ಕನ್ವರ್ಷನ್ ಇನ್ನು ಸರಳ: ಭೂಪರಿವರ್ತನೆ ಕಾಯ್ದೆಗೆ ವಿಧಾನಸಭೆ ಅಂಗೀಕಾರ
ಕನ್ವರ್ಷನ್ ಇನ್ನು ಸರಳ: ಭೂಪರಿವರ್ತನೆ ಕಾಯ್ದೆಗೆ ವಿಧಾನಸಭೆ ಅಂಗೀಕಾರ
ಇನ್ನು ಮುಂದೆ ಕನ್ವರ್ಷನ್ ಸರಳ ಮತ್ತು ಸುಲಭ. ರೈತರು ತಮ್ಮ ಭೂಮಿಯನ್ನು ಕೃಷಿ ಭೂಮಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಬಯಸಿದರೆ, ಏಳು ದಿನಗಳೊಳಗೆ ಭೂ ಪರಿವರ್ತನೆ ಮಾಡಿ ಆದೇಶ ಹೊರಡಿಸಲು ಗಡುವು ನೀಡುವ ಕಾಯ್ದೆಗೆ ರಾಜ್ಯ ವಿಧಾನಸಭೆ ಅಂಗೀಕಾರ ನೀಡಿದೆ.
ಕೃಷಿ ಭೂಮಿಯನ್ನು ರೈತರು ತಮ್ಮ ಸ್ವಂತ ಮನೆ ಮತ್ತು ಕೃಷಿ ಪರಿಕರಗಳನ್ನು ಸಂಗ್ರಹಿಸಿ ಇಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ಭೂ ಪರಿವರ್ತನೆ ಮಾಡಲು ಇಚ್ಚಿಸಿ ಅರ್ಜಿ ಸಲ್ಲಿಸಬಹುದು. ರೈತರು ಹೀಗೆ ಸಲ್ಲಿಸಿದ ಅರ್ಜಿಯನ್ನು ಕೇವಲ ಏಳು ದಿನದ ಒಳಗೆ ಮಂಜೂರಾತಿ ಮಾಡಬೇಕು.
ಈ ಬಗ್ಗೆ ಜಿಲ್ಲಾಧಿಕಾರಿಯವರು ಆದೇಶ ನೀಡುವಂತೆ ಅವರಿಗೆ ಗಡುವು ವಿಧಿಸುವ ಉದ್ದೇಶವನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಹೊಂದಿದೆ. ಸದ್ರಿ ಮಸೂದೆಗೆ 22-12-2022ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಒಪ್ಪಿಗೆ ನೀಡಲಾಯಿತು.
ಭೂ ಪರಿವರ್ತನೆ ಸರಳಿಕರಣ ರಾಜ್ಯ ವಿಧಾನ ಮಂಡಲದಲ್ಲಿ ಮಸೂದೆ ಅಂಗೀಕಾರ
ಮಸೂದೆಯ ಕುರಿತು ವಿವರ ನೀಡಿದ ಕಂದಾಯ ಸಚಿವರು, ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ರೈತ ಸ್ನೇಹಿತರನ್ನು ಮಾಡಲು ತಿದ್ದುಪಡಿ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!