ಸ್ಟೆನೋಗ್ರಾಫರ್ ಕೊರತೆ ಆದೇಶ ಮಾಡದಿರಲು ಕಾರಣ: ದೆಹಲಿ ಗ್ರಾಹಕರ ಆಯೋಗ
ಸ್ಟೆನೋಗ್ರಾಫರ್ ಕೊರತೆ ಆದೇಶ ಮಾಡದಿರಲು ಕಾರಣ: ದೆಹಲಿ ಗ್ರಾಹಕರ ಆಯೋಗ
ಆಂಗ್ಲ ಸ್ಟೆನೋಗ್ರಾಫರ್ ಅಲಭ್ಯರಾಗಿರುವ ಕಾರಣ ಯಾವುದೇ ಆದೇಶ ನೀಡಲಾಗುತ್ತಿಲ್ಲ ಎಂದ ದೆಹಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ವಿಚಿತ್ರವಾದ ಹಾಗೂ ಅಪರೂಪದ ಆದೇಶ ಮಾಡಿದೆ.
ನಮ್ಮಲ್ಲಿ ಹಿಂದಿ ಸ್ಟೆನೊ ಇದ್ದಾರೆ. ಆದರೆ, ಅವರಿಗೆ ಇಂಗ್ಲಿಷ್‌ನಲ್ಲಿ ಬೆರಳಚ್ಚು ಮಾಡಲು ಸಾಧ್ಯವಿಲ್ಲ ಇದರಿಂದ ತಾನು ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತೇನೆ ಹಾಗೂ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂಧು ಆದೇಶದಲ್ಲಿ ನ್ಯಾಯಪೀಠದ ಮುಖ್ಯಸ್ಥರು ತಿಳಿಸಿದ್ದಾರೆ.
ರಜೆಯಲ್ಲಿ ತೆರಳಿರುವ ಆಂಗ್ಲ ಸ್ಟೆನೋಗ್ರಾಫರ್ ಮತ್ತೆ ಕರ್ತವ್ಯಕ್ಕೆ ಹಾಜರಾಗುವವರೆಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಗ್ರಾಹಕರ ಆಯೋಗ ತಿಳಿಸಿದೆ.
ಮಾನ್ಯ ಗ್ರಾಹಕ ಆಯೋಗದಲ್ಲಿ ದೆಹಲಿ ಪಾಲಿಕೆ (MCD) ಚುನಾವಣಾಧಿಕಾರಿ ಕಚೇರಿಯಿಂದ ವಿನಂತಿ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಆಂಗ್ಲ ಸ್ಟೆನೋ ಮಾತ್ರ ಇದ್ದಾರೆ ಎಂದು ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಸುಖವೀರ ಸಿಂಗ್ ಹೇಳಿದ್ದಾರೆ. ಬಾಕಿ ಇರುವ ಪ್ರಕರಣಗಳ ವಾದಗಳಿಗೆ ನಿಗದಿಪಡಿಸಿದ ಸಂದರ್ಭದಲ್ಲಿ ಅವರು ಈ ವಿಷಯ ಉಲ್ಲೇಖಿಸಿದ್ದಾರೆ.
ಖಾಸಗಿ ಸಹಾಯಕರಾಗಿರುವ ಹಿಂದಿ ಸ್ಟೆನೊ ಅವರಿಗೆ ಇಂಗ್ಲಿಷ್‌ನಲ್ಲಿ ಟೈಪ್ ಮಾಡಲು ಬರುವುದಿಲ್ಲ. ಇದರಿಂದ ತಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಆಯೋಗದ ಅಧ್ಯಕ್ಷರು ಆದೇಶದಲ್ಲಿ ತಿಳಿಸಿದ್ದಾರೆ.
ಉಳಿದ ಹಿಂದಿ ಸ್ಟೆನೋಗಳು ಹೊಸಬರು. ಇಂಗ್ಲಿಷ್‌ನಲ್ಲಿ ಉಕ್ತಲೇಖ (ಡಿಕ್ಟೇಷನ್) ನೀಡಿದಾಗ ಅವರಿಗೆ ಟೈಪ್ ಮಾಡಲಾಗುತ್ತಿಲ್ಲ. ಆದ್ದರಿಂದ, ಇಂಗ್ಲಿಷ್ ಸ್ಟೆನೋ ಕರ್ತವ್ಯಕ್ಕೆ ಮತ್ತೆ ಹಾಜರಾಗುವ ವರೆಗೆ ಯಾವುದೇ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಆಯೋಗ ತನ್ನ ಆದೇಶದಲ್ಲಿ ದಾಖಲಿಸಿದೆ.