ವಕೀಲರ ವಿರುದ್ಧ ಅಪಪ್ರಚಾರ: ಎಫ್‌ಐಆರ್ ದಾಖಲು
ವಕೀಲರ ವಿರುದ್ಧ ಅಪಪ್ರಚಾರ: ಎಫ್‌ಐಆರ್ ದಾಖಲು
ವಕೀಲರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿದ ಎಂಟು ಮಂದಿಯ ವಿರುದ್ಧ ದೂರು ನೀಡಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಅಕ್ರಮವಾಗಿ ದನ ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಮೇಲೆ ಬಂದಿತರಾಗಿದ್ದ ಆರೋಪಿಯ ಬಿಡುಗಡೆಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿ ವಕೀಲರ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ಇಂತಹ ಅಪಪ್ರಚಾರ ಮಾಡಿದ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ.
ಮೂಡಬಿದ್ರೆಯ ಅಲಂಗಾರು ಸಮೀಪ ಮನೆಯೊಂದರ ಮೇಲೆ ಪೋಲಿಸರು ದಾಳಿ ನಡೆಸಿ ಅಕ್ರಮ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದರು. ಕೆಲ ದಿನಗಳ ನಂತರ ಆರೋಪಿಗಳಿಗೆ ಮೂಡಬಿದಿರೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಮೂಡಬಿದ್ರೆಯ ವಕೀಲರಾದ ಚೇತನ್ ಕುಮಾರ್ ಶೆಟ್ಟಿ ಎಂಬವರು ಈ ಆರೋಪಿಗಳಿಗೆ ಜಾಮೀನು ಕೊಡಿಸಿದ್ದಾರೆ ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗಿತ್ತು.
ಈ ಬಗ್ಗೆ ವಕೀಲರಾದ ಚೇತನ್ ಕುಮಾರ್ ಶೆಟ್ಟಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಸಮಿತ್ ರಾಜ್ ರಾಜೇಶ್ ಸಂದೀಪ್ ಹೆಗ್ಡೆ ಉದಯಕುಮಾರ್ ಶೆಟ್ಟಿ, ದಯಾನಂದ ಹೆಗಡೆ ವಿಜಯ ಕೋಡರಗಲ್ಲು ಸಂದೀಪ್ ಸುವರ್ಣ ಮತ್ತು ಶ್ರೀನಿವಾಸ್ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು
ಈ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ
ಜಿಲ್ಲಾ ನ್ಯಾಯಾಧೀಶರಾಗಿ ಮಂಗಳೂರಿನ ಯುವ ವಕೀಲ ಸಿರಾಜುದ್ದೀನ್ ನೇಮಕ
ಸರ್ಕಾರಿ ನೌಕರರಿಗೆ ವರದಾನವಾದ ಐತಿಹಾಸಿಕ ತೀರ್ಪು: ಕರ್ನಾಟಕ ಹೈಕೋರ್ಟ್‌ನ ಆ ಮಹತ್ವದ ತೀರ್ಪಿನಲ್ಲೇನಿದೆ...?