ನೋಟ್ ಬ್ಯಾನ್: ಕೇಂದ್ರದ ನಿರ್ಧಾರ ಪ್ರಕ್ರಿಯೆ ಹೇಗಿತ್ತು?: ತಿಳಿದುಕೊಳ್ಳಲು ನ್ಯಾಯವ್ಯಾಪ್ತಿ ಇದೆ- ಸುಪ್ರೀಂ ಕೋರ್ಟ್
ನೋಟ್ ಬ್ಯಾನ್: ಕೇಂದ್ರದ ನಿರ್ಧಾರ ಪ್ರಕ್ರಿಯೆ ಹೇಗಿತ್ತು?: ತಿಳಿದುಕೊಳ್ಳಲು ನ್ಯಾಯವ್ಯಾಪ್ತಿ ಇದೆ- ಸುಪ್ರೀಂ ಕೋರ್ಟ್
2016ರಲ್ಲಿ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ಅಮಾನ್ಯೀಕರಣ (ನೋಟ್ ಬ್ಯಾನ್) ನಿರ್ಧಾರದಲ್ಲಿ ಕೇಂದ್ರ ಸರ್ಕಾರ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಿತ್ತೇ ಎಂಬುದನ್ನು ತಿಳಿದುಕೊಳ್ಳಲು ಸುಪ್ರೀಂ ಕೋರ್ಟಿಗೆ ನ್ಯಾಯವ್ಯಾಪ್ತಿ ಇದೆ ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾ. ಎಸ್. ಅಬ್ದುಲ್ ನಜೀರ್ ನೇತೃತ್ವದ ಐವರು ಸದಸ್ಯರ ಸಂವಿಧಾನಿಕ ನ್ಯಾಯಪೀಠ ಈ ತೀರ್ಪು ನೀಡಿದ್ದು, ಆರ್ಥಿಕ ನೀತಿಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಪರಾಮರ್ಶೆಯಲ್ಲಿ ನ್ಯಾಯಾಂಗದ ವ್ಯಾಪ್ತಿ ಸೀಮಿತ. ಆದರೆ, ನ್ಯಾಯಾಲಯ ಕೈಕಟ್ಟಿ ಕೂರಲು ಆಗದು ಎಂದು ಹೇಳಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ತೀರ್ಮಾನ ಯಾವ ಬಗೆಯಲ್ಲಿ ಕೈಗೊಂಡಿತು ಎಂದು ತಿಳಿದುಕೊಳ್ಳಲು ನ್ಯಾಯಪೀಠಕ್ಕೆ ವ್ಯಾಪ್ತಿ ಇದೆ ಮತ್ತು ಅದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ನೋಟು ರದ್ಧತಿಗೆ ಶಿಫಾರಸು ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೇಂದ್ರ ಮಂಡಳಿಯ ಸಭೆಯ ಕೋರಂ ವಿವರನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ನ್ಯಾಯಪೀಠ ಸೂಚನೆ ನೀಡಿದೆ.
ನೋಟು ಬ್ಯಾನ್ ಒಳ್ಳೆಯದೋ ಕೆಟ್ಟದೋ ಎಂಬುದನ್ನು ಸರ್ಕಾರವೇ ತೀರ್ಮಾನಿಸಲಿ. ಆದರೆ, ಅಂತಹ ನಿರ್ಧಾರವನ್ನು ಹೇಗೆ ಕೈಗೊಂಡರು ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ವಿವೇಕ್ ನಾರಾಯಣ ಶರ್ಮಾ Vs ಭಾರತ ಸರ್ಕಾರ ಮತ್ತು ಇತರರು
ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ
ನ್ಯಾಯಮೂರ್ತಿಗಳು: ನ್ಯಾ. ಎಸ್ ಅಬ್ದುಲ್ ನಜೀರ್, ನ್ಯಾ. ಬಿ ಆರ್ ಗವಾಯಿ, ನ್ಯಾ. ಎ ಎಸ್ ಬೋಪಣ್ಣ, ನ್ಯಾ. ವಿ ರಾಮಸುಬ್ರಮಣಿಯನ್ ಹಾಗೂ ನ್ಯಾ. ಬಿ ವಿ ನಾಗರತ್ನ
ಇದನ್ನೂ ಓದಿ:
ಕುಡುಕ ಚಾಲಕರಿಗೆ ಕಹಿ ಸುದ್ದಿ! DRINK AND DRIVE ದಂಡ ಕೋರ್ಟಿನಲ್ಲೇ ಕಟ್ಟುವುದು ಕಡ್ಡಾಯ
ಲಂಚದ ಬೇಡಿಕೆಯೂ ಇಲ್ಲ, ಸ್ವೀಕರಿಸಿಯೂ ಇಲ್ಲ: ಸಬ್‌ರಿಜಿಸ್ಟ್ರಾರ್ ವಿರುದ್ಧದ ಕೇಸು ರದ್ದು- ಕರ್ನಾಟಕ ಹೈಕೋರ್ಟ್
ಕ್ರಿಮಿನಲ್ ಪ್ರಕರಣ ಎದುರಿಸಿದ ವ್ಯಕ್ತಿಗೆ ಉದ್ಯೋಗ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
..