-->
NI Act Sec 138 | ಚೆಕ್ ಬೌನ್ಸ್ ಪ್ರಕರಣ: ಪತಿ ನೀಡಿದ ಚೆಕ್‌ಗೆ ಪತ್ನಿಯ ಮೇಲೆ ಕೇಸ್ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್‌

NI Act Sec 138 | ಚೆಕ್ ಬೌನ್ಸ್ ಪ್ರಕರಣ: ಪತಿ ನೀಡಿದ ಚೆಕ್‌ಗೆ ಪತ್ನಿಯ ಮೇಲೆ ಕೇಸ್ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್‌

ಚೆಕ್ ಬೌನ್ಸ್ ಪ್ರಕರಣ: ಪತಿ ನೀಡಿದ ಚೆಕ್‌ಗೆ ಪತ್ನಿಯ ಮೇಲೆ ಕೇಸ್ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್‌





ಪತಿ ನೀಡಿದ ಚೆಕ್‌ನ್ನು ಇಟ್ಟುಕೊಂಡು ಪತ್ನಿ ಮೇಲೆ ಕೇಸ್ ಹಾಕುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.



ಗಂಡ ಸ್ವತಃ ತನ್ನ ಸಹಿ ಇರುವ ಚೆಕ್‌ ನೀಡಿ ಅದು ಚೆಕ್ ಅಮಾನ್ಯಗೊಂಡರೆ ಪತ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ್ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದ್ದು, ಪತ್ನಿ ವಿರುದ್ಧದ ಚೆಕ್ ಬೌನ್ಸ್ ದೂರನ್ನು ರದ್ದುಪಡಿಸಿದೆ.



ಸದ್ರಿ ಪ್ರಕರಣದಲ್ಲಿ, ಅಮಾನ್ಯಗೊಂಡ ಚೆಕ್‌ಗೆ ಅರ್ಜಿದಾರೆ (ಪತ್ನಿ) ಸಹಿ ಹಾಕಿಲ್ಲ. ಆ ಚೆಕ್‌ ಆಕೆಯ ಹೆಸರಿನಲ್ಲಿ ಇರುವ ಜಂಟಿ ಖಾತೆಯೂ ಅಲ್ಲ. ದೂರುದಾರರು ತಮ್ಮ ದೂರಿನಲ್ಲಿ ಆ ಚೆಕ್‌ನ್ನು ಪತಿಯೇ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ ಅರ್ಜಿದಾರರ ಮೇಲಿನ ದೂರನ್ನು ರದ್ದುಪಡಿಸಿದೆ.



ಪ್ರಕರಣದಲ್ಲಿ ಪ್ರತಿವಾದಿ ಪರ ವಕೀಲರು ಗೈರುಹಾಜರಾಗಿದ್ದರು. ಕೇಸ್‌ನಲ್ಲಿ ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ ಈ ತೀರ್ಪು ನೀಡಿದೆ.


ಪ್ರಕರಣ: ವೀಣಾಶ್ರೀ Vs ಶಂಕರ್

ಕರ್ನಾಟಕ ಹೈಕೋರ್ಟ್, CrP 2129/2019, Dated 19-10-2022


ಪ್ರಕರಣದ ವಿವರ


ಬೆಂಗಳೂರಿನ ವೀಣಾಶ್ರೀ ಎಂಬವರು ಶಂಕರ್ ಎಂಬುವವರಿಂದ ಸಾಲ ಪಡೆದಿದ್ದರು. ಈ ಸಾಲದ ಮರುಪಾವತಿಗೆ ಭದ್ರತಾ ಖಾತರಿಯಾಗಿ ವೀಣಾಶ್ರೀ ತಮ್ಮ ಪತಿಯ ಸಹಿಯಿರುವ ಚೆಕ್ ನೀಡಿದ್ದರು.



ಈ ಚೆಕ್‌ ಅಮಾನ್ಯಗೊಂಡ ಕಾನೂನು ಪ್ರಕ್ರಿಯೆ ಬಳಿಕ ಶಂಕರ್ 2017ರಲ್ಲಿ 22ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಚೆಕ್ ಅಮಾನ್ಯ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವೀಣಾ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಅದನ್ನು ಪ್ರಶ್ನಿಸಿ ವೀಣಾ ತಮ್ಮ ವಿರುದ್ಧದ ದೂರು ರದ್ದುಪಡಿಸಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.



ದೂರಿನಲ್ಲಿ ಕಾಣಿಸಲಾದ ವಿವಾದಿತ ಚೆಕ್‌ಗೆ ತಾವು ಸಹಿ ಹಾಕಿಲ್ಲ. ಹಾಗಾಗಿ ಆರೋಪಿಯನ್ನಾಗಿ ಹೆಸರಿಸಿ ತಮ್ಮನ್ನು ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.



ಈ ಪ್ರಕರಣದಲ್ಲಿ ಕಾಣಿಸಿದ ಚೆಕ್‌ಗೆ ಅರ್ಜಿದಾರರು ಸಹಿ ಹಾಕಿಲ್ಲ. ನೀಡದಾದ ಚೆಕ್‌ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಅರ್ಜಿದಾರರ ಪತಿಯೇ ಚೆಕ್ ನೀಡಿದ್ದಾಗಿ ದೂರಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪ್ರಕರಣದಲ್ಲಿ ಮೂವರನ್ನು ಆರೋಪಿಗಳಾಗಿ ಹೆಸರಿಸಲಾಗಿದ್ದು, ಅವರು ಕಂಪೆನಿ, ಸಂಸ್ಥೆ ಅಥವಾ ಸಂಘವನ್ನು ಆರಂಭಿಸಿಲ್ಲ. ಇಂತಹ ಸನ್ನಿವೇಶದಲ್ಲಿ ಪತಿ ನೀಡಿದ ಅವರ ಸಹಿ ಇರುವ ಚೆಕ್‌ ಅಮಾನ್ಯ ಪ್ರಕರಣದಲ್ಲಿ ಇತರರನ್ನು ಆರೋಪಿ ಮಾಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.


ಅರ್ಜಿದಾರರ ವಿರುದ್ಧ ದೂರು ರದ್ದುಪಡಿಸಿದ ಆದೇಶವು ಅರ್ಜಿದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. 


Click here for Judgement Copy;

ಪ್ರಕರಣ: ವೀಣಾಶ್ರೀ Vs ಶಂಕರ್


Ads on article

Advertise in articles 1

advertising articles 2

Advertise under the article