ಕೋರ್ಟ್ ಕ್ಲರ್ಕ್ ಈಗ ನ್ಯಾಯಾಧೀಶೆ: ಹುಣಸೂರು ಮಹಿಳೆಯ ಅದಮ್ಯ ಸಾಧನೆ
ಕೋರ್ಟ್ ಕ್ಲರ್ಕ್ ಈಗ ನ್ಯಾಯಾಧೀಶೆ: ಹುಣಸೂರು ಮಹಿಳೆಯ ಅದಮ್ಯ ಸಾಧನೆ
ಕೋರ್ಟ್ ಕ್ಲರ್ಕ್ ಆಗಿದ್ದವರು ಇದೀಗ ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಮೈಸೂರಿನ ಹುಣಸೂರು ಕೋರ್ಟಿನ ಪ್ರಥಮ ದರ್ಜೆ ಗುಮಾಸ್ತೆಯಾಗಿರುವ ಎಚ್. ಆರ್. ಹೇಮಾ ಈ ಸಾಧನೆ ಮಾಡಿದವರು.
ಹೇಮಾ ಅವರ ಅದಮ್ಯ ಸಾಧನೆಯ ಹಿಂದೆ ಅಚಲ ಪರಿಶ್ರಮವೂ ಇದೆ. ಕಾನೂನು ಪದವಿ ಪಡೆದ ಬಳಿಕ ಅವರು ಹುಣಸೂರು ಮತ್ತು ಮೈಸೂರಿನಲ್ಲಿ ವಕೀಲ ವೃತ್ತಿ ನಡೆಸಿದ್ದರು.
ಕಳೆದ ಐದು ವರ್ಷಗಳ ಹಿಂದಷ್ಟೇ ಪ್ರಥಮ ದರ್ಜೆ ಗುಮಾಸ್ತರ ಹುದ್ದೆ ನಡೆಸಲಾದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ತಮ್ಮ ವಕೀಲ ವೃತ್ತಿಯನ್ನು ತೊರೆದು ಮೈಸೂರಿನ ಕೋರ್ಟ್ ನಲ್ಲಿ ಕ್ಲರ್ಕ್ ಆಗಿ ನಿಯುಕ್ತರಾಗಿದ್ದರು.
ಆ ಬಳಿಕ, ನ್ಯಾಯಾಧೀಶರಾಗಬೇಕು ಎಂಬ ಛಲದಿಂದ ನಿರಂತರ ಓದು ಮತ್ತು ಕಠಿಣ ಪರಿಶ್ರಮದಿಂದ ಇದೀಗ ಅವರು ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಮೂಲಕ ಹುಣಸೂರು ಕೋರ್ಟಿನಲ್ಲಿ ಪ್ರಥಮ ದರ್ಜೆ ಗುಮಾಸೆಯಾಗಿದ್ದವರು ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.
ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ನಿಟ್ಟಿನಲ್ಲಿ ಇದು ಹೇಮಾ ಅವರ ಎರಡನೇ ಪ್ರಯತ್ನವಾಗಿತ್ತು. ಹೇಮಾ ಅವರ ಪ್ರಯತ್ನ ಮತ್ತು ಸಾಧನೆಗೆ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಸುರಿಮಳೆಯೇ ಸುರಿದಿದೆ.