ಸಹಾಯಕ ಅಭಿಯೋಜಕರು, ಸರ್ಕಾರಿ ಪ್ಲೀಡರ್ ಪರೀಕ್ಷೆಯಲ್ಲಿ ಅಕ್ರಮ: ಮರು ಪರೀಕ್ಷೆಗೆ ವಕೀಲರ ಸಂಘ ಒತ್ತಾಯ
ಸಹಾಯಕ ಅಭಿಯೋಜಕರು, ಸರ್ಕಾರಿ ಪ್ಲೀಡರ್ ಪರೀಕ್ಷೆಯಲ್ಲಿ ಅಕ್ರಮ: ಮರು ಪರೀಕ್ಷೆಗೆ ವಕೀಲರ ಸಂಘ ಒತ್ತಾಯ
ವಿವಾದಿತ ಪ್ರಶ್ನೆ ಪತ್ರಿಕೆ ನೀಡಲಾದ ಪಠ್ಯಕ್ರಮದ ಪ್ರಕಾರವಾಗಿಲ್ಲ
ಆಂಗ್ಲ ಭಾಷೆ ಪ್ರಶ್ನೆಗಳು ಕನ್ನಡಕ್ಕೆ ಅನುವಾದ ಮಾಡಲಾಗಿದೆ
ಕಳೆದ 2019ರ ಜುಲೈ ತಿಂಗಳಲ್ಲಿ ನಡೆದ ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸರ್ಕಾರಿ ಪ್ಲೀಡರ್ ಆಯ್ಕೆ ಗಾಗಿ ನಡೆಸಲಾದ ಮುಖ್ಯ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಬೇಕು ಎಂದು ನ್ಯಾಯವಾದಿಗಳ ಒಕ್ಕೂಟ ಆಗ್ರಹಿಸಿದೆ.
ಈ ಬಗ್ಗೆ ಮಾನ್ಯ ಗೃಹ ಸಚಿವರಿಗೆ ಮನವಿ ಅರ್ಪಿಸಿರುವ ವಕೀಲರ ಸಂಘ. ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಪ್ಲೀಡರ್‌ಗಳ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಜೊತೆಗೆ ಉತ್ತರ ಪತ್ರಿಕೆಗಳನ್ನೂ ಅದೇ ಲಕೋಟೆಯಲ್ಲಿ ಇರಿಸಿ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಪಠ್ಯಕ್ರಮದ ಅನುಸಾರವಾಗಿ ಇಲ್ಲದೆ, ಆಂಗ್ಲ ಭಾಷೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ ಎಂದು ಹೇಳಿದೆ.
ಪ್ರಶ್ನೆ ಪತ್ರಿಕೆಯ ಒಂದನೇ ಪುಟದಲ್ಲಿ ಮಾತ್ರ ಬಾರ್‌ಕೋಡ್ ಇದೆ. ಉಳಿದ ಪುಟಗಳಲ್ಲಿ ಯಾವುದೇ ಬಾರ್‌ಕೋಡ್ ಇಲ್ಲ ಎಂದು ನ್ಯಾಯವಾದಿಗಳ ಒಕ್ಕೂಟ ಆರೋಪಿಸಿದೆ.
ಪ್ರಕಟಣೆಯ ಪ್ರಕಾರ, ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಪ್ಲೀಡರ್ ಪರೀಕ್ಷೆಯಲ್ಲಿ 2170 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹ ಎಂದು ತಿಳಿಸಲಾಗಿತ್ತು. ಆದರೆ, 1573 ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಲಾಗಿದೆ.
ಈ ಪರೀಕ್ಷೆಯ ಹಳೆಯ ಪದ್ಧತಿಯಂತೆ ನಡೆಸಬೇಕಾಗಿತ್ತು. ಆದರೆ, ಹೊಸ ರೂಪಾಂತರ ಮಾಡಿ ಪರೀಕ್ಷೆ ನಡೆಸಿರುತ್ತಾರೆ. ಕರ್ನಾಟಕ ಆಡಳಿತಾತ್ಮಕ ಪ್ರಾಧಿಕಾರ (ಕೆಎಟಿ) ಪ್ರಕರಣ ದಾಖಲಾಗಿದ್ದರೂ ಸಂದರ್ಶನದ ಪಟ್ಟಿ ಸಲ್ಲಿಸಲಾಗಿದೆ ಎಂದು ಸಂಘ ಆರೋಪಿಸಿದೆ.
ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಸರ್ಕಾರದಿಂದ ನವೆಂಬರ್ 2ರಿಂದ ನಡೆಯುವ ಸಂದರ್ಶನವನ್ನು ರದ್ದು ಮಾಡಬೇಕು ಎಂದು ಸಹಾಯಕ ಸರ್ಕಾರಿ ಅಭಿಯೋಜಕರ ಮತ್ತು ಪ್ಲೀಡರ್ ಪರೀಕ್ಷೆ ಬರೆದಂತಹ ಎಲ್ಲ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.