-->
ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌

ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌

ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌







ನ್ಯಾಯಾಧೀಶರೂ ಸೇರಿದಂತೆ ನ್ಯಾಯಾಂಗದ ಉನ್ನತ ಅಧಿಕಾರಿಗಳು ಕಾನೂನಿಗಿಂತ ಮಿಗಿಲಲ್ಲ. ಕರ್ತವ್ಯದಲ್ಲಿ ಲೋಪ ಮಾಡಿದರೆ, ಬದ್ಧತೆಗೆ ಚ್ಯುತಿ ಬಂದರೆ ಅವರೂ ಕಾನೂನು ಪ್ರಕಾರ ಸೂಕ್ತ ಪರಿಣಾಮವನ್ನು ಎದುರಿಸಬೇಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಲಕ್ಷದ್ವೀಪದ ಮಾಜಿ ಮುಖ್ಯ ನ್ಯಾಯಿಕ ದಂಡಾಧಿಕಾರಿ(CJM) ಕೆ. ಚೆರಿಯ ಕೋಯಾ ಅವರನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಿದ ಕೇರಳ ಹೈಕೋರ್ಟ್ ನ್ಯಾಯಪೀಠ, ಈ ಮಹತ್ವದ ಆದೇಶ ನೀಡಿದೆ.



ಈ ತೀರ್ಪು ಎಲ್ಲರಿಗೂ ಪಾಠವಾಗಬೇಕು. ತಪ್ಪು ಎಸಗಿದ್ದರೆ ನ್ಯಾಯಾಧೀಶರೂ ಶಿಕ್ಷೆಗೆ ಅರ್ಹರು ಎಂದು ತೀರ್ಪು ನೀಡಿರುವ ಹೈಕೋರ್ಟ್ ಪೀಠ, ಸದ್ಯ ಲಕ್ಷದ್ವೀಪದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಸಿಜೆಎಂ ಜಡ್ಜ್‌ ಚೆರಿಯ ಕೋಯಾ ಅವರನ್ನು ಅಮಾನತು ಮಾಡುವಂತೆ ಲಕ್ಷದ್ವೀಪದ ಆಡಳಿತಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ.


ಆರೋಪಿಯೊಬ್ಬರಿಗೆ ಶಿಕ್ಷೆ ವಿಧಿಸುವ ಸಲುವಾಗಿ ನಕಲಿ ಸಾಕ್ಷ್ಯ ಸೃಷ್ಟಿಸಿದ ಆರೋಪವನ್ನು ಜಡ್ಜ್‌ ಚೆರಿಯಕೋಯಾ ಎದುರಿಸುತ್ತಿದ್ದರು. 



ಚೆರಿಯಕೋಯಾ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಹೇಳಿರುವ ನ್ಯಾಯಪೀಠ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಬೆಂಚ್ ಕ್ಲರ್ಕ್‌ ಮತ್ತು ದ್ವಿತೀಯ ದರ್ಜೆ ಸಹಾಯಕರ ವಿರುದ್ಧವೂ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ.



ಇದನ್ನೂ ಓದಿ:

ಕ್ರಿಮಿನಲ್ ಪ್ರಕರಣ ಇದ್ದರೆ ನೋಟೀಸ್ ನೀಡದೆ ಸರ್ಕಾರಿ ನೌಕರರ ಅಮಾನತು: ಇಲಾಖೆಯ ಕ್ರಮಕ್ಕೆ ಅಸ್ತು ಎಂದ ಕರ್ನಾಟಕ ಹೈಕೋರ್ಟ್‌




ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ: ನಿರ್ದಿಷ್ಟ ಪ್ರಕರಣ ಪಟ್ಟಿ ಮಾಡದ ರಿಜಿಸ್ಟ್ರಿ ಮೇಲೆ ಸುಪ್ರೀಂ ಕೋರ್ಟ್‌ ಗುಡುಗು!



ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!




ಕ್ರಿಮಿನಲ್‌ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ



Ads on article

Advertise in articles 1

advertising articles 2

Advertise under the article