-->
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು: ವಿಶಾಲ್‌ ರಘುಗೆ ಅಧ್ಯಕ್ಷಗಾದಿಯ ಮುಕುಟ

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು: ವಿಶಾಲ್‌ ರಘುಗೆ ಅಧ್ಯಕ್ಷಗಾದಿಯ ಮುಕುಟ

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು: ವಿಶಾಲ್‌ ರಘುಗೆ ಅಧ್ಯಕ್ಷಗಾದಿಯ ಮುಕುಟ





ವಕೀಲರಾದ ಎಚ್‌ ಎಲ್‌ ವಿಶಾಲ್‌ ರಘು ಅವರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (KSBC) ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ವಿನಯ್ ಮಂಗಳೇಕರ್ ಬಾಳಾಸಾಹೇಬ್ ಅವರು ಪರಿಷತ್ತಿನ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ವಕೀಲರಾದ ವಿಶಾಲ್‌ ರಘು ಮೂಲತಃ ಮಂಡ್ಯದವರು. ಉಪಾಧ್ಯಕ್ಷರಾಗಿ ಆಯ್ಕೆಯಾದ ವಿನಯ್ ಮಂಗಳೇಕರ್ ಅವರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ರಾಜ್ಯ ವಕೀಲರ ಪರಿಷತ್ತಿನ ನಿಯಮ 8ರ ಅಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗಿದೆ.



ನೂತನ ಅಧ್ಯಕ್ಷರು ಮತ್ತು ನೂತನ ಉಪಾಧ್ಯಕ್ಷರ ಅಧಿಕಾರಾವಧಿ ಒಂದು ವರ್ಷ ಇರಲಿದೆ. 25 ಸದಸ್ಯರ ಕೆಎಸ್‌ಬಿಸಿಯಲ್ಲಿ ಅಡ್ವಕೇಟ್ ಜನರಲ್‌ ಅವರು ಪದನಿಮಿತ್ತ ಸದಸ್ಯರಾಗಿದ್ದು, ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.



ನಿಕಟಪೂರ್ವ ಅಧ್ಯಕ್ಷ ಎಂ ಕಾಶೀನಾಥ್‌ ಮತ್ತು ಉಪಾಧ್ಯಕ್ಷ ಬಿ. ಆರ್‌. ಚಂದ್ರಮೌಳಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.


Read This Also:

ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ರದ್ದಾಗಿದೆಯೇ..? ಇಲ್ಲಿದೆ ಸ್ಪಷ್ಟೀಕರಣ!


ಕೋರ್ಟ್ ಸುದ್ದಿ: ಜನವರಿಯಿಂದ ಜಾರಿಗೆ ಬರಲಿದೆ ಡಿಜಿಟಲ್ ವಕಾಲತ್ತು



Ads on article

Advertise in articles 1

advertising articles 2

Advertise under the article