ಸಾಂದರ್ಭಿಕ ಸಾಕ್ಷ್ಯ ಪರಿಗಣಿಸಿ ಸಾರ್ವಜನಿಕ ಸೇವಕರನ್ನು ದೋಷಿ ಎನ್ನಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಾಂದರ್ಭಿಕ ಸಾಕ್ಷ್ಯ ಪರಿಗಣಿಸಿ ಸಾರ್ವಜನಿಕ ಸೇವಕರನ್ನು ದೋಷಿ ಎನ್ನಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಭ್ರಷ್ಟಾಚಾರ ಎಸಗಿದ ಸಾರ್ವಜನಿಕ ಸೇವಕರನ್ನು ನೇರ ಸಾಕ್ಷ್ಯದ ಅನುಪಸ್ಥಿತಿಯಲ್ಲಿ ಸಾಂದರ್ಭಿಕ ಸಾಕ್ಷ್ಯವನ್ನು ಪರಿಗಣಿಸಿ ದೋಷಿ ಎಂದು ಹೇಳಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನೇರ ಮೌಖಿಕ ಸಾಕ್ಷ್ಯ ಯಾ ದಾಖಲೆಯ ಸಾಕ್ಷ್ಯ ಇಲ್ಲದಿದ್ದರೂ ಲಂಚದ ಬೇಡಿಕೆ ಇಟ್ಟಿರುವುದಕ್ಕೆ ಯಾ ಪಡೆದಿರುವುದಕ್ಕೆ ಸಾಂದರ್ಭಿಕ ಸಾಕ್ಷ್ಯ ಇದ್ದರೂ ಭ್ರಷ್ಟಾಚಾರವನ್ನು ಸಾಬೀತುಪಡಿಸಬಹುದು ಎಂದು ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ತೀರ್ಪು ನೀಡಿದೆ.
ನ್ಯಾ. ವಿ. ರಾಮಸುಬ್ರಹ್ಮಣ್ಯನ್, ನ್ಯಾ. ಬಿ.ಆರ್. ಗವಾಯಿ, ನ್ಯಾ. ಅಬ್ದುಲ್ ನಜೀರ್, ನ್ಯಾ. ಎ.ಎಸ್. ಬೋಪಣ್ಣ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ, 'ದೂರುದಾರರ ಬಳಿ ಸೂಕ್ತ ಪುರಾವೆಗಳು ಇಲ್ಲದಿದ್ದಾಗ ಅಪರಾಧವನ್ನು ತಾರ್ಕಿಕವಾಗಿ ಮಂಡಿಸಲು ಅನುಮತಿ ಇದೆ' ಎಂದು ಹೇಳಿದೆ.
ಪ್ರಕರಣ: ನೀರಜ್ ದತ್ತಾ Vs ದೆಹಲಿ ಸರ್ಕಾರ
ಸುಪ್ರೀಂ ಕೋರ್ಟ್, Dated: 15-12-2022
ಆದರೆ, ಅಪರಾಧದ ಮೂಲಭೂತ ಸಂಗತಿಗಳನ್ನು ಸಾಬೀತುಪಡಿಸಿದರೆ ಮಾತ್ರ ಸಾಂದರ್ಭಿಕ ಸಾಕ್ಷ್ಯದ ಲಾಭವನ್ನು ದೂರುದಾರರು ಪಡೆಯಬಹುದು. ಲಂಚದ ಬೇಡಿಕೆ ಯಾ ಸ್ವೀಕಾರಕ್ಕೆ ಸಂಬಂಧಿಸಿದ ಪೂರ್ವಭಾವನೆ(Presumption) ಯನ್ನು ನ್ಯಾಯಾಲಯ ತಾರ್ಕಿಕವಾಗಿ ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದೇ ವೇಳೆ, ಲಂಚದ ಬೇಡಿಕೆ ಮತ್ತು ಲಂಚದ ಹಣ ಸ್ವೀಕೃತಿ ಸಾಬೀತುಪಡಿಸುವ ವಿವಿಧ ಅಂಶಗಳನ್ನು ವಿವರಿಸಿದ ನ್ಯಾಯಾಲಯ, ಕಲಂ 7 ಮತ್ತು ಕಲಂ 13(1)(1) ಅಡಿಯಲ್ಲಿ ಅಪರಾಧಗಳಿಗೆ ಶಿಕ್ಷೆ ನೀಡಲು ಅಗತ್ಯವಾದ ಪುರಾವೆಗಳ ಸ್ವರೂಪ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪಿನ ಜೊತೆಗೆ ಈ ತೀರ್ಪಿನಲ್ಲಿ ಯಾವುದೇ ಸಂಘರ್ಷಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.
Judgement Copy : ಪ್ರಕರಣ: ನೀರಜ್ ದತ್ತಾ Vs ದೆಹಲಿ ಸರ್ಕಾರ, ಸುಪ್ರೀಂ ಕೋರ್ಟ್, Dated: 15-12-2022
ಇದನ್ನೂ ಓದಿ:
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ