-->
ಮೈಸೂರು: ಲೈಂಗಿಕ ಅಪರಾಧಕ್ಕೆ 43 ವರ್ಷ ಜೈಲು- ದೇಶದಲ್ಲೇ ಮೊದಲ ಪ್ರಕರಣವಿದು!

ಮೈಸೂರು: ಲೈಂಗಿಕ ಅಪರಾಧಕ್ಕೆ 43 ವರ್ಷ ಜೈಲು- ದೇಶದಲ್ಲೇ ಮೊದಲ ಪ್ರಕರಣವಿದು!

ಮೈಸೂರು: ಲೈಂಗಿಕ ಅಪರಾಧಕ್ಕೆ 43 ವರ್ಷ ಜೈಲು- ದೇಶದಲ್ಲೇ ಮೊದಲ ಪ್ರಕರಣವಿದು!





9 ವರ್ಷದ ಬಾಲಕಿಯ ಮೇಲೆ ಲೈಂಗಿಕ ಆರೋಪ ಎಸಗಿದ ಕಾರ್ಮಿಕನೊಬ್ಬನಿಗೆ ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯ 43 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇಷ್ಟೊಂದು ದೀರ್ಘ ಹಾಗೂ ಕಠಿಣ ಶಿಕ್ಷೆ ವಿಧಿಸಿದ ದೇಶದಲ್ಲೇ ಮೊದಲ ಪ್ರಕರಣ ಇದಾಗಿದೆ.



33 ವರ್ಷದ ಎಂ.ಡಿ. ನಾಜೀಮ್ ಲೈಂಗಿಕ ಆಪರಾಧ ಎಸಗಿದ ವ್ಯಕ್ತಿಯಾಗಿದ್ದಾನೆ. ಈತ ಬಿಹಾರ ಮೂಲದ ನಿವಾಸಿಯಾಗಿರುತ್ತಾನೆ.



ಟಿ. ನರಸೀಪುರ ರಸ್ತೆಯಲ್ಲಿ ಇರುವ ಚಿತ್ರ ನಟರೊಬ್ಬರ ತೋಟದ ಮನೆಯಲ್ಲಿ ಕುದುರೆ ಲಾಳ ಕಟ್ಟುವ ಕೆಲಸ ಮಾಡುತ್ತಿದ್ದ.



2021ರಲ್ಲಿ ಬಾಲಕಿಗೆ ಅಶ್ಲೀಲ ವೀಡಿಯೋಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದ.



ಸಂತ್ರಸ್ತ ಬಾಲಕಿ 2021ರ ಸೆಪ್ಟೆಂಬರ್‌ 15ರಂದು ಮೈಸೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಮೈಸೂರು ಪೊಲೀಸರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 



ಇದನ್ನು ಓದಿ:

ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





Ads on article

Advertise in articles 1

advertising articles 2

Advertise under the article