ಕೋರ್ಟ್ ಸುದ್ದಿ: ಜನವರಿಯಿಂದ ಡಿಜಿಟಲ್ ವಕಾಲತ್ತು ಜಾರಿಗೆ !
ಕೋರ್ಟ್ ಸುದ್ದಿ: ಜನವರಿಯಿಂದ ಡಿಜಿಟಲ್ ವಕಾಲತ್ತು ಜಾರಿಗೆ !
ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ನ್ಯಾಯಾಲಯಗಳೂ ಹೆಜ್ಜೆ ಹಾಕಲು ನಿರ್ಧರಿಸಿದೆ.
ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಫಿಸಿಕಲ್ ಕಲಾಪಕ್ಕೆ ಬದಲಾಗಿ ವರ್ಚುವಲ್ ಕಲಾಪಕ್ಕೆ ಜೈ ಎಂದಿದ್ದ ಸುಪ್ರೀಂ ಕೋರ್ಟ್ ಇದೀಗ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ.
ಜನವರಿ ಒಂದರಿಂದ ಕಾಗದರಹಿತ ವಕಾಲತ್ತು ಫಾರಂನ್ನು ಬಿಡುಗಡೆ ಮಾಡಲಿದೆ. ಜನವರಿ 1ರಿಂದ ವಕೀಲರು ತಮ್ಮ ಹಾಜರಾತಿಯನ್ನು ತೋರಿಸಲು ಹಸ್ತಚಾಲಿತ ಸ್ಲಿಪ್ ನೀಡಬೇಕಾಗಿಲ್ಲ. ಅದಕ್ಕೆ ಬದಲಾಗಿ Advocate appearance Portalಗೆ ಲಾಗ್ ಇನ್ ಆದರೆ ಸಾಕು.
ಈ ವಿಷಯವನ್ನು ಸ್ವತಃ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಬಹಿರಂಗ ಪಡಿಸಿದ್ದಾರೆ. ಹೊಸ ಹೆಜ್ಜೆಯಾಗಿ ಜನವರಿ ಒಂದರಂದು ಈ ಡಿಜಿಟಲ್ ವೇದಿಕೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ