ಚೆಕ್ ಅಮಾನ್ಯ ಆರೋಪಿ ಬಂಧನಕ್ಕೆ ಲಂಚ ಬೇಡಿಕೆ: ಭ್ರಷ್ಟ ಪೊಲೀಸ್ ಸಿಬ್ಬಂದಿ ಬಂಧಿಸಿದ ಲೋಕಾಯುಕ್ತ
ಚೆಕ್ ಅಮಾನ್ಯ ಆರೋಪಿ ಬಂಧನಕ್ಕೆ ಲಂಚ ಬೇಡಿಕೆ: ಭ್ರಷ್ಟ ಪೊಲೀಸ್ ಸಿಬ್ಬಂದಿ ಬಂಧಿಸಿದ ಲೋಕಾಯುಕ್ತ
ತಮಿಳುನಾಡು ಮೂಲದ ಆರೋಪಿಗೆ ವಾರೆಂಟ್ ಜಾರಿಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೆಡ್ ಕಾನ್ಸ್‌ಟೆಬಲ್ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೆಬಲ್ ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿ ಅವನಿಗೆ ಬೆಂಬಲ ನೀಡುತ್ತಿದ್ದ ಆತನ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಲು ಹೊನ್ನಾಳಿ ಠಾಣೆಯ ಭರತ್ 15 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಆತನ ಮಾವ ಸುರೇಶ್ ಎಂಬವನ ಮೂಲಕ ದೂರುದಾರರಿಂದ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಗುಡ್ಡದ ಮಾದಾಪುರದ ಅವಿನಾಶ ಎಂಬವರು ಈ ಪ್ರಕರಣದ ದೂರುದಾರರು. ಚೆಕ್ ಅಮಾನ್ಯ ಪ್ರಕರಣದಲ್ಲಿ ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸುವಂತೆ ಮಾನ್ಯ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿತ್ತು. ಈ ವಾರೆಂಟ್ ಜಾರಿಗೊಳಿಸಲು ಪೊಲೀಸರು ಲಂಚದ ಬೇಡಿಕೆ ಇಟ್ಟಿದ್ದರು.
ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ, ಇನ್ಸ್‌ಪೆಕ್ಟರ್‌ಗಳಾದ ರಾಷ್ಟ್ರಪತಿ ಹಾಗೂ ಆಂಜನೇಯ ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.