-->
ತರಗತಿಯಲ್ಲಿ 'ಕಸಬ್' ಸಂಬೋಧನೆ: ನಿಮ್ಮ ಮಗನಿಗೆ ಅದೇ ಪದ ಪ್ರಯೋಗಿಸಿ- ಪ್ರಾಧ್ಯಾಪಕರಿಗೆ ವಿದ್ಯಾರ್ಥಿ ತಿರುಗೇಟು

ತರಗತಿಯಲ್ಲಿ 'ಕಸಬ್' ಸಂಬೋಧನೆ: ನಿಮ್ಮ ಮಗನಿಗೆ ಅದೇ ಪದ ಪ್ರಯೋಗಿಸಿ- ಪ್ರಾಧ್ಯಾಪಕರಿಗೆ ವಿದ್ಯಾರ್ಥಿ ತಿರುಗೇಟು

ತರಗತಿಯಲ್ಲಿ 'ಕಸಬ್' ಸಂಬೋಧನೆ: ನಿಮ್ಮ ಮಗನಿಗೆ ಅದೇ ಪದ ಪ್ರಯೋಗಿಸಿ- ಪ್ರಾಧ್ಯಾಪಕರಿಗೆ ವಿದ್ಯಾರ್ಥಿ ತಿರುಗೇಟು




ಮಣಿಪಾಲದ ಮಾಹೆ ವಿಶ್ವ ವಿದ್ಯಾನಿಲಯದ ಮಣಿಪಾಲ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ಪ್ರಾಧ್ಯಾಪಕ ರವೀಂದ್ರನಾಥ್ ಅವರು ತಮ್ಮ ವಿದ್ಯಾರ್ಥಿ ಹಂಝ ಎಂಬವರಿಗೆ ತರಗತಿಯಲ್ಲಿ ಕಸಬ್ ಎಂಬುದಾಗಿ ಸಂಬೋಧಿಸಿದ್ದು ವಿವಾದಕ್ಕೆ ಕಾರಣವಾಗಿದೆ.



ಈ ಸಂದರ್ಭದಲ್ಲಿ ವಿದ್ಯಾರ್ಥಿ ಹಂಝ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಧ್ಯಾಪಕರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



ತಾನು ಉದ್ದೇಶಪೂರ್ವಕವಾಗಿ ಪದ ಬಳಕೆ ಮಾಡಿಲ್ಲ. ಹಾಸ್ಯದ ದಾಟಿಯಲ್ಲಿ ಹೇಳಿಕೆ ನೀಡಿದ್ದು, ಈ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಪ್ರಾಧ್ಯಾಪಕರಾದ ರವೀಂದ್ರನಾಥ್ ವಿದ್ಯಾರ್ಥಿಗೆ ಹೇಳಿದ್ದಾರೆ.



26/11 ಕೃತ್ಯ ಹಾಸ್ಯಾಸ್ಪದವಲ್ಲ. ಇಂತಹ ಹೇಳಿಕೆಗಳನ್ನು ಮುಸ್ಲಿಮನಾಗಿ ನಾನು ಸಹಿಸುವುದಿಲ್ಲ. ಮಗನಿಗೆ ನೀವು ಭಯೋತ್ಪಾದಕ ಎಂದು ಸಂಬೋಧಿಸುತ್ತೀರಾ..? ಎಂದು ವಿದ್ಯಾರ್ಥಿ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡಿರುವುದೂ ವೈರಲ್ ಆದ ದೃಶ್ಯದಲ್ಲಿದೆ.



ಈ ಘಟನೆಯ ಬಗ್ಗೆ ಮಾಹೆಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಪಿ. ಕರ್ ಸ್ಪಷ್ಟನೆ ನೀಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ. ತನಿಖೆ ಮುಗಿಯುವವರೆಗೆ ಬೋಧನೆ ಮಾಡದಂತೆ ಪ್ರಾಧ್ಯಾಪಕ ರವೀಂದ್ರನಾಥ್ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.



ಹಂಝ ಹೇಳಿಕೆ

ಘಟನೆಯ ಬಳಿಕ ಪ್ರಾಧ್ಯಾಪಕರ ಜೊತೆ ಮಾತನಾಡಿರುತ್ತೇನೆ. ಅವರು ಆ ಪದ ಬಳಕೆ ಮಾಡಿರುವುದು ಉದ್ದೇಶಪೂರ್ವಕವಾಗಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಕಸಬ್ ಹೇಳಿಕೆಗೆ ಅವರು ಕ್ಷಮೆ ಯಾಚಿಸಿದ್ದಾರೆ. ಆದುದರಿಂದ ಈ ವಿವಾದವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ಹಂಝ ವಾಟ್ಸ್ಯಾಪ್ ಸಂದೇಶದಲ್ಲಿ ಹೇಳಿಕೆ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article