ಇದು ಮಾಹಿತಿ ಹಕ್ಕಿನ ಪವರ್!: ಒಂದು ಕೋಟಿ ದಂಡ ವಿಧಿಸಿದ ರಾಜ್ಯ ಮಾಹಿತಿ ಆಯೋಗ
ಇದು ಮಾಹಿತಿ ಹಕ್ಕಿನ ಪವರ್!: ಒಂದು ಕೋಟಿ ದಂಡ ವಿಧಿಸಿದ ರಾಜ್ಯ ಮಾಹಿತಿ ಆಯೋಗ
ನಿಜಕ್ಕೂ ಮಾಹಿತಿ ಹಕ್ಕಿನ ಕಾಯ್ದೆ(RTI) ತನ್ನ ಪವರ್ ತೋರಿಸಿದೆ. ಕರ್ನಾಟಕ ರಾಜ್ಯದಲ್ಲಿ RTIನಡಿ ಸಲ್ಲಿಕೆಯಾದ ಅರ್ಜಿಗಳಿಗೆ ಪ್ರತಿಯಾಗಿ ಮಾಹಿತಿ ನೀಡದ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗ ಒಟ್ಟು ಒಂದು ಕೋಟಿ ರೂಪಾಯಿ ದಂಡ ವಿಧಿಸಿ ತನ್ನ ಖದರ್ ತೋರಿದೆ.
2021ರ ಜುಲೈ 1ರಿಂದ ಕಳೆದ ಜೂನ್ ವರೆಗಿನ ಅವಧಿಯಲ್ಲಿ ಕರ್ನಾಟಕ ಒಟ್ಟು 1.04 ಕೋಟಿ ರೂ. ದಂಡ ವಿಧಿಸಲಾಗಿದೆ.
1265 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಧಿಸಲಾದ ಒಟ್ಟು 1.04 ಕೋಟಿ ರೂ. ದಂಡ ದೇಶದ ಅಂಕಿ ಸಂಖ್ಯೆಗಳಿಗೆ ಹೋಲಿಸಿದರೆ ಮೂರನೇ ಒಂದರಷ್ಟು ಆಗಿದೆ ಎಂದು ಸರ್ಕಾರದ ಮಾಹಿತಿ ಇಲಾಖೆಯ ಅಂಕಿಗಳು ಮಾಹಿತಿ ನೀಡಿವೆ.
ದೇಶಾದ್ಯಂತ ಮಾಹಿತಿ ಹಕ್ಕಿನ ಉಲ್ಲಂಘನೆ ಮಾಡಿದ್ದಕ್ಕೆ ಕಳೆದ ಅವಧಿಯಲ್ಲಿ 5805 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 3.12 ಕೋಟಿ ರೂ. ದಂಡ ವಿಧಿಸಲಾಗಿದೆ. ಒಟ್ಟು ಪ್ರಕರಣಗಳ ಪೈಕಿ ಶೇಕಡಾ 5ರಷ್ಟು ಪ್ರಕರಣಗಳಲ್ಲಿ ಮಾತ್ರ ದಂಡ ವಿಧಿಸಲಾಗಿದೆ ಎಂದು ಡಾಟಾ ಹೇಳುತ್ತದೆ.
ದಂಡ ಸಂಗ್ರಹದ ಪಟ್ಟಿಯಲ್ಲಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿ ಇದೆ. ಅಲ್ಲಿ ಒಟ್ಟು 47.50 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.
ಇದನ್ನೂ ಓದಿ:
RTI- ಗ್ರಾ.ಪಂ. ಸಿಬ್ಬಂದಿ ಹಾಜರಾತಿ ಪುಸ್ತಕದ ಮಾಹಿತಿ ನೀಡದ ಅಧಿಕಾರಿಗೆ ದಂಡ ವಿಧಿಸಿದ ಮಾಹಿತಿ ಆಯೋಗ