ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ಪ್ರೀಮಿಯಮ್ ಹಣ ಕಟ್ಟಿದ್ದರೂ ಜೀವ ವಿಮೆ ನೀಡದೆ ಸತಾಯಿಸಿದ್ದ ಎಚ್‌ಡಿಎಫ್‌ಸಿ ವಿಮಾ ಕಂಪೆನಿಗೆ ಗ್ರಾಹಕ ನ್ಯಾಯಾಲಯ ಬಿಸಿ ಮುಟ್ಟಿಸಿದೆ.
ಮನೆಯನ್ನು ಅಡವು ಇರಿಸಿ ಗ್ರಾಹಕರೊಬ್ಬರು ರೂ. 30 ಲಕ್ಷ ಸಾಲ ಪಡೆದಿದ್ದರು. ನಂತರ ಅಷ್ಟೇ ಮತ್ತದ ಜೀವ ವಿಮೆ ಪಾಲಿಸಿ ಪಡೆದು ಪ್ರೀಮಿಯಂ ಕಟ್ಟಿದ್ದರು. ಆದರೆ, ಆ ಗ್ರಾಹಕರ ಸಾವಿನ ನಂತರ ಜೀವವಿಮ ಹಣ ಪಾವತಿಸಲು ಹೆಚ್ ಡಿ ಎಫ್ ಸಿ ವಿಮಾ ಕಂಪನಿ ನಿರಾಕರಿಸಿತ್ತು.
ವಿಮಾ ಕಂಪೆನಿಯ ವಿರುದ್ಧ ಮೃತ ಮಹಿಳೆಯ ಪತಿ ಗ್ರಾಹಕರ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಅವರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಬೆಂಗಳೂರು ನಗರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಅಧ್ಯಕ್ಷ ಕೆ ಶಿವರಾಂ ಹಾಗೂ ಸದಸ್ಯರಾದ ರೇಖಾ ಸಾಯಣ್ಣವರ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಸಂತ್ರಸ್ತ ಗ್ರಾಹಕರಿಗೆ ವಾರ್ಷಿಕ ಒಂಬತ್ತು 9ರಷ್ಟು ಬಡ್ಡಿ ಸಹಿತ 30 ಲಕ್ಷವನ್ನು ನೀಡಬೇಕು ಎಂದು HDFC ವಿಮಾ ಕಂಪೆನಿಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ವಿವರ
ನಗರದ ವಿದ್ಯಾರಣ್ಯಪುರಂ ನರಸೀಪುರ ಲೇಔಟ್ ನಿವಾಸಿ ಸುಜಾತ ತಮ್ಮ ಮಾಲಕತ್ವ ಹೊಂದಿದ್ದ ಸ್ಥಿರಾಸ್ತಿಯನ್ನು ಅಡಮಾನ ಇರಿಸಿ HDB ಗೃಹ ಸಾಲದ ಫೈನಾನ್ಸ್ ಕಂಪನಿಯಿಂದ 30 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದರು.
ಈ ಸಾಲದ ಗ್ಯಾರಂಟಿಗೆ ಎಚ್ ಡಿ ಎಫ್ ಸಿ ವಿಮಾ ಪಾಲಿಸಿ ಮಾಡಿಸಿ ರೂಪಾಯಿ 30,000 ಪ್ರೀಮಿಯಂ ಪಾವತಿ ಮಾಡಿದ್ದರು. ಇದಾದ ಕೆಲ ತಿಂಗಳಲ್ಲಿ ಅಂದರೆ 2020 ಜುಲೈ ಏಳರಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಇವರ ನಿಧನ ನಂತರ ಪಾಲಿಸಿಯ ನಾಮಿನಿ ಹೊಂದಿದ್ದ ಬಿ ಆರ್ ಗೋಪಾಲ್ ಪಾಲಿಸಿಯ ಮೊತ್ತ ರೂ. 30 ಲಕ್ಷವನ್ನು ವಾರ್ಷಿಕ 24ರ ಬಡ್ಡಿ ದರದಲ್ಲಿ ನೀಡಬೇಕು ಎಂದು ಕೋರಿ ಕಂಪನಿಗೆ ಕ್ಲೇಮು ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಕಂಪನಿ ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಗೋಪಾಲ ಅವರು ಗ್ರಾಹಕರ ಆಯೋಗದಲ್ಲಿ ಪರಿಹಾರ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಗ್ರಾಹಕ ನ್ಯಾಯಾಲಯ, ವಿಮಾ ಕಂಪೆನಿಗೆ ನೋಟೀಸ್ ಜಾರಿಗೊಳಿಸಿತ್ತು.
ವಿಮ ಪಾಲಿಸಿ ಪಡೆಯುವ ಮುನ್ನವೇ ಸುಜಾತಾ ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ನಿದ್ರೆಯಲ್ಲಿಯೇ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರು ಹಾಗೂ ಈ ಕಾಯಿಲೆಗಳ ಕಾರಣದಿಂದಾಗಿಯೇ ಅವರು ಮೃತಪಟ್ಟಿದ್ದಾರೆ. ಅವರ ಸಾವು ಹೃದಯಘಾತದಿಂದ ಆಗಿದ್ದಲ್ಲ. ಹಾಗಾಗಿ ಕಂಪನಿಯ ಸೇವೆಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಕಂಪನಿ ವಾದಿಸಿತ್ತು.
ತನ್ನ ಸೇವೆಯಲ್ಲಿ ವಿಮಾ ಕಂಪನಿ ಲೋಪ ಎಸಗಿದೆಯೇ..? ದೂರುದಾರರು ತಾವು ಕೋರಿರುವ ಪರಿಹಾರಕ್ಕೆ ಅರ್ಹರೇ..? ಎಂಬ ವಿವಾದಾಂಶಗಳನ್ನು ಗ್ರಾಹಕ ನ್ಯಾಯಾಲಯ ಇತ್ಯರ್ಥಪಡಿಸಿತು.
ವೈದ್ಯಕೀಯ ಅಧಿಕಾರಿಗಳು ನೀಡಿರುವ ದಾಖಲೆಗಳ ಪ್ರಕಾರ ಸುಜಾತ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂಬುದನ್ನು ನ್ಯಾಯಾಲಯ ದೃಢಪಡಿಸಿಕೊಂಡು ವಿಮಾ ಕಂಪೆನಿಯ ವಾದವನ್ನು ತಿರಸ್ಕರಿಸಿ ಗ್ರಾಹಕರಿಗೆ ಪರಿಹಾರ ನೀಡುವಂತೆ ಆದೇಶ ಹೊರಡಿಸಿತು.
ಇದನ್ನೂ ಓದಿ
ಕ್ಯಾರಿ ಬ್ಯಾಗ್‌ಗೆ 24 ರೂ.: ಗ್ರಾಹಕರಿಗೆ ಪರಿಹಾರ ನೀಡಲು ರಿಲಯನ್ಸ್ ರಿಟೇಲ್‌ಗೆ ಆದೇಶ
ಪ್ರತಿವಾದ ಸಲ್ಲಿಸಲು ಗ್ರಾಹಕ ನ್ಯಾಯಾಲಯ 15 ದಿನದ ವಿಳಂಬ ಮನ್ನಿಸಬಹುದು: ಸುಪ್ರೀಂ ತೀರ್ಪು
ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ: ಸ್ಟೇಟ್ ಬ್ಯಾಂಕಿಗೆ ದಂಡದ ಬರೆ-ಗ್ರಾಹಕರ ಆಯೋಗದ ತೀರ್ಪು