ಅಪಘಾತದಲ್ಲಿ ಬದುಕುಳಿದ ವ್ಯಕ್ತಿಗೆ ಪರಿಹಾರ ನಿರಾಕರಣೆ ಸಮರ್ಥನೀಯವಲ್ಲ: ಸುಪ್ರೀಂ
ಅಪಘಾತದಲ್ಲಿ ಬದುಕುಳಿದ ವ್ಯಕ್ತಿಗೆ ಪರಿಹಾರ ನಿರಾಕರಣೆ ಸಮರ್ಥನೀಯವಲ್ಲ: ಸುಪ್ರೀಂ
ರಸ್ತೆ ಅಪಘಾತ ಪ್ರಕರಣಗಳಲ್ಲಿ ಗಂಭೀರ ಗಾಯಗೊಂಡು ಬದುಕುಳಿದ ವ್ಯಕ್ತಿಗೆ ಭವಿಷ್ಯದಲ್ಲಿ ಎದುರಾಗುವ ಶಾಶ್ವತ ಅಂಗವೈಕಲ್ಯದ ಸಾಧ್ಯತೆಗೆ ಪರಿಹಾರ ಕೊಡುವುದನ್ನು ನಿರಾಕರಿಸುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪರಿಹಾರ ನಿರ್ಧರಿಸುವ ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕ್ರಿಯೆ ಮೂಲಭೂತವಾಗಿ ತುಂಬಾ ಕಠಿಣ ಸವಾಲು. ಇದು ಶತಃಪ್ರತಿಶತ ವೈಜ್ಞಾನಿಕವಾಗಿ ನಡೆಸಲು ಅಸಾಧ್ಯ. ಗಾಯ ಮತ್ತು ಅಂಗವೈಕಲ್ಯಕ್ಕೆ ಪರಿಪೂರ್ಣವಾದ ಪರಿಹಾರ ನಿಗದಿಪಡಿಸುವುದು ಅಷ್ಟು ಸುಲಭವಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಬೆಳಗಾವಿಯಲ್ಲಿ 2012ರ ಜುಲೈನಲ್ಲಿ ನಡೆದ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ. ಜೆ.ಬಿ. ಪಾರ್ದೀವಾಲ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಸದ್ರಿ ಪ್ರಕರಣದಲ್ಲಿ, ಅಪಘಾತದಿಂದ 45%ದಷ್ಟು ಶಾಶ್ವತ ಅಂಗವೂನತ್ವಕ್ಕೆ ಒಳಗಾದ ಅರ್ಜಿದಾರರಿಗೆ ನೀಡಬೇಕಾಗಿರುವ ಪರಿಹಾರದ ಮೊತ್ತವನ್ನು ರೂ. 21,78,600ಕ್ಕೆ ಏರಿಸಿ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲಾ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿ ರೂ. 3,13,800 ಪರಿಹಾರ ಘೋಷಿಸಿ ತೀರ್ಪು ನೀಡಿತ್ತು. ಈ ಪರಿಹಾರದ ಮೊತ್ತವನ್ನು ರೂ. 9,26,800ಕ್ಕೆ ಏರಿಸಿ ಕರ್ನಾಟಕ ಹೈಕೋರ್ಟ್ 2018ರ ಏಪ್ರಿಲ್‌ನಲ್ಲಿ ತೀರ್ಪು ನೀಡಿತ್ತು.
ಈ ಆದೇಶವನ್ನು ಮತ್ತಷ್ಟು ವಿಸ್ತರಿಸುವಂತೆ ಕೋರಿ ಸಿದ್ರಾಮ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ:
ಭ್ರಷ್ಟ ಅಧಿಕಾರಿಗೆ 4 ವರ್ಷ ಸಜೆ, 4 ಲಕ್ಷ ದಂಡ: ಮಂಗಳೂರು ನ್ಯಾಯಾಲಯದ ತೀರ್ಪು
ಮರ್ಡರ್ ಕೇಸಿನಲ್ಲಿ ಜಾಮೀನು ಸಿಗುತ್ತದಾ..? ಶಾಸನಬದ್ಧ ಜಾಮೀನು ಬಗ್ಗೆ ಗೊತ್ತೇ..?
ಕ್ರಿಮಿನಲ್ ಪ್ರಕರಣ ಎದುರಿಸಿದ ವ್ಯಕ್ತಿಗೆ ಉದ್ಯೋಗ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು