'ಪರಮಾತ್ಮ'ನಿಗೆ ವಕಾಲತ್ತು: ಸುಪ್ರೀಂ ಕೋರ್ಟಿನಿಂದ ವಕೀಲನಿಗೆ ಛೀಮಾರಿ ಜೊತೆ ಲಕ್ಷ ರೂ. ದಂಡ!
'ಪರಮಾತ್ಮ'ನಿಗೆ ವಕಾಲತ್ತು: ಸುಪ್ರೀಂ ಕೋರ್ಟಿನಿಂದ ವಕೀಲನಿಗೆ ಛೀಮಾರಿ ಜೊತೆ ಲಕ್ಷ ರೂ. ದಂಡ!
ಶ್ರೀ ಶ್ರೀ ಅನುಕೂಲ ಚಂದ್ರ ಅವರನ್ನು 'ಪರಮಾತ್ಮ' ಎಂದು ಘೋಷಿಸಿ ಏಕದೈವ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಿದ ವಕೀಲರೊಬ್ಬರಿಗೆ ನ್ಯಾಯಪೀಠ ಛೀಮಾರಿ ಹಾಕಿದ್ದಲ್ಲದೆ ಒಂದು ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಭಾರತೀಯರಿಗೆ ಕೋಟ್ಯಂತರ ದೇವರು. ಇದರಿಂದ ಎಲ್ಲರೂ ಗೊಂದಲಕ್ಕೆ ಒಳಗಾಗುತ್ತಾರೆ. ಏನೂ ಪ್ರಯೋಜನವಿಲ್ಲ. ಹಾಗಾಗಿ, ಶ್ರೀ ಅನುಕೂಲ ಚಂದ್ರ ಅವರನ್ನು ಪರಮಾತ್ಮ ಎಂದು ಘೋಷಿಸಿ ಏಕದೈವದ ಪೂಜೆಗೆ ಅವಕಾಶ ಕೊಡಿ ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಎಂ.ಆರ್. ಶಾ ಹಾಗೂ ನ್ಯಾ. ಸಿ.ಟಿ. ರವಿಕುಮಾರ್ ನೇತೃತ್ವದ ನ್ಯಾಯಪೀಠ, ವಕೀಲರಿಗೆ ಛೀಮಾರಿ ಹಾಕಿ ಭರ್ಜರಿ ದಂಡ ತೆರುವಂತೆ ವಕೀಲರಿಗೆ ಆದೇಶಿಸಿತು.
ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿಯ ಜನರಿಗೆ ಧರ್ಮ ಮತ್ತು ದೇವರ ಆಯ್ಕೆಗೆ ಸ್ವಾತಂತ್ಯ ಇದೆ. ಇಂಥದ್ದೇ ಆಧ್ಯಾತ್ಮ ಗುರುವನ್ನು ಪೂಜಿಸಿ ಎಂದು ನಿರ್ದೇಶನ ನೀಡಲು ಸಾಧ್ಯವೇ..? ಎಂದು ಅರ್ಜಿದಾರರಿಗೆ ಮತ್ತು ಅವರ ವಕೀಲರಿಗೆ ಖಾರವಾದ ಪ್ರಶ್ನೆ ಹಾಕಿದ ನ್ಯಾಯಪೀಠ, ಕೋರ್ಟ್ ಕಲಾಪವನ್ನು ಹೀಗೆ ವ್ಯರ್ಥ ಮಾಡಿರುವ ವಕೀಲರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು.
ನಿಮ್ಮದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ. ಇದೊಂದು ಪ್ರಚಾರ ಹಿತಾಸಕ್ತಿಯ ಅರ್ಜಿ ಎಂದು ಅರ್ಜಿ ಹಾಕಿದ ವಕೀಲರಿಗೆ ನ್ಯಾಯಪೀಠ ಸರಿಯಾಗಿ ಮಂಗಳಾರತಿ ಬೆಳಗಿತು.
ಇದನ್ನೂ ಓದಿ:
ಕುಡುಕ ಚಾಲಕರಿಗೆ ಕಹಿ ಸುದ್ದಿ! DRINK AND DRIVE ದಂಡ ಕೋರ್ಟಿನಲ್ಲೇ ಕಟ್ಟುವುದು ಕಡ್ಡಾಯ
ಲಂಚದ ಬೇಡಿಕೆಯೂ ಇಲ್ಲ, ಸ್ವೀಕರಿಸಿಯೂ ಇಲ್ಲ: ಸಬ್‌ರಿಜಿಸ್ಟ್ರಾರ್ ವಿರುದ್ಧದ ಕೇಸು ರದ್ದು- ಕರ್ನಾಟಕ ಹೈಕೋರ್ಟ್
ಕ್ರಿಮಿನಲ್ ಪ್ರಕರಣ ಎದುರಿಸಿದ ವ್ಯಕ್ತಿಗೆ ಉದ್ಯೋಗ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು