![ಪರಿಶಿಷ್ಟ ವರ್ಗಕ್ಕೆ ಹೊಸ ಸಮುದಾಯ ಸೇರ್ಪಡೆ: ಮಸೂದೆ ಮಂಡನೆ ಪರಿಶಿಷ್ಟ ವರ್ಗಕ್ಕೆ ಹೊಸ ಸಮುದಾಯ ಸೇರ್ಪಡೆ: ಮಸೂದೆ ಮಂಡನೆ](https://i.ytimg.com/vi/j8dNalZjnf4/hqdefault.jpg)
ಪರಿಶಿಷ್ಟ ವರ್ಗಕ್ಕೆ ಹೊಸ ಸಮುದಾಯ ಸೇರ್ಪಡೆ: ಮಸೂದೆ ಮಂಡನೆ
ಪರಿಶಿಷ್ಟ ವರ್ಗಕ್ಕೆ ಹೊಸ ಸಮುದಾಯ ಸೇರ್ಪಡೆ: ಮಸೂದೆ ಮಂಡನೆ
ಕರ್ನಾಟಕದ ಕಾಡು ಕುರುಬ ಮತ್ತು ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಈ ಮಸೂದೆಯನ್ನು ಮಂಡಿಸಿದರು.. ಕರ್ನಾಟಕ ತಮಿಳುನಾಡು , ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಪರಿಷ್ಕರಿಸಲು ಪ್ರತ್ಯೇಕ ನಾಲ್ಕು ಮಸೂದೆಯನ್ನು ಮಂಡನೆ ಮಾಡಲಾಗಿದೆ.
ಬೆಟ್ಟ ಕುರುಬ ಜನಾಂಗ ಸೇರಿದಂತೆ ಒಟ್ಟು 12 ಜಾತಿಗಳನ್ನು ಪರಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸಚಿವ ಸಂಪುಟ 2022ರ ಸೆಪ್ಟಂಬರ್‌ನಲ್ಲಿ ಅನುಮೋದನೆ ನೀಡಿತ್ತು.
ಕಳೆದ 30 ವರ್ಷಗಳಿಂದ ಕರ್ನಾಟಕದಲ್ಲಿ ಬೆಟ್ಟ ಕುರುಬರು ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯ ಮಾಡಿ ಹೋರಾಟ ನಡೆಸುತ್ತಿದ್ದರು. ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಈ ಸಮುದಾಯದಲ್ಲಿ ಸಂಖ್ಯೆ ಬಹಳವಾಗಿದೆ.
ಇದನ್ನೂ ಓದಿ
PTCL Act- ಎಸ್‌ಸಿ ಎಸ್‌ಟಿ ಜಮೀನು ಪರಭಾರೆ: ಸರ್ಕಾರದಿಂದ ನೂತನ ಸುತ್ತೋಲೆ (28/09/2021)
PTCL Act | DC ಮಟ್ಟದಲ್ಲೇ SC, ST ಜಾಗ ಭೂ ಪರಿವರ್ತನೆ/ಮಾರಾಟ: ಪೂರ್ವಾನುಮತಿ ಬಗ್ಗೆ ಸರ್ಕಾರದ ಮಹತ್ವದ ಸುತ್ತೋಲೆ
SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್