ಪ್ರಾಣಿಗಳ ಸಾವು-ನೋವಿಗೆ ಮೋಟಾರು ವಾಹನ ಕಾಯ್ದೆಯಲ್ಲಿ ಪರಿಹಾರವಿಲ್ಲ: ಕರ್ನಾಟಕ ಹೈಕೋರ್ಟ್
ಪ್ರಾಣಿಗಳ ಸಾವು-ನೋವಿಗೆ ಮೋಟಾರು ವಾಹನ ಕಾಯ್ದೆಯಲ್ಲಿ ಪರಿಹಾರವಿಲ್ಲ: ಕರ್ನಾಟಕ ಹೈಕೋರ್ಟ್
ಮೋಟಾರು ವಾಹನ ಕಾಯಿದೆಯಡಿ ಅಪಘಾತದಲ್ಲಿ ಮಾನವನಿಗೆ ಸಾವು-ನೋವಾದರೆ ಮಾತ್ರಾ ಅನ್ವಯಿಸುತ್ತದೆ. ಪಶು, ಪಕ್ಷಿ ಪ್ರಾಣಿಗಳಿಗೆ ಇದು ಅನ್ವಯಿಸದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಸಾಕು ನಾಯಿಗೂ ಪರಿಹಾರ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ಏಕಸದಸ್ಯ ಪೀಠ ರದ್ದುಪಡಿಸಿದೆ.
Motor Vehicle Act (ಮೋಟಾರು ವಾಹನ ಕಾಯ್ದೆ) ಮನುಷ್ಯನಿಗೆ ಸಾವು-ನೋವಾದರೆ ಮಾತ್ರ ಅನ್ವಯಿಸುತ್ತದೆಯೇ ವಿನಾ ನಾಯಿ, ಬೆಕ್ಕು ಯಾ ಯಾವುದೇ ಸಾಕು ಪ್ರಾಣಿಗೆ ಅನ್ವಯಿಸಲಾಗದು ಎಂದು ಆದೇಶದಲ್ಲಿ ಹೇಳಲಾಗಿದೆ.
MV Act ಸೆಕ್ಷನ್ 134 ಪ್ರಕಾರ, ವ್ಯಕ್ತಿಗೆ ಗಾಯ ಅಥವಾ ಮೂರನೇ ವ್ಯಕ್ತಿಯ ಆಸ್ತಿ-ಪಾಸ್ತಿ ನಷ್ಟಕ್ಕೆ ಮಾತ್ರ ಅನ್ವಯಿಸುತ್ತದೆ. ಮೋಟಾರು ವಾಹನ ಕಾಯ್ದೆ(MV Act) ಕಲಂ 134 (a) ಮತ್ತು (b) ಪ್ರಕಾರ ಆಸ್ತಿ ನಷ್ಟಕ್ಕೆ ಅನ್ವಯಿಸುವುದಿಲ್ಲ.
ವಾಹನ ಕಾಯ್ದೆ(MV Act) ಕಲಂ 134 (a) ಮತ್ತು (b) ಮೆಡಿಕಲ್ ಚಿಕಿತ್ಸೆ ಬಗ್ಗೆ ಹೇಳುತ್ತದೆ. ಆದರೆ, ಸದ್ರಿ ಪ್ರಕರಣದಲ್ಲಿ ಸಾಕು ನಾಯಿ ಮೂರನೇ ವ್ಯಕ್ತಿಯ ಆಸ್ತಿ ಎಂದು ಭಾವಿಸಿದರೆ (MV Act) ಕಲಂ 134 (a) ಮತ್ತು (b) ಅಡಿ ಅಪರಾಧವಾಗದು.
ಹಾಗಾಗಿ, ಈ ಕಾನೂನಿನ ನಿಯಮದ ಪ್ರಕಾರ ಮನುಷ್ಯನಿಗೆ ಗಾಯವಾದರೆ ಮಾತ್ರ ಅನ್ವಯಿಸುತ್ತದೆ. ಇದಕ್ಕೆ ಹೊರತಾಗಿ, ಯಾವುದೇ ನಾಯಿ ಅಥವಾ ಸಾಕು ಪ್ರಾಣಿಗೆ ಅನ್ವಯ ಆಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
"ಅರ್ಜಿದಾರರು ಮತ್ತು ಸಾಕು ಪ್ರಾಣಿ ಇಬ್ಬರೂ ಪರಿಚಿತರಲ್ಲ. ಹೀಗಾಗಿ, ಅರ್ಜಿದಾರರು ದ್ವೇಷ ಅಥವಾ ಯಾವುದೇ ಕಾರಣದಿಂದ ಸಾಕು ನಾಯಿಗೆ ಹಾನಿ ಮಾಡಿಲ್ಲ'' ಎಂದು ಅರ್ಜಿದಾರರು ವಾದಿಸಿದ್ದರು.
ಘಟನೆಯ ವಿವರ:
ದೂರುದಾರರಾದ ಬೆಂಗಳೂರಿನ ಧೀರಜ್ ರಖೇಜಾ ಅವರ ತಾಯಿ 2018ರ ಫೆಬ್ರವರಿ 24ರಂದು ಸಾಮಾನ್ಯದ ದಿನಚರಿಯಂತೆ ಸಾಕು ನಾಯಿಯನ್ನು ವಾಯು ವಿಹಾರಕ್ಕೆ ಕರೆದೊಯ್ದಿದ್ದರು. ಆಗ ಫಾರ್ಚೂನರ್ ಕಾರೊಂದು ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ ವೇಗವಾಗಿ ಬಂದು ನಾಯಿಗೆ ಡಿಕ್ಕಿ ಹೊಡೆದಿತ್ತು.
ಈ ಸಾಕು ನಾಯಿ ʼಮೆಂಪಿʼಯನ್ನು ವೆಟರ್ನರಿ ಆಸ್ಪತ್ರೆಗೆ ಸಾಗಿಸಿದ್ದು, ಶ್ವಾನ ಮೃತಪಟ್ಟಿತ್ತು. ಈ ಬಗ್ಗೆ ದೂರುದಾರರು ವಿಜಯನಗರ ಠಾಣೆಯಲ್ಲಿ ಮೋಟಾರು ವಾಹನ ಕಾಯಿದೆ ಸೆಕ್ಷನ್ 134 (ಎ) ಮತ್ತು (ಬಿ) ಮತ್ತು 187, IPC ಸೆಕ್ಷನ್ 279, 428, 429 ಪ್ರಕಾರ ದೂರು ದಾಖಲಿಸಿದ್ದರು. ಆದರೆ, ಅದನ್ನು ನ್ಯಾಯಾಲಯ ವಜಾ ಮಾಡಿತ್ತು.