ಪಿತ್ರಾರ್ಜಿತ ಆಸ್ತಿ ಮೇಲೆ ಹಕ್ಕು: ಬುಡಕಟ್ಟು ಮಹಿಳೆಯವರಿಗೂ ವಿಸ್ತರಿಸಬೇಕು- ಸುಪ್ರೀಂ ಕೋರ್ಟ್
ಪಿತ್ರಾರ್ಜಿತ ಆಸ್ತಿ ಮೇಲೆ ಹಕ್ಕು: ಬುಡಕಟ್ಟು ಮಹಿಳೆಯವರಿಗೂ ವಿಸ್ತರಿಸಬೇಕು- ಸುಪ್ರೀಂ ಕೋರ್ಟ್
ಪಿತ್ರಾರ್ಜಿತ ಆಸ್ತಿ ಮೇಲೆ ಬುಡಕಟ್ಟು ಪುರುಷರಿಗೆ ಇರುವಷ್ಟೇ ಹಕ್ಕು ಬುಡಕಟ್ಟು ಮಹಿಳೆಯರಿಗೂ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಕ್ಕೂ ಅನ್ವಯವಾಗುವಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾ. ಎಂ.ಆರ್. ಶಾ ಮತ್ತು ನ್ಯಾ. ಕೃಷ್ಣ ಮುರಾರಿ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಸೂಚನೆ ನೀಡಿದೆ.
ಬುಡಕಟ್ಟು ಅಲ್ಲದ ಮಹಿಳೆಗೆ ಆಸ್ತಿಯ ಹಕ್ಕು ಇದೆ. ಹೀಗಿರುವಾಗ ಬುಡಕಟ್ಟು ಮಹಿಳೆಯವರಿಗೆ ಮಾತ್ರ ಪಿತ್ರಾರ್ಜಿತ ಆಸ್ತಿಯ ಹಕ್ಕುಗಳನ್ನು ನಿರಾಕರಿಸಲಾಗದು. ಅದಕ್ಕೆ ಯಾವ ಸಕಾರಣವೂ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ತಮ್ಮ ಜೊತೆಗೆ ಆಸ್ತಿಯ ಹಕ್ಕನ್ನು ಹಂಚಿಕೊಂಡಿದ್ದ ವ್ಯಕ್ತಿಯು ಮೃತಪಟ್ಟಾಗ ಆತನ ಪಾಲಿನ ಆಸ್ತಿಯ ಹಕ್ಕನ್ನೂ ಬುಡಕಟ್ಟು ಮಹಿಳೆಗೆ ನೀಡದಿರುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಂವಿಧಾನದ 14 ಮತ್ತು 21ರ ಅಡಿಯಲ್ಲಿ ನೀಡಲಾದ ಸಮಾನತೆಯ ಹಕ್ಕನ್ನು ಪರಿಶಿಷ್ಟ ಪಂಗಡದವರಿಗೂ ಅನ್ವಯವಾಗುವಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಲಿ ಎಂದು ಸುಪ್ರೀಂ ಕೋರ್ಟ್ ಆಶಿಸಿತು.
ಪಿತ್ರಾರ್ಜಿತ ಆಸ್ತಿಯಲ್ಲಿ ಬುಡಕಟ್ಟು ಮಹಿಳೆಗೆ ಪುರುಷರಂತೆ ಸಮಾನ ಆಸ್ತಿಯ ಹಕ್ಕು ಇದೆಯೇ..? ಎಂಬ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 2(2)ರ ಪ್ರಕಾರ ಈ ಕಾಯ್ದೆಯು ಪರಿಶಿಷ್ಟ ಪಂಗಡದವರಿಗೆ ಅನ್ವಯವಾಗುವುದಿಲ್ಲ ಎಂದು ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಿತು.
ಇದನ್ನೂ ಓದಿ
PTCL Act- ಎಸ್‌ಸಿ ಎಸ್‌ಟಿ ಜಮೀನು ಪರಭಾರೆ: ಸರ್ಕಾರದಿಂದ ನೂತನ ಸುತ್ತೋಲೆ (28/09/2021)
PTCL Act | DC ಮಟ್ಟದಲ್ಲೇ SC, ST ಜಾಗ ಭೂ ಪರಿವರ್ತನೆ/ಮಾರಾಟ: ಪೂರ್ವಾನುಮತಿ ಬಗ್ಗೆ ಸರ್ಕಾರದ ಮಹತ್ವದ ಸುತ್ತೋಲೆ
SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್