ಜಾಮೀನು ನೀಡುವಲ್ಲಿ ಡಿಸ್ಟ್ರಿಕ್ಟ್ ಕೋರ್ಟ್‌ಗಳ ಮಹತ್ವ ಅಪಾರ: ಸಿಜೆಐ ಚಂದ್ರಚೂಡ್
ಜಾಮೀನು ನೀಡುವಲ್ಲಿ ಡಿಸ್ಟ್ರಿಕ್ಟ್ ಕೋರ್ಟ್‌ಗಳ ಮಹತ್ವ ಅಪಾರ: ಸಿಜೆಐ ಚಂದ್ರಚೂಡ್
ಆರೋಪಿಗಳಿಗೆ ಜಾಮೀನು ನೀಡಲು ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯಗಳು ಹಿಂದೇಟು ಹಾಕುತ್ತಿವೆ. ಇದರಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಜಾಮೀನು ಕೋರಿ ಸಲ್ಲಿಕೆಯಾಗುವ ಅರ್ಜಿಗಳು ರಾಶಿ ಬಿದ್ದಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.
ಜಾಮೀನು ಅರ್ಜಿ ಪುರಸ್ಕರಿಸಿದರೆ ಟಾರ್ಗೆಟ್ ಮಾಡಬಹುದು ಎಂಬ ಭೀತಿ ಡಿಸ್ಟ್ರಿಕ್ಟ್ ಜಡ್ಜ್‌ಗಳಲ್ಲಿ ಇದೆ. ಇದರಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಅವರಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ನ್ಯಾಯಮೂರ್ತಿಗಳು ಮಾತನಾಡಿದರು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಅರ್ಜಿಗಳು ರಾಶಿ ಬೀಳಲು ಕೆಳ ನ್ಯಾಯಾಲಯಗಳು ಜಾಮೀನು ನೀಡಲು ತೋರುತ್ತಿರುವ ನಿರಾಸಕ್ತಿ. ಹಾಗಂತ, ಅವರಿಗೆ ಸಾಮರ್ಥ್ಯ ಇಲ್ಲ ಎಂದರ್ಥವಲ್ಲ. ನಮಗಿಂತಲೂ ಚೆನ್ನಾಗಿ ಅವರಿಗೆ ಅಪರಾಧ ಅರ್ಥ ಆಗಿರುತ್ತದೆ. ಅವರು ಬೇರುಮಟ್ಟದಲ್ಲೇ ಅಪರಾಧ ಪ್ರಕರಣಗಳನ್ನು ಬಲ್ಲವರಾಗಿದ್ದಾರೆ. ಆದರೆ, ಹೇಯ ಕೃತ್ಯದಲ್ಲಿ ಜಾಮೀನು ನೀಡಿದರೆ ನಾವು ಟಾರ್ಗೆಟ್ ಆಗುತ್ತೇವೆ ಎಂಬ ಭಯದ ಭಾವನೆಯಿಂದ ಅವರು ಈ ವಿಷಯದಲ್ಲಿ ಹಿಂದೇಟು ಹಾಕುತ್ತಾರೆ ಎಂದು ಅವರು ಹೇಳಿದರು.
ಆದರೆ, ವಿಚಾರಣಾ ನ್ಯಾಯಾಲಯಗಳು ಹಲ್ಲಿಲ್ಲದಂತೆ ಮತ್ತು ನಿಷ್ಕ್ರಿಯ ಆಗದಂತೆ ನೋಡಿಕೊಳ್ಳಲು ಈ ಸಮಸ್ಯೆಯನ್ನು ಎದುರಿಸಬೇಕಿದೆ ಎಂದು ಚಂದ್ರಚೂಡ್ ಹೇಳಿದರು.
"ತಾವು ತಪ್ಪು ಮಾಡಿದರೆ, ಆ ತಪ್ಪನ್ನು ತಿದ್ದಿಕೊಳ್ಳಲು ಖಂಡಿತವಾಗಿ ಅವಕಾಶವಿದೆ. ಆದರೆ, ನಾವು ಸುಪ್ರೀಂ ಕೋರ್ಟ್ ಮಾಡಿದ್ರೆ..? ನಮ್ಮಿಂದ ತಪ್ಪೇ ಆಗದು ಎಂದಲ್ಲ. ಪ್ರಚಲಿತ ಮಾತಿನಂತೆ, 'ಸರಿ ಇರುವ ಕಾರಣಕ್ಕೆ ಸುಪ್ರೀಂ ಕೋರ್ಟ್ ಫೈನಲ್ ಆತ್ಯಂತಿಕ ಆದುದಾಗಿಲ್ಲ... ಅದೇ ಅಂತಿಮ ಎಂಬ ಕಾರಣಕ್ಕೆ ಅದು ಸರಿ ಇದ್ದಂತೆ ಕಾಣುತ್ತದೆ” ಎಂದು ಮಾರ್ಮಿಕವಾಗಿ ಅವರು ಹೇಳಿದರು.
ಡಿಸ್ಟ್ರಿಕ್ಟ್ ಕೋರ್ಟ್‌ಗಳು ಸಾಮಾನ್ಯ ನಾಗರಿಕರ ಜೊತೆಗೆ ಸಂಪರ್ಕ, ಸಂವಹನ ಸಾಧಿಸುವ ಮೊದಲ ಹಂತ. ಆದ್ದರಿಂದಲೇ ಕೆಳ ಹಂತದ ನ್ಯಾಯಾಲಯಗಳು ಸುಪ್ರೀಂ ಮತ್ತು ಹೈಕೋರ್ಟ್ ನಷ್ಟೇ ಮಹತ್ವದ್ದು ಎಂದು ಅವರು ಒತ್ತಿ ಹೇಳಿದರು.
'ಜಿಲ್ಲಾ ನ್ಯಾಯಾಂಗ 'ಅಧೀನ ನ್ಯಾಯಾಂಗ'ವಲ್ಲ ಬದಲಿಗೆ, ಅದು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಸಮಾನವಾದ ನ್ಯಾಯಾಂಗ ಎಂಬುದನ್ನು ನಾನು ಯಾವತ್ತೂ ಹೇಳುತ್ತೇನೆ. ಸುಪ್ರೀಂ ಕೋರ್ಟ್ ಪ್ರಮುಖ ವಿಷಯಗಳ ಬಗ್ಗೆ ಮಹತ್ವದ ತೀರ್ಪುಗಳನ್ನು ನೀಡುತ್ತದೆ. ಆದರೆ, ಡಿಸ್ಟ್ರಿಕ್ಟ್ ಕೋರ್ಟ್‌ಗಳು ತಮ್ಮ ಸೀಮಿತ ಅಖಾಡದಲ್ಲೇ ಸಾಮಾನ್ಯ ನಾಗರಿಕರ ಶಾಂತಿ, ಸಂತೋಷ ಮತ್ತು ವಿಶ್ವಾಸವನ್ನು ವ್ಯಾಖ್ಯಾನಿಸುತ್ತದೆ' ಎಂದು ಚಂದ್ರಚೂಡ್ ಹೇಳಿದರು.
Watch Video
ಇದನ್ನೂ ಓದಿ:
ಡಿಸ್ಟ್ರಿಕ್ಟ್ ಜಡ್ಜರು ಅಧೀನರರಲ್ಲ, ಅವರನ್ನೂ ಸಮಾನರಂತೆ ಪರಿಗಣಿಸಿ: ಸಿಜೆಐ ಚಂದ್ರಚೂಡ್