![ಜಾಮೀನು ನೀಡಲು ಬಂದವನ ಮೇಲೆ ಕೇಸು ದಾಖಲು! - ಕೋರ್ಟ್‌ನಲ್ಲಿ ನಡೆದ ವಿಚಿತ್ರ ಘಟನೆಯಿದು ಜಾಮೀನು ನೀಡಲು ಬಂದವನ ಮೇಲೆ ಕೇಸು ದಾಖಲು! - ಕೋರ್ಟ್‌ನಲ್ಲಿ ನಡೆದ ವಿಚಿತ್ರ ಘಟನೆಯಿದು](https://blogger.googleusercontent.com/img/b/R29vZ2xl/AVvXsEiTWVsm5dyKBZSZa0fwDhIuLIVm9uii4rwYsP9pqSjN3IQ3dzTJUUtk4nhZqxmyseQpNZDZ-WFZqxg-pcAAhQi6tFusCjZ3yPz-QvkG-Yv92nin2gcSMQ8dY2PSH1TX2fbOiw6pqsThXlnvhfYwUMTech1hS3mpjGBqZLJXSbpJ9wIWCqV7ePKCi0_Wsw/w640-h356/1235.jpg)
ಜಾಮೀನು ನೀಡಲು ಬಂದವನ ಮೇಲೆ ಕೇಸು ದಾಖಲು! - ಕೋರ್ಟ್‌ನಲ್ಲಿ ನಡೆದ ವಿಚಿತ್ರ ಘಟನೆಯಿದು
ಜಾಮೀನು ನೀಡಲು ಬಂದವನ ಮೇಲೆ ಕೇಸು ದಾಖಲು! - ಕೋರ್ಟ್‌ನಲ್ಲಿ ನಡೆದ ವಿಚಿತ್ರ ಘಟನೆಯಿದು
ಸುಳ್ಳು ಘೋಷಣಾ ಪತ್ರದೊಂದಿಗೆ ಆರೋಪಿಗೆ ಜಾಮೀನು ನೀಡಲು ಬಂದ ವ್ಯಕ್ತಿಯ ವಿರುದ್ಧವೇ ನ್ಯಾಯಾಲಯ ಮೊಕದ್ದಮೆ ಹೂಡಿದ ಅಚ್ಚರಿಯ ಪ್ರಸಂಗ ಚಿತ್ರದುರ್ಗದಲ್ಲಿ ನಡೆದಿದೆ.
ಆರೋಪಿಗೆ ಜಾಮೀನು ನೀಡಲು ಬಂದ ಮಂಜುನಾಥ ಎಂಬಾತ ಸುಳ್ಳು ಘೋಷಣಾ ಪತ್ರದೊಂದಿಗೆ ನ್ಯಾಯಾಲಯದೆದುರು ಹಾಜರಾಗಿದ್ದ. ಆದರೆ, ಜಾಮೀನು ಷರತ್ತನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಆತ ನ್ಯಾಯಾಧೀಶರ ಗಮನಕ್ಕೆ ಸಿಕ್ಕಿ ಬಿದ್ದಿದ್ದಾನೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಾಮೀನು ನೀಡಲು ಹಾಜರಾಗಿದ್ದ ಮಂಜುನಾಥ್ ಅವರಲ್ಲಿ ಘೋಷಣಾ ಪತ್ರದಲ್ಲಿ ಯಾವುದೇ ಆರೋಪಿಗೆ ಈ ಜಮೀನು ಮೂಲಕ ಜಾಮೀನು ನೀಡಿಲ್ಲ ಎಂದು ಘೋಷಣಾ ಪತ್ರ ನೀಡಿದ್ದೀರಿ.. ಯಾರಿಗಾದರೂ ಜಾಮೀನು ನೀಡಿದ್ದೀರಾ ಎಂದು ಪ್ರಶ್ನಿಸಿದಾಗ, ಆತ ಯಾರಿಗೂ ಜಾಮೀನು ನೀಡಿಲ್ಲ ಎಂದು ಉತ್ತರಿಸಿದರು.
ಈ ಬಗ್ಗೆ ನ್ಯಾಯಾಲಯದ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿದಾಗ, ದಾವಣಗೆರೆ, ಹೊನ್ನಾಳಿ, ಹರಿಹರ ಮತ್ತು ಚನ್ನಗಿರಿ ನ್ಯಾಯಾಲಯಗಳಲ್ಲಿ ಇದೇ ಜಮೀನು ವಿವಿಧ ಆರೋಪಿಗಳ ಬಿಡುಗಡೆ ಸಂದರ್ಭದಲ್ಲಿ ಶೂರಿಟಿಯಾಗಿ ದಾಖಲಾಗಿತ್ತು.
ಈ ವಿಷಯ ಗಮನಕ್ಕೆ ಬಂದ ತಕ್ಷಣ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಮಲ್ಲಿಕಾರ್ಜುನ್, ನ್ಯಾಯಾಲಯಕ್ಕೆ ಸುಳ್ಳು ಹೇಳಿದ ಮತ್ತು ನಿಯಮ ಮೀರಿ ಆರೋಪಿಗೆ ಜಾಮೀನು ನೀಡಿ ಮಂಜುನಾಥ್ ಮೇಲೆ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 193 ಮತ್ತು 299ರ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡುವಂತೆ ನಿರ್ದೇಶಿಸಿದರು.
ಮಾನ್ಯ ನ್ಯಾಯಾಧೀಶರ ನಿರ್ದೇಶನದಂತೆ ಆರೋಪಿ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸರ್ಕಾರಿ ಅಭಿಯೋಜಕ ಕಚೇರಿ ಮಾಹಿತಿ ನೀಡಿದೆ.
Read This Also:
ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?
What is a Decree..?: Definition & execution of a decree
ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್