ವ್ಯಾಪಾರಿಯಿಂದ 25 ಲಕ್ಷ ಸುಲಿಗೆ: ಬೆಂಗಳೂರು ಪೊಲೀಸರ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್
ವ್ಯಾಪಾರಿಯಿಂದ 25 ಲಕ್ಷ ಸುಲಿಗೆ: ಬೆಂಗಳೂರು ಪೊಲೀಸರ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್
ದೆಹಲಿಗೆ ತೆರಳಿ ಅಲ್ಲಿ ವ್ಯಾಪಾರಿಯೊಬ್ಬರಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಪುರ ಠಾಣೆಯ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವಿವಿ ಪುರ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ನವದೆಹಲಿಯಲ್ಲಿ ಉದ್ಯಮಿ ದೂರು ನೀಡಿದ್ದು, ಈ ದೂರನ್ನು ಆಧರಿಸಿ ಸೀಮಾಪುರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ವ್ಯಾಪಾರಿ ಪಂಕಜ್ ಜೈನ್ ಎಂಬುವರಿಗೆ ನೋಟಿಸ್ ನೀಡಲು ಪೊಲೀಸರು ದೆಹಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ವ್ಯಾಪಾರಿಯಿಂದ 25 ಲಕ್ಷ ಹಣ ವಸೂಲಿ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
'ಜಿಲ್ ಮಿಲ್' ಇಂಡಸ್ಟ್ರಿಯಲ್ ಏರಿಯಾದಲ್ಲಿ ತಾವು ಸಿಸಿಟಿವಿ ಕ್ಯಾಮೆರಾ ತಯಾರಿಸುವ ಕಾರ್ಖಾನೆ ಹೊಂದಿರುತ್ತೇನೆ. ಡಿಸೆಂಬರ್ 23ರಂದು ಪೊಲೀಸರಾದ ಸತೀಶ್, ಮುತ್ತುರಾಜ್ ಹಾಗೂ ಬಸವರಾಜ ಪಾಟೀಲ್ ಎಂಬವರು ನನ್ನ ಬಳಿಗೆ ಬಂದು ನನಗೆ ಬೆದರಿಕೆ ಹಾಕಿದ್ದರು. ನಿಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ಇದೆ ಎಂದು ಪೊಲೀಸರು ಬೆದರಿಸಿದರು. ನಾವು ಕೇಳಿದಷ್ಟು ಹಣ ಕೊಡದಿದ್ದರೆ ಅರೆಸ್ಟ್ ಮಾಡಿ ನಿಮಗೆ ತೊಂದರೆ ಕೊಡುತ್ತೇವೆ, ಹಾಗೂ ನಿಮ್ಮ ಫ್ಯಾಕ್ಟರಿ ಬಂದ್ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದರು.
ಏಳು ಲಕ್ಷ ರೂಪಾಯಿ ನಗದು ಹಾಗೂ 13 ಲಕ್ಷ ರೂ.ಗಳನ್ನು ಮಧ್ಯವರ್ತಿಗಳ ಹೆಸರಿನಲ್ಲಿ ನೀಡುವಂತೆ ಅವರು ಒತ್ತಡ ಹೇರಿದರು. ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಂಕಜ್ ಜೈನ್ ದೂರಿನಲ್ಲಿ ತಿಳಿಸಿದ್ದಾರೆ.
ಸೀಮಾಪುರಿ ಠಾಣೆ ಪೊಲೀಸರು ಈ ದೂರನ್ನು ಪಡೆದುಕೊಂಡು ಆರೋಪಿ ಪೊಲೀಸರ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!