ಮಹಿಳಾ ವೈದ್ಯರನ್ನು ಬಂಧಿಸಿದ ಪೊಲೀಸರು: ಡಿವೈಎಸ್‌ಪಿಯ ಬೆಂಡೆತ್ತಿದ ಹೈಕೋರ್ಟ್ ನ್ಯಾಯಾಧೀಶರು
ಮಹಿಳಾ ವೈದ್ಯರನ್ನು ಬಂಧಿಸಿದ ಪೊಲೀಸರು: ಡಿವೈಎಸ್‌ಪಿಯ ಬೆಂಡೆತ್ತಿದ ಹೈಕೋರ್ಟ್ ನ್ಯಾಯಾಧೀಶರು
ಮಹಿಳಾ ವೈದ್ಯರನ್ನು ತರಾತುರಿಯಲ್ಲಿ ಬಂಧಿಸಿದ ಡಿವೈಎಸ್‌ಪಿ Rank ಪೊಲೀಸ್ ಅಧಿಕಾರಿಯನ್ನು ಹೈಕೋರ್ಟ್‌ನಲ್ಲಿ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಟ್ನಾ ಹೈಕೋರ್ಟ್‌ನ ಮಾನ್ಯ ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್, ತಮ್ಮ ಅಧಿಕಾರವನ್ನು ಬೇಕಾಬಿಟ್ಟಿ ಬಳಸಿದ ಪೊಲೀಸ್ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ವೈದ್ಯರು ಸಂಭಾವಿತರು. ಅದೂ ಮಹಿಳಾ ವೈದ್ಯರನ್ನು ಏಕಾಏಕಿ ಬಂಧಿಸುವ ಅವಶ್ಯಕತೆ ಏನಿದೆ..? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಅವರ ಕ್ಲಿನಿಕ್ ಮುಚ್ಚುವಂತೆ ಮಾಡಿದ್ದೀರಿ, ಸಾರ್ವಜನಿಕವಾಗಿ ತಲೆತಗ್ಗಿಸುವಂತೆ ಮಾಡಿದ್ದೀರಿ ಎಂದು ಡಿವೈಎಸ್‌ಪಿಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀವು ನಿವೃತ್ತಿ ಹೊಂದಿದ ಮೇಲೆ ನಿಮಗೂ ನಿಮ್ಮ ಅಧಿಕಾರಿಗಳು ಈ ರೀತಿಯ ದುರ್ವರ್ತನೆ ತೋರಿದರೆ ಹೇಗಾದೀತು ಎಂದು ಪ್ರಶ್ನಿಸಿದ ಅವರು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಉಲ್ಲೇಖಿಸಿದರು.
ಇದನ್ನೂ ಓದಿ:
ಸೆಕ್ಷನ್ 498 A ದುರುಪಯೋಗ: ವಕೀಲರ ಸಾಮಾಜಿಕ ಜವಾಬ್ದಾರಿ ಎತ್ತಿಹಿಡಿಯಲು ಸುಪ್ರೀಂ ಕೋರ್ಟ್ ಕರೆ
ಕೌಟುಂಬಿಕ ಹಿಂಸಾಚಾರ ಕಾಯ್ದೆ ದುರುಪಯೋಗ ಮಾಡಿದ ಪತ್ನಿಗೆ ಭಾರೀ ದಂಡ: ಶ್ರೀನಗರ ನ್ಯಾಯಾಲಯ