ಪಾರದರ್ಶಕ ಕೊಲಿಜಿಯಂನ ಹಳಿ ತಪ್ಪಿಸಬೇಡಿ, ನಿವೃತ್ತ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ
ಪಾರದರ್ಶಕ ಕೊಲಿಜಿಯಂನ ಹಳಿ ತಪ್ಪಿಸಬೇಡಿ, ನಿವೃತ್ತ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ
ಭಾರತದ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲೀಜಿಯಂ ವ್ಯವಸ್ಥೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಕೊಲೀಜಿಯಂ ಸದಸ್ಯರಾಗಿದ್ದ ನಿವೃತ್ತ ನ್ಯಾಯಮೂರ್ತಿಗಳಿಗೆ ವಿನಂತಿಸಿದೆ.
ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ. ಈ ವ್ಯವಸ್ಥೆ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡುವ ಮೂಲಕ ವ್ಯವಸ್ಥೆಯ ಹಾದಿ ತಪ್ಪಿಸದಿರಿ ಎಂದು ನ್ಯಾಯಪೀಠ ನಿವೃತ್ತ ನ್ಯಾಯಮೂರ್ತಿಗಳಿಗೆ ಹೇಳಿದೆ.
2018ರಲ್ಲಿ ನಡೆದ ಕೊಲಿಜಿಯಂ ಸಭೆಯ ನಿರ್ಣಯಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಬೇಕು ಎಂದು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ಅವರ ನೇತೃತ್ವದ ನ್ಯಾಯಪೀಠ ಹೀಗೆ ಟಿಪ್ಪಣಿ ಮಾಡಿದೆ.
ಕೊಲೀಜಿಯಂ ಮಾಜಿ ಸದಸ್ಯರು ಅಂದರೆ ನಿವೃತ್ತ ನ್ಯಾಯಮೂರ್ತಿಗಳಿಗೆ ಕೊಲಿಜಿಯಂ ಬಗ್ಗೆ ಮಾತನಾಡುವುದು ಒಂದು ಗೀಳು ಆಗಿಬಿಟ್ಟಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಕೊಲೀಜಿಯಂ ಸಭೆಗಳಲ್ಲಿ ಮೌಖಿಕವಾದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಹೊರತಾಗಿ, ಯಾವುದೇ ಲಿಖಿತ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಪ್ರಮುಖ ಕೆಲವು ವಿಷಯಗಳು ಸಭೆಯಲ್ಲಿ ಚರ್ಚೆಯಾಗಿವೆ. ನಮ್ಮದು ಅತ್ಯಂತ ಹೆಚ್ಚು ಪಾರದರ್ಶಕ ವ್ಯವಸ್ಥೆಯಾಗಿದೆ. ಈ ನೇಮಕಾತಿ ವ್ಯವಸ್ಥೆಯ ಕುರಿತು ಮಾತನಾಡಿ ಇಡೀ ವ್ಯವಸ್ಥೆಯನ್ನು ಯಾರೂ ದಾರಿ ತಪ್ಪಿಸಬಾರದು ಎಂದು ನ್ಯಾಯಪೀಠ ಹೇಳಿತು.
2018ರ ವರ್ಷದಲ್ಲಿ ನಡೆದಿದೆ ಎನ್ನಲಾದ ಕೊಲಿಜಿಯಂ'ನ ಒಂದು ಸಭೆಯಲ್ಲಿ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಬಡ್ತಿ ಕೊಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಇದನ್ನೂ ಓದಿ:
ಭ್ರಷ್ಟಾಚಾರ ಆರೋಪ: ಜಡ್ಜ್ ದೋಷಮುಕ್ತ- ಮರುನಿಯುಕ್ತಿಗೆ ಕರ್ನಾಟಕ ಹೈಕೋರ್ಟ್ ಆದೇಶ
ಭ್ರಷ್ಟ ಅಧಿಕಾರಿಗೆ 4 ವರ್ಷ ಸಜೆ, 4 ಲಕ್ಷ ದಂಡ: ಮಂಗಳೂರು ನ್ಯಾಯಾಲಯದ ತೀರ್ಪು
ವೇಶ್ಯಾವಾಟಿಕೆ: ಸಿಕ್ಕಿಬಿದ್ದ ಗ್ರಾಹಕನ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್