಲೆ ಹೊರಡಿಸಲಾಗಿದೆ.



ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೊನಿಗಳ ಹೆಸರಿನಿಂದ ಗುರುತಿಲ್ಪಟ್ಟಿರುವ ಜನವಸತಿಗಳೂ ಈ ಸುತ್ತೋಲೆಯ ವ್ಯಾಪ್ತಿಗೆ ಬರುತ್ತದೆ.



ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38-ಎ ಮತ್ತು ನಿಯಮ 9 ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಸಿರುವ ದಾಖಲೆರಹಿತರಿಗೆ ಹಕ್ಕುಪತ್ರ ನೀಡುವ ಅವಕಾಶ ಕಲ್ಪಿಸಲಾಗಿದೆ.



ಇದಕ್ಕಾಗಿ ಸುತ್ತೋಲೆಯಲ್ಲಿ ವಿಧಿಸಲಾದ ಮಾನದಂಡ ಹೀಗಿದೆ.


1- ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಮಾನದಂಡದ ಅನ್ವಯ ಸರ್ವೇ ನಂಬರ್ ಮತ್ತು ವಿಸ್ತೀರ್ಣ ಗುರುತಿಸುವುದು


2- ಜಿಲ್ಲಾಧಿಕಾರಿಗಳು ಈ ಜನವಸತಿಗಳು ನೆಲೆಗೊಂಡಿರುವ ಜಾಗಗಳನ್ನು ಸರ್ಕಾರದಲ್ಲಿ ನಿಹಿತಗೊಳಿಸಲು ಭೂಸುಧಾರಣಾ ಕಾಯ್ದೆ ಕಲಂ 38ಎ ಪ್ರಕಾರ ಅಧಿಸೂಚನೆ ನಮೂನೆ ೨ಇ ಯಲ್ಲಿ ಹೊರಡಿಸಬೇಕು


3- ಸಾರ್ವಜನಿಕರ ಆಕ್ಷೇಪಣೆ/ಸಲಹೆ ಆಹ್ವಾನಿಸಿ ಜಿಲ್ಲಾಧಿಕಾರಿಗಳ ಹಂತದಲ್ಲೇ ಡಿಸಿ ಹೆಸರಿನಲ್ಲಿ ರಾಜ್ಯಪತ್ರ ಹೊರಡಿಸಿವುದು


4 ದಾಖಲೆ ರಹಿತ ಜನವಸತಿ ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2E ಅಧಿಸೂಚನೆ ಹೊರಡಿಸಬೇಕು. ಖಾಸಗಿ ಹೆಸರಿನ ಜಾಗದಲ್ಲಿ ಭೂಮಾಲೀಕರೇ ಸ್ವತಃ ಮನೆ ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು ೨-ಇ ಅಧಿಸೂಚನೆಯಲ್ಲಿ ತರಬಾರದು. ಆದರೆ, ಗ್ರಾಮ ಠಾಣಾ ವಿಸ್ತೀರ್ಣಕ್ಕೆ ಒಳಪಡಿಸಬೇಕು


5- 2ಇ ಅಧಿಸೂಚನೆ ಸಂಬಂಧ ಸಲಹೆ ಯಾ ಆಕ್ಷೇಪಣೆ ನಿಗದಿತ ಅವಧಿಯೊಳಗೆ ಸ್ವೀಕಾರವಾದರೆ ಅಂತಹ ಸಲಹೆ-ಆಕ್ಷೇಪಣೆಗಳನ್ನು ಪರಿಶೀಲಿಸಬೇಕು. ಸೂಕ್ತ ಲಿಖಿತ ಆದೇಶದೊಂದಿಗೆ ಆಕ್ಷೇಪಣೆ ಒಪ್ಪಬಹುದು ಯಾ ತಿರಸ್ಕರಿಸಬಹುದು.


6- ಮ್ಯೂಟೇಷನ್ ಮೂಲಕ ಖಾಸಗಿ ಜಮೀನನ್ನು ಸರ್ಕಾರಕ್ಕೆ ನಿಹಿತಗೊಳಿಸಬೇಕು. ಅಂದರೆ ಕಲಂ-9ರಲ್ಲಿ ಭೂಮಾಲೀಕರ ಹೆಸರನ್ನು ತೆಗೆದು ಸರ್ಕಾರ ಎಂದು ನಮೂದಿಸಬೇಕು. 2E ಅಧಿಸೂಚನೆ ಹೊರಡಿಸಿರುವ ವಿಸ್ತೀರ್ಣಕ್ಕೆ ಮಾತ್ರ ಪಹಣಿ ಇಂಡೀಕರಿಸಬೇಕು.


7- ಪಹಣಿ ಇಂಡೀಕರಣ ಆದ ನಂತರ ಖಾಸಗಿ ಜಾಗದಲ್ಲಿ ನೆಲೆಸಿರುವ ನಿವಾಸಿಗಳು ಸಹಾಯಕ ಆಯುಕ್ತರು ಯಾ ತಹಶೀಲ್ದಾರ್ ಅವರಿಗೆ ಮನೆ ಮತ್ತು ಅದಕ್ಕೆ ಸೇರಿದ ಭೂಮಿಗೆ ಮಾಲಕರಾಗಿ ನೋಂದಾಯಿಸಲು ಅರ್ಜಿ ಸಲ್ಲಿಸಬಹುದು. (ನಮೂನೆ 2-F)



Ads on article

Advertise in articles 1

advertising articles 2

Advertise under the article