ಕ್ರಿಮಿನಲ್ ಪ್ರಕರಣ ಇದ್ದರೆ ನೋಟೀಸ್ ನೀಡದೆ ಸರ್ಕಾರಿ ನೌಕರರ ಅಮಾನತು: ಇಲಾಖೆಯ ಕ್ರಮಕ್ಕೆ ಅಸ್ತು ಎಂದ ಕರ್ನಾಟಕ ಹೈಕೋರ್ಟ್
ಕ್ರಿಮಿನಲ್ ಪ್ರಕರಣ ಇದ್ದರೆ ನೋಟೀಸ್ ನೀಡದೆ ಸರ್ಕಾರಿ ನೌಕರರ ಅಮಾನತು: ಇಲಾಖೆಯ ಕ್ರಮಕ್ಕೆ ಅಸ್ತು ಎಂದ ಕರ್ನಾಟಕ ಹೈಕೋರ್ಟ್
ಅಪರಾಧ ಪ್ರಕರಣ ಇದ್ದರೂ ನೋಟೀಸ್ ನೀಡದೆ ಸರ್ಕಾರಿ ನೌಕರರನ್ನು ಅಮಾನತು ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗೃಹ ರಕ್ಷಕ ದಳದ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಾದಾಗ ನೋಟೀಸ್ ಜಾರಿ ಮಾಡದೆ ಅಂತಹ ಸಿಬ್ಬಂದಿಯನ್ನು ಅಮಾನತು ಮಾಡಬಹುದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ವಿವರ
ಬೆಂಗಳೂರಿನ ಲಗ್ಗರೆ ನಿವಾಸಿ ಡಿ.ಇ. ಕೆಂಪಾಮಣಿ ಎಂಬವರು ಗೃಹ ರಕ್ಷಕ ದಳದ ಸಕ್ಷಮ ಅಧಿಕಾರಿಗಳು ತಮ್ಮ ವಿರುದ್ಧ ಹೊರಡಿಸಲಾದ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈಕೋರ್ಟಿನ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಗೃಹ ರಕ್ಷಕ ಸಿಬ್ಬಂದಿ ಶಿಸ್ತಿಗೆ ಹೆಸರಾದ ಪಡೆ. ಇಂತಹ ಪಡೆಯ ಸಿಬ್ಬಂದಿಯ ಅಶಿಸ್ತು ಸಹಿಸಲಾಗದು. ಆದರೂ, ಅಮಾನತು ಆದೇಶ ಎನ್ನುವುದು ಶಿಕ್ಷೆಯಲ್ಲ. ಅದು ತಾತ್ಕಾಲಿಕ ಕ್ರಮ ಮಾತ್ರ. ಸಿಬ್ಬಂದಿ ವಿರುದ್ಧ ಇಲಾಖೆ ತನಿಖೆ ನಡೆಸಿದರೆ ಅದನ್ನು ಸಿಬ್ಬಂದಿ ಎದುರಿಸಲೇ ಬೇಕು ಎಂದು ನ್ಯಾಯಪೀಠ ಹೇಳಿದೆ.
ಈ ಮೇಲಿನ ವಿವರಗಳಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಗೃಹ ರಕ್ಷಕ ದಳ)ರವರು ಹೊರಡಿಸಿರುವ ತನಿಖೆಯನ್ನು ಅರ್ಜಿದಾರರು ಎದುರಿಸಲೇಬೇಕು. ಆ ಬಳಿಕ ತಮ್ಮ ವಿರುದ್ಧದ ಆರೋಪದಿಂದ ಮುಕ್ತಿಯಾಗಿ ಬರಲಿ. ಆದರೆ, ಸಸ್ಪೆಂಡ್ ಆದೇಶವನ್ನು ರದ್ದುಗೊಳಿಸಲಾಗದು. ಡಿಜಿಪಿಯವರು ಹೊರಡಿಸಿರುವ ಅಮಾನತು ಆದೇಶ ಸಮಂಜಸವಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಇದನ್ನೂ ಓದಿ:
ಜಾಮೀನು ನೀಡುವಲ್ಲಿ ಡಿಸ್ಟ್ರಿಕ್ಟ್ ಕೋರ್ಟ್‌ಗಳ ಮಹತ್ವ ಅಪಾರ: ಸಿಜೆಐ ಚಂದ್ರಚೂಡ್
ಜಿಲ್ಲಾ ನ್ಯಾಯಾಧೀಶರು ಅಧೀನ ಜಡ್ಜ್‌ಗಳಲ್ಲ, ಅವರು ಸಮಾನರು: ಜ. ಚಂದ್ರಚೂಡ್