ಪೋಕ್ಸೋ ಕಾಯ್ದೆ ಜಾತ್ಯತೀತ; ಮುಸ್ಲಿಂ ವೈಯಕ್ತಿಕ ಕಾನೂನಿಗೂ ಮೀರಿದ್ದು- ಕೇರಳ ಹೈಕೋರ್ಟ್
ಪೋಕ್ಸೋ ಕಾಯ್ದೆ ಜಾತ್ಯತೀತ; ಮುಸ್ಲಿಂ ವೈಯಕ್ತಿಕ ಕಾನೂನಿಗೂ ಮೀರಿದ್ದು- ಕೇರಳ ಹೈಕೋರ್ಟ್
ಮುಸ್ಲಿಂ ವೈಯಕ್ತಿಕ ಕಾನೂನಿನಡಿ ನಡೆಯುವ ಮದುವೆ ಅಥವಾ ಲೈಂಗಿಕ ಕ್ರಿಯೆ ಕೂಡ
‘ಪೋಕ್ಸೋ’ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಿಂದ ಹೊರಗಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಸ್ಲಿಮರು ವಿವಾಹದ ಹೆಸರಿನಲ್ಲಿ ಬಾಲಕಿ ಜತೆ ನಡೆಸುವ ಲೈಂಗಿಕ ಕ್ರಿಯೆ ಕೂಡ ಪೋಕ್ಸೋ ದೃಷ್ಟಿಯಲ್ಲಿ ಅಪರಾಧ ಎಂದು ಹೈಕೋರ್ಟ್ ಹೇಳಿದೆ.
ತಾನು 15 ವರ್ಷದ ಬಾಲಕಿಯನ್ನು ಮದುವೆಯಾಗಿದ್ದೇನೆ. ತಮ್ಮ ವಿರುದ್ಧ ಅಪಹರಣ ಹಾಗೂ ಆಕೆಯನ್ನು ಗರ್ಭಿಣಿ ಮಾಡಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಬಾಲ್ಯ ವಿವಾಹ ಒಂದು ಸಮಾಜದ ಪಿಡುಗು. ಮುಸ್ಲಿಂ ವೈಯಕ್ತಿಕ ಕಾನೂನಿನಂತೆ ಮದುವೆಯಾದ ಅಪ್ರಾಪ್ತರೊಂದಿಗೆ ದೈಹಿಕ ಸಂಬಂಧ ಹೊಂದುವುದು ಅಪರಾಧ. ಈ ಕಾರಣಕ್ಕಾಗಿಯೇ, ಅಪ್ರಾಪ್ತರು ಮದುವೆಯಾಗುವುದನ್ನು ತಡೆಯುವುದಕ್ಕಾಗಿಯೇ ಪೋಕ್ಸೋ ಕಾಯ್ದೆ ಇರುವುದು. ಹೀಗಾಗಿ ವೈಯಕ್ತಿಕ ಕಾನೂನಿನಡಿ ಮುಸ್ಲಿಮರ ವಿವಾಹ ಪೋಕ್ಸೋ ಕಾಯ್ದೆಯಿಂದ ಹೊರಗಿಲ್ಲ ಎಂದು ಹೇಳಿದೆ.
ಆರೋಪಿ ತಾನು ಮುಸ್ಲಿಂ ಕಾನೂನು ಪ್ರಕಾರ, ಬಾಲಕಿಯನ್ನು 2021ರ ಮಾ.14ರಂದು ವಿವಾಹವಾಗಿದ್ದೇನೆ. ಈ ಕಾನೂನು ಪ್ರಕಾರ 18 ವರ್ಷದ ಕೆಳಗಿನವರನ್ನೂ ಮದುವೆಯಾಗಲು ಅವಕಾಶ ಇದೆ. ಆ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿ ಪ್ರಕರಣದ ವಿಚಾರಣೆ ನಡೆಸಬಾರದು’ ಎಂದು ಅರ್ಜಿದಾರರಾದ ಪಶ್ಚಿಮ ಬಂಗಾಳದ ಖಾಲಿದುರ್ ರೆಹಮಾನ್ ವಾದಿಸಿದ್ದರು.
ಕೇರಳದಲ್ಲಿ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿರುವುದು ಪತ್ತೆಯಾಗಿತ್ತು. ಅದನ್ನು ಅಲ್ಲಿನ ಸಿಬ್ಬಂದಿ ಪತ್ತೆ ಹಚ್ಚಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ಪ್ರಕಾರ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು.