-->
ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಗ್ರಾಹಕನ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್

ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಗ್ರಾಹಕನ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್

ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಗ್ರಾಹಕನ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್





ವೇಶ್ಯಾವಾಟಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ದಾಳಿ ನಡೆಸುವಾಗ ಸಿಕ್ಕಿ ಬಿದ್ದ ಗ್ರಾಹಕರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.



ವೇಶ್ಯಾವಾಟಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಆರೋಪಿ/ಅರ್ಜಿದಾರರು ವೇಶ್ಯಾವಾಟಿಕೆ ಅಡ್ಡೆಯಲ್ಲಿ ಇದ್ದರು ಎಂಬುದನ್ನು ಅಲ್ಲಗಳೆದಿಲ್ಲ. ಆದರೆ, ಅವರು ಗ್ರಾಹಕರೆಂಬ ಕಾರಣಕ್ಕೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಬರುವುದಿಲ್ಲ.



ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುವವರ ವಿರುದ್ಧ, ಸಹಕಾರ ಮತ್ತು ಒತ್ತಡ ಹೇರುವವರ ವಿರುದ್ಧ ಹಾಗೂ ಅದರ ಆದಾಯವನ್ನು ಅನುಭವಿಸುವವರ ವಿರುದ್ಧ ಐಪಿಸಿ ಸೆಕ್ಷನ್ 370(3) ಹಾಗೂ ಮಾನವ ಕಳ್ಳಸಾಗಣೆ ತಡೆ ಕಾಯ್ದೆ (ಐಟಿಪಿ ಕಾಯ್ದೆ-1956) ಸೆಕ್ಷನ್ 3ರಿಂದ 6ರ ಪ್ರಕಾರ ಶಿಕ್ಷೆ ವಿಧಿಸಬಹುದು.



ಐಟಿಪಿ ಕಾಯ್ದೆ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹ ನಡೆಸುವುದಕ್ಕೆ ಅಥವಾ ಜಾಗವನ್ನು ವೇಶ್ಯಾಗೃಹಕ್ಕೆ ಬಳಸಲು ಅನುಮತಿಸುವುದಕ್ಕೆ ಶಿಕ್ಷೆ ವಿಧಿಸಬಹುದು. ಸೆಕ್ಷನ್ 4 ವೇಶ್ಯಾವಾಟಿಕೆಯಿಂದ ಹಣ ಗಳಿಸಿ ಜೀವನ ಸಾಗಿಸುವವರಿಗೆ ಶಿಕ್ಷೆ ನೀಡುತ್ತದೆ.



ಐಟಿಪಿ ಕಾಯ್ದೆ ಸೆಕ್ಷನ್ 5ರ ಪ್ರಕಾರ ವೇಶ್ಯಾವಾಟಿಕೆ ಕೃತ್ಯಕ್ಕೆ ವ್ಯಕ್ತಿಗಳನ್ನು ಸಾಗಿಸುವುದು, ಕೃತ್ಯಕ್ಕೆ ಪ್ರಚೋದಿಸುವುದು ಅಥವಾ ಬಲವಂತ ಮಾಡುವುದಕ್ಕೆ ಶಿಕ್ಷೆ ವಿಧಿಸಬಹುದು. ಸೆಕ್ಷನ್ 6ರ ಪ್ರಕಾರ, ವೇಶ್ಯಾವಾಟಿಕೆ ಅಡ್ಡೆಯಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಿದ್ದರೆ ಶಿಕ್ಷೆಗೆ ಪರಿಗಣಿಸಬಹುದು. 


ಆದರೆ, ಅರ್ಜಿದಾರರು ಯಾವ ಅಪರಾಧದಲ್ಲಿ ಭಾಗಿಯಾಗಿದ್ದರು ಎಂಬುದನ್ನು ದೂರಿನಲ್ಲಿ ತಿಳಿಸಿಲ್ಲ. ಆ ಕಾರಣದಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದು ಮಾಡಲು ಅರ್ಹವಾಗಿದೆ ಎಂದು ನ್ಯಾಯಪೀಠ ಹೇಳಿದೆ.


ಪ್ರಕರಣದ ವಿವರ

ಖಚಿತ ಮಾಹಿತಿ ಮೇರೆಗೆ, 2021ರ ಸೆಪ್ಟೆಂಬರ್ 23ರಂದು ಕೆಂಗೇರಿ ಠಾಣೆ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದರು. 


ಈ ಸ್ಥಳದಲ್ಲಿ ಬಂಧನಕ್ಕೆ ಒಳಗಾದ ಆರೋಪಿ ಬಾಬು ವಿರುದ್ಧವೂ ಮಾನವ ಕಳ್ಳಸಾಗಣೆ ತಡೆ ಕಾಯ್ದೆ-1956ರ ಸೆಕ್ಷನ್ 3, 4, 5, 6 ಮತ್ತು ಐಪಿಸಿ ಸೆಕ್ಷನ್ 370 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.



ಈ ಕೇಸಿನ ಎಫ್‌ಐಆರ್ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.


ಪ್ರಕರಣ: ಬಾಬು ಎಸ್. Vs ಕರ್ನಾಟಕ ರಾಜ್ಯ (ಕೆಂಗೇರಿ ಪೊಲೀಸ್ ಠಾಣೆ)

ಕರ್ನಾಟಕ ಹೈಕೋರ್ಟ್, CRL.P 2119/2022, Dated 4-04-2022




ಇದನ್ನೂ ಓದಿ:

ಲಂಚ ಸ್ವೀಕಾರ: ತಹಶೀಲ್ದಾರ್, ಗುಮಾಸ್ತ ಹಿಂಡಲಗಾ ಜೈಲಿಗೆ



ಮಂಗಳೂರು ಪೊಲೀಸರ ಯಡವಟ್ಟು: ಐದು ಲಕ್ಷ ರೂಪಾಯಿ ದಂಡದ ಶಿಕ್ಷೆಗೆ ಗುರಿಯಾದ ಖಾಕಿ ಪಡೆ!



'ಕಾಂತಾರ'ಕ್ಕೆ ರಿಲೀಫ್- 'ವರಾಹ ರೂಪಂ'ಗೆ ಇದ್ದ ನಿರ್ಬಂಧ ತೆರವು: ಥೈಕ್ಕುಡಂ ಬ್ರಿಜ್‌ ಅರ್ಜಿಯಲ್ಲಿ ಯಾವ ನ್ಯೂನ್ಯತೆ ಇತ್ತು..?




Ads on article

Advertise in articles 1

advertising articles 2

Advertise under the article