ಹಳೇ ಪ್ರಕರಣಗಳ ಇತ್ಯರ್ಥದಲ್ಲಿ ವೈಫಲ್ಯ: ನ್ಯಾಯಾಧೀಶರಿಗೆ ನೋಟೀಸ್ ಜಾರಿಗೊಳಿಸಿದ ಹೈಕೋರ್ಟ್
ಹಳೇ ಪ್ರಕರಣಗಳ ಇತ್ಯರ್ಥದಲ್ಲಿ ವೈಫಲ್ಯ: ನ್ಯಾಯಾಧೀಶರಿಗೆ ನೋಟೀಸ್ ಜಾರಿಗೊಳಿಸಿದ ಹೈಕೋರ್ಟ್
1977ರಿಂದ 45ಕ್ಕೂ ವರ್ಷ ಹಳೆಯ ಪ್ರಕರಣಗಳನ್ನು ಏಕೆ ಇತ್ಯರ್ಥ ಮಾಡಿಲ್ಲ ಎಂಬುದರ ಬಗ್ಗೆ ಸೂಕ್ತ ವಿವರಣೆ ನೀಡುವಂತೆ 10 ವಿವಿಧ ಜಿಲ್ಲಾ ನ್ಯಾಯಾಧೀಶರಿಗೆ ಗುಜರಾತ್ ಹೈಕೋರ್ಟ್ ಕಾರಣ ಕೇಳಿ (ಶೋಕಾಸ್) ನೋಟೀಸ್ ಜಾರಿಗೊಳಿಸಿದೆ.
ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಯಾಕೆ ಜಾರಿ ಮಾಡಬಾರದು ಎಂಬುದಕ್ಕೆ ಸೂಕ್ತ ಕಾರಣ ನೀಡುವಂತೆ ಹೈಕೋರ್ಟ್ ಜಾರಿಗೊಳಿಸಿದ ನೋಟೀಸ್‌ನಲ್ಲಿ ಸೂಚಿಸಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಅಶುತೋಷ್ ಶಾಸ್ತ್ರಿ ನೇತೃತ್ವದ ನ್ಯಾಯಪೀಠ ಈ ನೋಟೀಸ್ ಜಾರಿಗೊಳಿಸಿದೆ.
2004ರ ಡಿಸೆಂಬರ್‌ನಿಂದ ಆನಂದ್ ಜಿಲ್ಲೆಯಲ್ಲಿ ಸೂಕ್ತ ಕಲಾಪ ನಡೆಸದೆ 1977ರಲ್ಲಿ ಹೂಡಲಾಗಿದ್ದ ವ್ಯಾಜ್ಯವನ್ನು ಇತ್ಯರ್ಥ ಮಾಡಲು ಜಿಲ್ಲಾ ನ್ಯಾಯಾಧೀಶರು ವಿಫಲರಾಗಿದ್ದರು.
ಈ ಇತ್ಯರ್ಥ ವಿಳಂಬಕ್ಕೆ ಬರಿಮಾತಿನ ಕಾರಣವನ್ನು ಕೇಳಲಾಗದು. ಹಲವು ಬಾರಿ ಹೈಕೋರ್ಟ್ ನೀಡಿದ ಸೂಚನೆಗಳನ್ನು ನಿರ್ಲಕ್ಷಿಸಿರುವುದೇಕೆ..? ಇದು ಉದ್ದೇಶಪೂರ್ವಕವೇ..? ಹೈಕೋರ್ಟ್ ಆದೇಶ ಧಿಕ್ಕರಿಸಿದ್ದಕ್ಕೆ ನಿಮ್ಮ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಬಾರದು ಎಂಬುದಕ್ಕೆ ವಿವರವಾದ ಹೇಳಿಕೆ ನೀಡಬೇಕು. ಇದು ಕೇವಲ ಬರಿಮಾತಿನಿಂದ ನೀಡಿದರೆ ಸಾಲದು. ನ್ಯಾಯಾಧೀಶರು ಸ್ವತಃ ಅಫಿದಾವಿತ್ ಮೂಲಕ ಸೂಕ್ತ ವಿವರಣೆ ನೀಡಬೇಕು ಎಂದು ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಲಾಗಿದೆ.
2005, ಡಿಸೆಂಬರ್ 31ಕ್ಕೆ ಮುಂಚಿತವಾಗಿ ಹೂಡಲಾದ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಹೈಕೋರ್ಟ್ ಈ ಹಿಂದೆ ಸೂಚನೆ ನೀಡಿತ್ತು. ಆಮೆಗತಿಯ ವೇಗ ಕಾಯ್ದುಕೊಂಡಿರುವ ಜಿಲ್ಲಾ ನ್ಯಾಯಾಧೀಶರು 2016ರ ನವೆಂಬರ್‌ನಲ್ಲಿ ಅಂತಿಮ ವಾದಕ್ಕೆ ಪ್ರಕರಣವನ್ನು ಮುಂದೂಡಲಾಗಿತ್ತು. ಅಲ್ಲಿಂದ ಇಲ್ಲಿಯವರಿಗೆ ಯಾವುದೇ ಗುರುತರ ಕಾರಣವಿಲ್ಲದೆ ನಿರಂತರ ವಾಯಿದೆ ನೀಡಲಾಗುತ್ತಿತ್ತು ಎಂಬುದನ್ನು ಹೈಕೋರ್ಟ್ ಗಮನಿಸಿತು.
ಪ್ರಕರಣ: ಪಟೇಲ್ ಅಂಬಾಲಾಲ್ ಕಾಳಿದಾಸ್ Vs ಪಟೇಲ್ ಮೋತಿಲಾಲ್ ಕಾಳಿದಾಸ್ (ಗುಜರಾತ್ ಹೈಕೋರ್ಟ್)
ಇದನ್ನೂ ಓದಿ:
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ