ಅಮಾಯಕನ ಮೇಲೆ ಹಲ್ಲೆ ಪ್ರಕರಣ: ಇನ್ಸ್‌ಪೆಕ್ಟರ್, ಎಸ್‌ಐ ವಿರುದ್ಧ ಜಾಮೀನು ರಹಿತ ವಾರೆಂಟ್
ಅಮಾಯಕನ ಮೇಲೆ ಹಲ್ಲೆ ಪ್ರಕರಣ: ಇನ್ಸ್‌ಪೆಕ್ಟರ್, ಎಸ್‌ಐ ವಿರುದ್ಧ ಜಾಮೀನು ರಹಿತ ವಾರೆಂಟ್
ಯುವಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.
ನಿರಂತರ ವಿಚಾರಣೆಗೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಎಸ್‌ಐ ಶಕ್ತಿವೇಲು ಮತ್ತು ಪೊಲೀಸ್ ನಿರೀಕ್ಷಕರ ಶರಣಗೌಡ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ಉಡುಪಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಈ ಜಾಮೀನುರಹಿತ ಬಂಧನ ವಾರೆಂಟ್‌ನ್ನು ಜಾರಿಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ..?
ಉಡುಪಿಯ ಹೂಡೆ ಗ್ರಾಮದ ನಿವಾಸಿ 27 ವರ್ಷದ ಹಿದಾಯತುಲ್ಲ ಅವರ ಮನೆಗೆ ಪೊಲೀಸ್ ಅಧಿಕಾರಿಗಳಾದ ಶಕ್ತಿವೇಲು ಮತ್ತು ಶರಣಗೌಡ ಮತ್ತಿತರ ಏಳು ಮಂದಿಯ ತಂಡ 2021ರ ನವೆಂಬರ್ 29ರ ಮಧ್ಯರಾತ್ರಿ ನುಗ್ಗಿತ್ತು. ಹೀಗೆ, ಅಕ್ರಮವಾಗಿ ನುಗ್ಗದ ಪೊಲೀಸರು ಹಿದಾಯತುಲ್ಲ ಅವರನ್ನು ಥಳಿಸಿ ಬಂಧನ ಮಾಡಿದ್ದರು.
ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ಬೂಟಿನಿಂದ ಥಳಿಸಿ ಲಾಠಿಯಿಂದ ಹೊಡೆದು ನಿಂದಿಸಿ ಅವಮಾನಿಸಿದ್ದರು. ಎಂಬುದು ದಾಖಲಾಗಿರುವ ಪ್ರಕರಣ..
ಎನ್‌ಕೌಂಟರ್ ಮಾಡಿ ಮುಗಿಸುತ್ತೇವೆ ಎಂದು ಬೆದರಿಸಿದ ಪೊಲೀಸರು, ತಪ್ಪೊಪ್ಪಿಗೆ ಬರಹಕ್ಕೆ ಸಹಿ ಮಾಡಲು ನಿರಂತರವಾಗಿ ದೈಹಿಕ ಹಲ್ಲೆ ನಡೆಸಿದ್ದರು ಎಂಬ ಆರೋಪವನ್ನು ಸದ್ರಿ ಪ್ರಕರಣದಲ್ಲಿ ಮಾಡಲಾಗಿದೆ. ಹೀಗೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಹಿದಾಯತುಲ್ಲ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು.
ಹಲ್ಲೆ ಘಟನೆ ಬಗ್ಗೆ ವೈದ್ಯರಿಗಾಗಲೀ, ನ್ಯಾಯಾಧೀಶರಿಗಾಗಲೀ ತಿಳಿಸಿದ್ದಲ್ಲಿ ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದಾಗಿ ಪೊಲೀಸರು ಬೆದರಿಸಿದ್ದರು.
ಘಟನೆಯ ಬಗ್ಗೆ ತನಗೆ ನ್ಯಾಯ ದೊರಕಿಸಿಕೊಡುವಂತೆ ಹಿದಾಯತುಲ್ಲ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದರು. ಈ ದೂರನ್ನು ದಾಖಲಿಸಿಕೊಂಡ ಉಡುಪಿ ನ್ಯಾಯಾಲಯ, ಮಲ್ಪೆ ಠಾಣೆಯ ಅಂದಿನ ಎಸ್‌ಐ ಶಕ್ತಿವೇಲು ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಶರಣಗೌಡ ವಿರುದ್ಧ ಸಮನ್ಸ್ ಜಾರಿಗೊಳಿಸಿತ್ತು.
ಇದೀಗ ಅವರು ನಿರಂತರ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ನ್ನು ಜಾರಿಗೊಳಿಸಲಾಗಿದೆ.
ಇದನ್ನೂ ಓದಿ:
'ಪರಮಾತ್ಮ'ನಿಗೆ ವಕಾಲತ್ತು: ಸುಪ್ರೀಂ ಕೋರ್ಟಿನಿಂದ ವಕೀಲನಿಗೆ ಛೀಮಾರಿ ಜೊತೆ ಲಕ್ಷ ರೂ. ದಂಡ!
ಸರ್ಕಾರಿ ನೌಕರರಿಗೆ ಸಂಘಟನೆ ನಿರ್ಬಂಧ: ಜಾತಿ, ಭಾಷೆ ಸಂಘ ಸೇರಲು ಕಡಿವಾಣ!
ಕುಡುಕ ಚಾಲಕರಿಗೆ ಕಹಿ ಸುದ್ದಿ! DRINK AND DRIVE ದಂಡ ಕೋರ್ಟಿನಲ್ಲೇ ಕಟ್ಟುವುದು ಕಡ್ಡಾಯ
ಲಂಚದ ಬೇಡಿಕೆಯೂ ಇಲ್ಲ, ಸ್ವೀಕರಿಸಿಯೂ ಇಲ್ಲ: ಸಬ್‌ರಿಜಿಸ್ಟ್ರಾರ್ ವಿರುದ್ಧದ ಕೇಸು ರದ್ದು- ಕರ್ನಾಟಕ ಹೈಕೋರ್ಟ್
ಕ್ರಿಮಿನಲ್ ಪ್ರಕರಣ ಎದುರಿಸಿದ ವ್ಯಕ್ತಿಗೆ ಉದ್ಯೋಗ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು