ಹೈಕೋರ್ಟ್ ಸಿಬ್ಬಂದಿಯ ಹನಿಟ್ರ್ಯಾಪ್ ಯತ್ನ: 10 ಆರೋಪಿಗಳ ಬಂಧನ
ಹೈಕೋರ್ಟ್ ಸಿಬ್ಬಂದಿಯ ಹನಿಟ್ರ್ಯಾಪ್ ಯತ್ನ: 10 ಆರೋಪಿಗಳ ಬಂಧನ
ಹೈಕೋರ್ಟ್ ಸಿಬ್ಬಂದಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಅವರಿಂದ ಎರಡು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ 10 ಮಂದಿ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಹೈಕೋರ್ಟ್ ಸಿಬ್ಬಂದಿ ಜೈರಾಮ್ ಎಂಬುವರಿಗೆ ಸಾಕ್ಷಷ್ಟು ಪರಿಚಯವಿದ್ದ ಅನುರಾಧ, ಕಾವ್ಯಾ, ಸಿದ್ದರಾಜು ಮತ್ತು ಇತರ ಕೆಲವರು ಹನಿಟ್ರ್ಯಾಪ್ ಬಲೆ ಬೀಸಿದ್ದರು.
ಸುಮಾರು ಎರಡು ವರ್ಷದ ಹಿಂದೆ ಪ್ರಕರಣವೊಂದರ ಸಂಬಂಧ ಜೈರಾಮ್ ಗೆ ಅನುರಾಧಾ ಅವರ ಪರಿಚಯವಾಗಿತ್ತು. ಸುಮಾರು ಆರು ತಿಂಗಳ ಹಿಂದೆ, ಜೈರಾಮ್ ಅವರನ್ನು ಸಂಪರ್ಕಿಸಿದ ಅನುರಾಧಾ, ತಮ್ಮ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಟಿವಿ, ಫ್ರಿಡ್ಜ್ ಸಹಿತ ಹಲವು ಬಲೆಬಾಳುವ ವಸ್ತುಗಳು ಸುಟ್ಟು ಹೋಗಿದೆ ಎಂದು ನಂಬಿಸಿ ಜೈರಾಮ್ ಅವರಿಂದ 10 ಸಾವಿರ ಸಾಲ ಪಡೆದಿದ್ದರು.
2022ರ ಅಕ್ಟೋಬರ್ 10ರಂದು ಈ ಹಣವನ್ನು ಜೈರಾಮ್ ಅವರಿಗೆ ಹಿಂದಿರುಗಿಸಿದ್ದರು. ಇದಾದ ಕೆಲವು ದಿನಗಳಲ್ಲಿ, ಅಕ್ಟೋಬರ್ 25 ರಂದು ಐದು ಸಾವಿರ ರೂ. ಸಾಲ ಕೇಳಿದ್ದಳು. ಈ ಹಣವನ್ನು ಅಕ್ಟೋಬರ್ 30 ರಂದು ಆಕೆಗೆ ನೀಡಲು ಅವರ ಮನೆಗೆ ಜೈರಾಮ್ ಹೋಗಿದ್ದರು.
ಐದು 5 ಸಾವಿರ ನೀಡಿ ವಾಪಸ್ ಬರುವಾಘ ನಾಲ್ವರು ದುಷ್ಕರ್ಮಿಗಳು ಜೈರಾಮ್ ಅವರನ್ನು ವಾಪಸ್ ಮನೆಯೊಳಗೆ ಎಳೆದುಕೊಂಡು ಹೋಗಿ ಜೈರಾಮ್ ಗೆ ಥಳಿಸಿ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲೊಬ್ಬ ಆರೋಪಿ, ನನ್ನ ಪತ್ನಿ ಮೇಲೆ ಅತ್ಯಾಚಾರ ಎಸಗಲು ಬಂದಿದ್ದಾಗಿ ಜೈರಾಮ್ ಪತ್ನಿ ಮತ್ತು ಮಕ್ಕಳಿಗೆ ಕರೆ ಮಾಡುವುದಾಗಿ ಹೆದರಿಸಿದ್ದ ಎಂದು ದೂರಲಾಗಿದೆ.
ಬೇಡಿಕೆ ಇಟ್ಟಷ್ಟು ಹಣ ಕೊಡದಿದ್ದರೆ ತಾವು ಚಿತ್ರೀಕರಿಸಿರುವ ವಿಡಿಯೋ ಹರಿಬಿಡುವುದಾಗಿ ಆರೋಪಿಗಳು ಬೆದರಿಸಿದ್ದರು. ಈ ಹಿನ್ನೆಲೆಯಲ್ಲಿ ಜೈರಾಮ್ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ
ಲಂಚಕ್ಕೆ ಬೇಡಿಕೆ: ಭ್ರಷ್ಟಾಚಾರದಲ್ಲಿ ಸಾಬೀತಾಗಬೇಕಾದ ಮಹತ್ವದ ಅಂಶ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಬೆಲೆ ಕೊಡದ ಲೋಕಾಯುಕ್ತ: ಹೈಕೋರ್ಟ್ ನೋಟೀಸ್