ಐವರು ಹೈಕೋರ್ಟ್ ನ್ಯಾಯಾಧೀಶರಿಗೆ ಬಡ್ತಿ: ಕೊಲೀಜಿಯಂ ಶಿಫಾರಸ್ಸು
ಐವರು ಹೈಕೋರ್ಟ್ ನ್ಯಾಯಾಧೀಶರಿಗೆ ಬಡ್ತಿ: ಕೊಲೀಜಿಯಂ ಶಿಫಾರಸ್ಸು
ಐವರು ಹೈಕೋರ್ಟ್ ನ್ಯಾಯಾಧೀಶರಿಗೆ ಬಡ್ತಿ ನೀಡುವಂತೆ ಕೊಲೀಜಿಯಂ ಸಭೆಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ ಚಂದ್ರಚೂಡ್ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಕೊಲೀಜಿಯಂ ಈ ಶಿಫಾರಸ್ಸು ಮಾಡಿದೆ.
ಕೊಲೀಜಿಯಂ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಪರಸ್ಪರ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲೇ ಈ ಶಿಫಾರಸ್ಸು ಮಾಡಲಾಗಿದ್ದು, ತಿಕ್ಕಾಟ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ಶಿಫಾರಸ್ಸು ಮಾಡಲಾಗಿದೆ.
ರಾಜಸ್ತಾನ ಹೈಕೋರ್ಟ್‌ನ ಸಿಜೆ ಪಂಕಜ್ ಮಿತ್ತಲ್, ಪಾಟ್ನಾ ಹೈಕೋರ್ಟ್ ಸಿಜೆ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್‌ನ ಸಿಜೆ ಪಿ.ವಿ. ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್‌ನ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್‌ನ ನ್ಯಾ. ಮನೋಜ್ ಮಿಶ್ರಾ ಅವರಿಗೆ ಬಡ್ತಿ ನೀಡಿ ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡುವಂತೆ ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ಕೊಲೀಜಿಯಂ ಸಭೆಯಲ್ಲಿ 10 ನ್ಯಾಯಮೂರ್ತಿಗಳಿಗೆ ಬಡ್ತಿಗೆ ಶಿಫಾರಸ್ಸು ಮಾಡಲಾಗಿದ್ದು, ಈ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ.