ಭೂ ದಾಖಲೆ ಸರಿಪಡಿಸಿಕೊಡದ ತಹಶೀಲ್ದಾರ್: 3 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಭೂ ದಾಖಲೆ ಸರಿಪಡಿಸಿಕೊಡದ ತಹಶೀಲ್ದಾರ್: 3 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಕೋರ್ಟಿನ ಆದೇಶದ ಇದ್ದರೂ. ಅದನ್ನು ಕಡೆಗಣಿಸಿ ಹಿರಿಯ ನಾಗರಿಕರೊಬ್ಬರಿಗೆ ಸಲ್ಲಬೇಕಾದ ರೀತಿಯಲ್ಲಿ ಅವರ ಭೂಮಿಯ ದಾಖಲೆ ಸರಿಪಡಿಸಿಕೊಡಲು ಉಡಾಫೆ ತೋರಿದ್ದ ತಹಶೀಲ್ದಾರ್ ಗೆ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ತಹಶೀಲ್ದಾರ್‌ಗೆ ಮೂರು ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ ತಹಶೀಲ್ದಾರ್ ಭೂ ದಾಖಲೆಗಳನ್ನು ಮಾಡಿಕೊಡಬೇಕಿತ್ತು. ಆದರೆ, ಕೋರ್ಟ್ ಆದೇಶದ ಹೊರತಾಗಿಯೂ ತಹಶೀಲ್ದಾರ್ ಉಡಾಫೆ ಧೋರಣೆ ತೋರಿದ್ದಾರೆ ಎಂದು ಮಂಡ್ಯದ 71 ವರ್ಷದ ವೃದ್ಧೆ ಪಾರ್ವತಮ್ಮ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಕೆ.ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿ ತಹಶೀಲ್ದಾರ್‌ಗೆ ದಂಡ ವಿಧಿಸಿದೆ.
ಪೀಠ ತನ್ನ ಆದೇಶದಲ್ಲಿ, ಹೈಕೋರ್ಟ್ ಆದೇಶದ ಹೊರತಾಗಿಯೂ ವೃದ್ದೆಯ
ಕೋರ್ಟ್ ತೀರ್ಪಿದ್ದರೂ ಹಿರಿಯ ನಾಗರಿಕರ ಭೂ ದಾಖಲೆ ಸರಿಪಡಿಸಿಲ್ಲ. ಈ ಇಳಿವಯಸ್ಸಲ್ಲೂ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ ಮೂರು ಲಕ್ಷ ರೂಗಳ ಜುಲ್ಮಾನೆಯನ್ನು 2014 ರ ಜುಲೈ 24 ರಿಂದ 2022ರ ಫೆಬ್ರವರಿ 10 ರವರೆಗೆ ಪಾಂಡವಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್ ಗಳಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ವಸೂಲಿ ಮಾಡುವಂತೆ ಆದೇಶಿಸಿದೆ.
ಅಷ್ಟೇ ಅಲ್ಲ, ದಂಡ ವಿಧಿಸಿರುವ ವಿಚಾರವನ್ನೂ ಭೂ ದಾಖಲೆಯಲ್ಲೂ ನಮೂದಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಈ ಆದೇಶ ಪಾಲಿಸದಿದ್ದರೆ ಜಿಲ್ಲಾಧಿಕಾರಿ ವಿರುದ್ಧವೂ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಅರ್ಜಿದಾರರು ಸದ್ರಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ ನಂತರ, ಹೈಕೋರ್ಟ್ ನೋಟಿಸ್ ಬಳಿಕ ಎಚ್ಚೆತ್ತುಕೊಂಡಿದ್ದ ಸರ್ಕಾರ 2022ರ ಜನವರಿಯಲ್ಲಿ ವಿವರವಾದ ಮಾರ್ಗಸೂಚಿ ಹೊರಡಿಸಿತ್ತು. ಅದರ ಪ್ರಕಾರ, ಸಾರ್ವಜನಿಕರ ಭೂಮಿ ಸರ್ವೇ, ಪೋಡಿ, ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ. ಈ ಮಾರ್ಗಸೂಚಿ ಇದ್ದರೂ ಅಧಿಕಾರಿಗಳು ಕೆಲಸ ಮಾಡದಿರುವುದು ಖೇದನೀಯ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕುರಹಟ್ಟಿ ಗ್ರಾಮದ ಪಾರ್ವತಮ್ಮ ತಮ್ಮ 2 ಎಕರೆ 3 ಗುಂಟೆ ಜಮೀನಿನ ಸರ್ವೇ, ಪೋಡಿ ಹಾಗೂ ದುರಸ್ತಿ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ 2014 ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ 2014ರ ಜುಲೈ 24 ರಂದು ಕಂದಾಯ ಇಲಾಖೆ ಅಧಿಕಾರಿಗಳು ಮುಂದಿನ 9 ತಿಂಗಳ ಒಳಗೆ ಸರ್ವೇ, ಪೋಡಿ, ದುರಸ್ತಿ ಮಾಡಿ ದಾಖಲೆ ಸರಿಪಡಿಸಿಕೊಡುವಂತೆ ಆದೇಶಿಸಿತ್ತು.
ಇದನ್ನೂ ಓದಿ
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!