-->
ಬೆಲೆ ಏರಿಕೆ, ಹಣದುಬ್ಬರ ಎಫೆಕ್ಟ್‌: ಪತ್ನಿಯ ಜೀವನಾಂಶವನ್ನೂ ದುಪ್ಪಟ್ಟುಗೊಳಿಸಿದ ಹೈಕೋರ್ಟ್‌

ಬೆಲೆ ಏರಿಕೆ, ಹಣದುಬ್ಬರ ಎಫೆಕ್ಟ್‌: ಪತ್ನಿಯ ಜೀವನಾಂಶವನ್ನೂ ದುಪ್ಪಟ್ಟುಗೊಳಿಸಿದ ಹೈಕೋರ್ಟ್‌

ಬೆಲೆ ಏರಿಕೆ, ಹಣದುಬ್ಬರ ಎಫೆಕ್ಟ್‌: ಪತ್ನಿಯ ಜೀವನಾಂಶವನ್ನೂ ದುಪ್ಪಟ್ಟುಗೊಳಿಸಿದ ಹೈಕೋರ್ಟ್‌





ಹಣದುಬ್ಬರದ ಪರಿಣಾಮ ಜನಜೀವನದಲ್ಲಿ ವೆಚ್ಚದಲ್ಲಿ ಏರಿಕೆಯಾಗುವುದು ಸಹಜ. ಆದರೆ, ಪತಿಯಿಂದ ಜೀವನಾಂಶ ಕೋರುವ ಪತ್ನಿಯ ಜೀವನಾಂಶದ ಮೊತ್ತದಲ್ಲೂ ಆಗುತ್ತದೆ. ಹೌದು, ಇಂತಹ ನಿರ್ಧಾರವೊಂದನ್ನು ಕರ್ನಾಟಕ ಹೈಕೋರ್ಟ್ ಕೈಗೊಂಡಿದೆ.



ಬೆಲೆ ಏರಿಕೆ, ದುಬಾರಿಯಾಗುತ್ತಿರುವ ಜೀವನವೆಚ್ಚವನ್ನು ಪರಿಗಣಿಸಿರುವ ನ್ಯಾ. ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠ, ಪತಿ ಪತ್ನಿಗೆ ನೀಡುತ್ತಿದ್ದ ಜೀವನಾಂಶ ಮೊತ್ತವನ್ನು 10 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಏರಿಸಿದೆ.



ಬೆಂಗಳೂರಿನ ವಿನಿತಾ ಥಾಮಸ್ ತಮ್ಮ ಪತಿಯಿಂದ ದೊರೆಯುತ್ತಿರುವ ಜೀವನಾಂಶವನ್ನು ಏರಿಸಬೇಕು ಎಂದು ಹೈಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.



ಇದನ್ನು ಪರಿಗಣಿಸಿದ ನ್ಯಾಯಪೀಠ, "ಬದಲಾಗುವ ಕಾಲಮಾನದಲ್ಲಿ ಪತ್ನಿ ತಾವು ಬದುಕುತ್ತಿರುವ ರೀತಿ, ಏರಿಕೆಯಾಗುತ್ತಿರುವ ಜೀವನ ವೆಚ್ಚ ಮತ್ತಿತರ ವಿವರಗಳನ್ನು ನ್ಯಾಯಾಲಯಕ್ಕೆ ನೀಡಿ ತಮ್ಮ ಅರ್ಜಿಯನ್ನು ಸಮರ್ಥಿಸಿಕೊಳ್ಳಬೇಕಿದೆ. ಆ ಅಂಶಗಳನ್ನು ಪರಿಗಣಿಸಿ ಜೀವನಾಂಶ ಮೊತ್ತ ಹೆಚ್ಚಳ ಮಾಡುವ ಕುರಿತು ಕೋರ್ಟ್‌ಗಳು ತೀರ್ಮಾನಿಸಬೇಕಾಗುತ್ತದೆ” ಎಂದು ಹೇಳಿದೆ.


ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಶೇಷ ಮದುವೆ ಕಾಯಿದೆ ಸೆಕ್ಷನ್ 37ರಡಿ ಹೆಚ್ಚಿನ ಮೊತ್ತದ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು.



ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ನ್ಯಾಯಪೀಠ, ಪತಿ ಉತ್ತಮ ಆದಾಯ ಗಳಿಸಿದ್ದಾರೆ ಎಂಬ ಕಾರಣಕ್ಕೆ ಹೆಚ್ಚಿನ ಜೀವನಾಂಶ ನೀಡಬೇಕು ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಿದೆ.



ರೀಮಾ ಸಲ್ಕನ್ Vs ಸುಮೇರ್ ಸಿಂಗ್ ಸಲ್ಕನ್ ಪ್ರಕರಣ (ಸುಪ್ರೀಂಕೋರ್ಟ್)ವನ್ನು ಉಲ್ಲೇಖಿಸಿದ ನ್ಯಾಯಪೀಠ, ಸದ್ರಿ ಪ್ರಕರಣದಲ್ಲಿ, CrPC ಸೆಕ್ಷನ್ 125ರಡಿ ಒಮ್ಮೆ ಜೀವನಾಂಶ ನಿಗದಿಪಡಿಸಿದ ನಂತರವೂ ಕೋರ್ಟ್‌ಗಳು ಜೀವನ ವೆಚ್ಚ ಏರಿಕೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಅದನ್ನು ಹೆಚ್ಚಳ ಮಾಡಬಹುದು ಎಂದು ಹೇಳಲಾಗಿದೆ.



ಸದ್ರಿ ಈ ಪ್ರಕರಣದಲ್ಲಿ ಗಂಡನ ಆದಾಯ ಮಾಸಿಕ ರೂ. 1.5 ಲಕ್ಷದಿಂದ ರೂ. 2 ಲಕ್ಷದಷ್ಟಿದೆ. 10 ವರ್ಷದ ಹಿಂದೆ ನಿಗದಿಪಡಿಸಿದ್ದ ಜೀವನಾಂಶವನ್ನು ಈಗಿನ ಪರಿಸ್ಥಿತಿ ಹಾಗೂ ವಾಸ್ತವಾಂಶಕ್ಕೆ ಸರಿಹೊಂದಿಸಲಾಗದು. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಜೀವನಾಂಶ ಹೆಚ್ಚಳ ಮಾಡದಿರುವುದು ಸರಿಯಲ್ಲ, ಸಮಂಜಸವೂ ಅಲ್ಲ. ಹಲವು ಕಾರಣಗಳಿಂದಾಗಿ ಜೀವನಾಂಶ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಕಂಡುಬಂದಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.



ಸದ್ರಿ ಪ್ರಕರಣದಲ್ಲಿ ಅರ್ಜಿದಾರರಾದ ವಿನೀತಾ ಥಾಮಸ್ ತಮ್ಮ ಪರ ತಾವೇ ಸ್ವತಃ ವಾದಿಸಿದ್ದು ಗಮನಾರ್ಹವಾಗಿತ್ತು.


ಪ್ರಕರಣ: ವಿನೀತಾ ಥಾಮಸ್ Vs ಡಾ. ಪ್ರವೀಣ್ ಕುಮಾರ್ ಬೋರುಶೆಟ್ಟಿ

ಕರ್ನಾಟಕ ಹೈಕೋರ್ಟ್, WP 16949/2021 Dated 6-12-2022



ಇದನ್ನೂ ಓದಿ:

ಸೆಕ್ಷನ್ 498 A ದುರುಪಯೋಗ: ವಕೀಲರ ಸಾಮಾಜಿಕ ಜವಾಬ್ದಾರಿ ಎತ್ತಿಹಿಡಿಯಲು ಸುಪ್ರೀಂ ಕೋರ್ಟ್ ಕರೆ



ಕೌಟುಂಬಿಕ ಹಿಂಸಾಚಾರ ಕಾಯ್ದೆ ದುರುಪಯೋಗ ಮಾಡಿದ ಪತ್ನಿಗೆ ಭಾರೀ ದಂಡ: ಶ್ರೀನಗರ ನ್ಯಾಯಾಲಯ


Ads on article

Advertise in articles 1

advertising articles 2

Advertise under the article