-->
ವಕೀಲರ ಸಂರಕ್ಷಣಾ ಕಾಯ್ದೆ: ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವಕೀಲರು!

ವಕೀಲರ ಸಂರಕ್ಷಣಾ ಕಾಯ್ದೆ: ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವಕೀಲರು!

ವಕೀಲರ ಸಂರಕ್ಷಣಾ ಕಾಯ್ದೆ: ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವಕೀಲರು!





ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಮಾಡಿ ಎಂದು ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ಮೂಲಕ ಗಾಢ ನಿದ್ರೆಯಲ್ಲಿ ಇದ್ದ ರಾಜ್ಯ ಸರ್ಕಾರಕ್ಕೆ ಛಡಿ ಏಟು ನೀಡಿದ್ದಾರೆ.


ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ನೇತೃತ್ವದಲ್ಲಿ ವಕೀಲರು ಬೃಹತ್ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಕೆಗೆ ಪ್ರಬಲ ಜನಾಕ್ರೋಶವನ್ನು ಬಹಿರಂಗ ಪಡಿಸಿದರು.



ಹಾಸನ, ಚಿಕ್ಕಮಗಳೂರು, ರಾಮನಗರ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವಕೀಲರ ಸಂಘಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರಾಮನಗರದಲ್ಲಿ ಕಲಾಪ ಬಹಿಷ್ಕರಿಸಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ ಮಾಡಲಾಗಿದೆ.


ಮಂಗಳೂರಿನಲ್ಲಿ ಸ್ಥಳೀಯ ಶಾಸಕರಿಗೆ ಮನವಿ ಅರ್ಪಿಸುವ ಮೂಲಕ ವಕೀಲರ ಸಂಘ ತಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿತು.


ಬೆಂಗಳೂರು ವಕೀಲರ ಸಂಘದ ವಕೀಲರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಿಂದ ಉದ್ಯಾನದ ಮೂಲಕ ಮೌರ್ಯ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. 


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಪ್ರಸಕ್ತ ಅಧಿವೇಶನದಲ್ಲೇ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.



ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನೇತೃತ್ವದಲ್ಲಿ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ, ಸ್ಪಂದನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ದನಿಗೂಡಿಸಿದರು.



ಮೌರ್ಯವೃತ್ತದಲ್ಲಿ ವಕೀಲರ ಸಮೂಹದ ಪರವಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ. ಖಜಾಂಚಿ ಎಂ.ಟಿ. ಹರೀಶ್ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.


ಹಾನಗಲ್‌ನಲ್ಲಿ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಹುಕ್ಕೇರಿಯ ಸಂಕೇಶ್ವರ ವಕೀಲರ ಸಂಘದಲ್ಲೂ ಪ್ರತಿಭಟನೆ ನಡೆದಿದೆ. ಕೂಡ್ಲಿಗಿಯಲ್ಲೂ ವಕೀಲರು ಕಾಯ್ದೆ ಪರ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದರು.



ಪಾಂಡವಪುರದಲ್ಲಿ ವಕೀಲರು ಟಿ.ಎಸ್. ಚಿತ್ರದ ಬಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಕಾಯ್ದೆಗೆ ಒತ್ತಾಯ ಮಾಡಿದ್ದಾರೆ.



ಕಾಯ್ದೆ ಪರ ಬೇಡಿಕೆ ಬೆಂಬಲಿಸಿದ ಸಿದ್ದರಾಮಯ್ಯ

ವಕೀಲರ ಸಂರಕ್ಷಣಾ ಕಾಯ್ದೆ ಈ ಅಧಿವೇಶನದಲ್ಲೇ ಜಾರಿಗೊಳಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


Read This Also:

ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ರದ್ದಾಗಿದೆಯೇ..? ಇಲ್ಲಿದೆ ಸ್ಪಷ್ಟೀಕರಣ!


ಕೋರ್ಟ್ ಸುದ್ದಿ: ಜನವರಿಯಿಂದ ಜಾರಿಗೆ ಬರಲಿದೆ ಡಿಜಿಟಲ್ ವಕಾಲತ್ತು




Ads on article

Advertise in articles 1

advertising articles 2

Advertise under the article