ಭ್ರಷ್ಟಾಚಾರ ಆರೋಪ: ಜಡ್ಜ್‌ರನ್ನು ದೋಷಮುಕ್ತಗೊಳಿಸಿದ ಕರ್ನಾಟಕ ಹೈಕೋರ್ಟ್, ಮರುನಿಯುಕ್ತಿಗೆ ಆದೇಶ
ಭ್ರಷ್ಟಾಚಾರ ಆರೋಪ: ಜಡ್ಜ್‌ರನ್ನು ದೋಷಮುಕ್ತಗೊಳಿಸಿದ ಕರ್ನಾಟಕ ಹೈಕೋರ್ಟ್, ಮರುನಿಯುಕ್ತಿಗೆ ಆದೇಶ
2010 ರಲ್ಲಿ ಮಂಗಳೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಆನಂದ ಎನ್. ಪಟ್ಟಣ ಅವರನ್ನು ನ್ಯಾಯಾಂಗ ಸೇವೆಗೆ ಮರು ನಿಯುಕ್ತಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಭ್ರಷ್ಟಾಚಾರದ ಆರೋಪದ ಮೇಲೆ ಶ್ರೀ ಆನಂದ ಎನ್ ಪಟ್ಟಣ ಅವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಬಳಿಕ 1-10-2012 ರಂದು ಕರ್ನಾಟಕ ಹೈಕೋರ್ಟ್ ಆನಂದ್ ಅವರನ್ನು ನ್ಯಾಯಾಂಗ ಸೇವೆಯಿಂದ ವಜಾಗೊಳಿಸಿತ್ತು.
ಸದ್ರಿ ಆದೇಶವನ್ನು ಪ್ರಶ್ನಿಸಿ ಶ್ರೀ ಆನಂದ ಎನ್. ಪಟ್ಟಣ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದಿನಾಂಕ 29.6.2017ರಂದು ರಿಟ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್ ವಾದ ವಿವಾದವನ್ನು ಪರಿಶೀಲಿಸಿ ಅರ್ಜಿಯನ್ನು ಪುರಸ್ಕರಿಸಿತ್ತು.
ಸುದೀರ್ಘ ವಿಚಾರಣೆಯ ಬಳಿಕ ಕರ್ನಾಟಕ ಹೈಕೋರ್ಟ್, ಆನಂದ ನಾಗಪ್ಪ ಪಟ್ಟಣ ಅವರನ್ನು ದೋಷ ಮುಕ್ತಗೊಳಿಸಿತು.
ಅದೇ ರೀತಿ, ನ್ಯಾಯಾಂಗ ಸೇವೆಯಿಂದ ವಜಾಗೊಳಿಸಿ ಹೈಕೋರ್ಟ್ ಹೊರಡಿಸಿದ ದಿನಾಂಕ 1.10.2012 ರ ಆದೇಶವನ್ನು ರದ್ದುಪಡಿಸಿತು. ಮಾತ್ರವಲ್ಲದೆ, ವೇತನ ಸಹಿತ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ಅವರನ್ನು ರಾಜ್ಯದ ನ್ಯಾಯಾಂಗ ಸೇವೆಗೆ ಮರುನಿಯುಕ್ತಿಗೊಳಿಸುವಂತೆ ಆದೇಶಿಸಿತು.
ಪ್ರಕರಣ: ಆನಂದ ಎನ್. ಪಟ್ಟಣ Vs ಕರ್ನಾಟಕ ಹೈಕೋರ್ಟ್ ಮತ್ತಿತರರು
ಕರ್ನಾಟಕ ಹೈಕೋರ್ಟ್, W P No 8640/2013
ಇದನ್ನೂ ಓದಿ:
ಮಂಗಳೂರು ಪೊಲೀಸರ ಯಡವಟ್ಟು: ಐದು ಲಕ್ಷ ರೂಪಾಯಿ ದಂಡದ ಶಿಕ್ಷೆಗೆ ಗುರಿಯಾದ ಖಾಕಿ ಪಡೆ!
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು