ರಾಜ್ಯದಲ್ಲಿ 7 ನೂತನ ವಿವಿಗಳ ಸ್ಥಾಪನೆ: ರಾಜ್ಯ ಸರ್ಕಾರ ಘೋಷಣೆ
ರಾಜ್ಯದಲ್ಲಿ 7 ನೂತನ ವಿವಿಗಳ ಸ್ಥಾಪನೆ: ರಾಜ್ಯ ಸರ್ಕಾರ ಘೋಷಣೆ
ಕಾಲೇಜುಗಳ ಮೇಲ್ವಿಚಾರಣೆಯನ್ನು ಸುದಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ 7 ವಿಶ್ವವಿದ್ಯಾನಿಲಯಗಳನ್ನು ಘೋಷಿಸಿ ರಾಜ್ಯ ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದೆ.
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆಗಳಲ್ಲಿ ಈ ವಿವಿಗಳು ಸ್ಥಾಪನೆಯಾಗಲಿದೆ.
ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಗಿಂತ ಈ ವಿವಿಗಳು ಭಿನ್ನವಾಗಲಿದ್ದು, ತಂತ್ರಜ್ಞಾನದ ಗರಿಷ್ಟ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೆ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ಮೂಲ ವಿವಿಯ ಹೆಸರು ನೂತನ ವಿವಿಯ ಕೇಂದ್ರಸ್ಥಳ
ಮೈಸೂರು ವಿವಿ 1) (ಚಾಮರಾಜನಗರ) ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಚಾಮರಾಜನಗರ
2) ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಹಾಸನ
3) ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಮಂಡ್ಯ
ಗುಲ್ಬರ್ಗ ವಿವಿ ಜ್ಞಾನ ಕಾರಂಜಿ, ಹಾಲಹಳ್ಳಿ, ಭಾಲ್ಕಿ, ಬೀದರ್
ಮಂಗಳೂರು ವಿವಿ (ಕೊಡಗು)ಚಿಕ್ಕ ಅಲುವಾರ, ಕುಶಾಲನಗರ
ವಿಜಯನಗರ ಶ್ರೀ ಕೃಷ್ಣ
ದೇವರಾಯ ವಿವಿ (ಕೊಪ್ಪಳ) ಸರ್ಕಾರಿ ತಾಂತ್ರಿಕ ಮಹಾವಿದ್ಯಾನಿಲಯ ಕೊಪ್ಪಳ
ರಾಣಿ ಚೆನ್ನಮ್ಮ ವಿವಿ ಜಮಖಂಡಿ, ಬಾಗಲಕೋಟೆ
ಕರ್ನಾಟಕ ವಿವಿ ಹಾವೇರಿ, ಕರಿಮತ್ತಿಹಳ್ಳಿ