-->
ಭ್ರಷ್ಟಾಚಾರದ ವಿರುದ್ಧ ಮತದಾರನ ಜಾಗೃತ ಪ್ರಜ್ಞೆ ಜಾಗೃತವಾಗಬೇಕು: ನಿವೃತ್ತ ನ್ಯಾಯಾಧೀಶರ ಅಂಕಣ

ಭ್ರಷ್ಟಾಚಾರದ ವಿರುದ್ಧ ಮತದಾರನ ಜಾಗೃತ ಪ್ರಜ್ಞೆ ಜಾಗೃತವಾಗಬೇಕು: ನಿವೃತ್ತ ನ್ಯಾಯಾಧೀಶರ ಅಂಕಣ

ಭ್ರಷ್ಟಾಚಾರದ ವಿರುದ್ಧ ಮತದಾರನ ಜಾಗೃತ ಪ್ರಜ್ಞೆ ಜಾಗೃತವಾಗಬೇಕು: ನಿವೃತ್ತ ನ್ಯಾಯಾಧೀಶರ ಅಂಕಣ



Article by : ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ


ಭ್ರಷ್ಟಾಚಾರದ ವಿರುದ್ಧ ನಡೆಯುವ ಎಲ್ಲ ಹೋರಾಟ ಹಾರಾಟಗಳು ಕೇವಲ ಸುದ್ದಿ ಮಾಡಿ ಸದ್ದಿಲ್ಲದೆ ಮರೆಯಾಗುತ್ತವೆ ಇದು ಕಠೋರ ಸತ್ಯ.ಹಿಂದೆ ಜನಲೋಕಪಾಲ ಕಾಯಿದೆಗಾಗಿ ದಿಲ್ಲಿಯಲ್ಲಿ ದೊಡ್ಡ ಹೋರಟ 2011 ರಲ್ಲಿ ನಡೆದದ್ದು ಮರೆತು ಹೋಗಿದೆ. ಆ ಹೋರಾಟಕ್ಕೆ ಬೆಂಬಲ ನೀಡಿದವರು ಇಂದು ಅಧಿಕಾರ ಸ್ಥಾನದಲ್ಲಿದ್ದಾರೆ. ಆದರೆ ಭ್ರಷ್ಟಾಚಾರ ಮಾತ್ರ ಅದು ತನ್ನ ಪಾಡಿಗೆ ತಾನು ನಡೆಯುತ್ತಲಿದೆ.


ಕರ್ನಾಟಕದಲ್ಲಿ ಲೋಕಾಯುಕ್ತ ಮತ್ತೆ ಇಂದು ಸಬಲ ಆಗಿದೆ.ಆದರೆ ಅದು ಮೊದಲಿನಷ್ಟು ಚುರುಕಾಗಿಲ್ಲ ಅನ್ನುವ ಹಿನ್ನಲೆಯಲ್ಲಿ ಇಂದು ವಿಜಯವಾಣಿ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿದೆ. ರಾಜಕಾರಣಿ ಮತ್ತು ನೌಕರರು ನಿರ್ಭಿತರಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.ಕೇವಲ ನೂರು,ಸಾವಿರ ಮತ್ತು ಲಕ್ಷಗಳಲ್ಲಿ ಹಣ ಪಡೆಯವಾಗ ಲೋಕಾಯುಕ್ತ ಬಲೆಗೆ ಬೀಳುವ ಪ್ರಕರಣಗಳು ಲಂಚ ಸರ್ವವ್ಯಾಪಿ ಅಸ್ತಿತ್ವ ತೋರಿಸುತ್ತದೆ.ಇನ್ನೂ ಶೇಕಡಾವಾರು ಲಂಚದ ಪ್ರಕರಣದ ಬಗ್ಗೆ ಬರೀ ಆರೋಪ ಪ್ರತ್ಯಾರೋಪ ಬಿಟ್ಟರೆ ಯಾವ ಕ್ರಮಗಳು ನಡೆಯುತ್ತಿಲ್ಲ.


ಸಾಕ್ಷಿ ಸಿಗದಂತೆ ಭ್ರಷ್ಟಾಚಾರ ಮಾಡುವ ಚಾಣಾಕ್ಷ ಭ್ರಷ್ಟರು ಸಾಕ್ಷಿ ಕೊಡು ಎಂದು ಕೇಳುವುದು ನಮ್ಮ ವ್ಯವಸ್ಥೆಯ ದೌರ್ಬಲ್ಯ ತೋರಿಸುತ್ತದೆ. ಯಾವುದೇ ಕಾನೂನನ್ನು ರೂಪಿಸಿದರೂ ಅದನ್ನು ಪ್ರಾಮಾಣಿಕವಾಗಿ ಜಾರಿ ಮಾಡಲು ಪ್ರಾಮಾಣಿಕ ವ್ಯಕ್ತಿಗಳು ಬೇಕು. ಕಾನೂನು ಎಷ್ಟೇ ಬಿಗಿ ಇದ್ದರೂ ಜಾರಿ ಮಾಡುವವರು ಅಪ್ರಾಮಾಣಿಕರಾಗಿದ್ದರೆ ಪಾರದರ್ಶಕ ಆಡಳಿತ ನಡೆಸಲು ಸಾಧ್ಯವಿಲ್ಲ.


ಶಾಲೆಯಲ್ಲಿ ನೈತಿಕತೆ ಬೋಧಿಸುವದು ಎಷ್ಟು ಅಗತ್ಯವೋ ಅದಕ್ಕೂ ಹೆಚ್ಚು ಸಾರ್ವಜನಿಕ ಜೀವನದಲ್ಲಿ ನೈತಿಕತೆ ಪಾಲಿಸುವುದು ಅಗತ್ಯ. ಒಟ್ಟಾರೆ ಕಾನೂನು ಪಾಲಿಸುವ ನೈತಿಕತೆ ಇಂದು ಮರೆಯಾದ ಕಾರಣ ಭ್ರಷ್ಟಾಚಾರ ಪೆಡಂಭೂತವಾಗಿ ಬೆಳೆದು ಜನರನ್ನು ಕಾಡುತ್ತಿದೆ. ಭ್ರಷ್ಟಾಚಾರ ಒಂದು ದೊಡ್ಡ ಅಧರ್ಮ. ಆದರೆ ಇದನ್ನು ಅಧರ್ಮ ಎಂದು ಭಾವಿಸದೇ ಇರುವದು ದೊಡ್ಡ ದುರಂತ.


ಇಂದಿನ ಎಲ್ಲ ದುರಾಡಳಿತಕ್ಕೆ ಭ್ರಷ್ಟಾಚಾರವೇ ಮೂಲ ಕಾರಣ ಅನ್ನುವದು ಗೊತ್ತಿದ್ದರೂ ಸುಮ್ಮನೆ ಇರುವ ಮತದಾರರು ಇದಕ್ಕೆ ಕಾರಣ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾರ ಜಾಗೃತಿ ಅಗತ್ಯ.ಭ್ರಷ್ಟಾಚಾರದ ಬಗ್ಗೆ ನಡೆಯುವ ಹೋರಾಟಗಳು ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸಫಲ ಆಗುತ್ತಿಲ್ಲ.ಯಾಕೆಂದರೆ ಅಧಿಕಾರದಲ್ಲಿ ಇರುವವರು ಈ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.


ಭ್ರಷ್ಟಾಚಾರ ಪ್ರಜಾಪ್ರಭುತ್ವ ಮೇಲೆ ನಡೆಯುತ್ತಿರುವ ಘೋರ ಅತ್ಯಾಚಾರ.ಇದನ್ನು ನೋಡಿ ಅಸಹಾಯಕ ರಂತೆ ಇರುವ ಪ್ರಜೆಗಳನ್ನು ಸತ್ಪ್ರಜೆ ಎನ್ನಬೇಕೆ ಅಥವಾ ಸತ್ತ ಪ್ರಜೆ ಎನ್ನಬೇಕೆ ತಿಳಿಯದು.ಭ್ರಷ್ಟಾಚಾರ ವಿರುದ್ಧ ಸಮಗ್ರ ಜನಾಂದೋಲನ ನಡೆಯದೇ ಇದನ್ನು ತಡೆಯಲಾಗದು.


ಚುನಾವಣೆಗಳಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಅಸೆ ಆಮಿಷಕ್ಕೆ ಒಳಗಾಗದೇ, ಆಯ್ಕೆ ಮಾಡುವ ಮೂಲಕ, ಪಾರದರ್ಶಕ ಆಡಳಿತ ನೀಡುವ ಸರಕಾರ ರಚನೆ ಮಾಡಬಹುದು.


Article by : ಎಸ್. ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ

Ads on article

Advertise in articles 1

advertising articles 2

Advertise under the article