-->
ವಕೀಲರ ಮೇಲೆ ಹಲ್ಲೆ ಆರೋಪಿಗೆ ಜೀವಾವಧಿ: ರಾಜ್ಯದಲ್ಲೇ ಮೊದಲ ಪ್ರಕರಣ!

ವಕೀಲರ ಮೇಲೆ ಹಲ್ಲೆ ಆರೋಪಿಗೆ ಜೀವಾವಧಿ: ರಾಜ್ಯದಲ್ಲೇ ಮೊದಲ ಪ್ರಕರಣ!

ವಕೀಲರ ಮೇಲೆ ಹಲ್ಲೆ ಆರೋಪಿಗೆ ಜೀವಾವಧಿ: ರಾಜ್ಯದಲ್ಲೇ ಮೊದಲ ಪ್ರಕರಣ!





ವಕೀಲರೊಬ್ಬರ ಮೇಲೆ ಹಲ್ಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದ ಅಪರೂಪದ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ. ವಕೀಲ ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಟೌನ್ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಶಿಕ್ಷೆಗೆ ಗುರಿಯಾದ ವ್ಯಕ್ತಿ.



ಭಾರತೀಯ ದಂಡ ಸಂಹಿತೆ ಕಲಂ 307 ಮತ್ತು 324ರ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ಐವತ್ತು ಸಾವಿರ ರೂ. ದಂಡ ವಿಧಿಸಲಾಗಿದೆ. ಜೊತೆಗೆ ಹಲ್ಲೆಗೊಳಗಾದ ವಕೀಲರಿಗೆ ಮೂರು ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರಾದ ಹಂಚಾಟೆ ಸಂಜೀವ ಕುಮಾರ್ ಆದೇಶಿಸಿದರು.



ವಕೀಲರು ಸಮಾಜದ ಒಂದು ಭಾಗ. ಹಾಗೆಯೇ ನ್ಯಾಯಾಂಗದ ಅವಿಭಾಜ್ಯ ಅಂಗವೂ ಆಗಿದ್ದಾರೆ. ಇದು ವಕೀಲರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮಾತ್ರವಲ್ಲ, ಇಡೀ ನ್ಯಾಯಾಂಗದ ಮೇಲೆ ನಡೆದ ದಾಳಿಯಾಗಿತ್ತು ಎಂದು ನ್ಯಾಯಾಧೀಶರು ತೀರ್ಪು ಸಂದರ್ಭದಲ್ಲಿ ವ್ಯಾಖ್ಯಾನಿಸಿದ್ದರು.



ಪ್ರಕರಣದ ಹಿನ್ನೆಲೆ

ವಕೀಲರಾದ ಶಿವಕುಮಾರ್ 2010ರ ಎಪ್ರಿಲ್ 9ರಂದು ರಾತ್ರಿ ತಮ್ಮ ಕೆಲಸ ಮುಗಿಸಿಕೊಂಡು ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ, ಸೇಜಪ್ಪ, ನಿಶಾನಿ ಜಯಣ್ಣ ದ್ವಿಚಕ್ರ ವಾಹನದಲ್ಲಿ ಬಂದು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದರು.



ವಕೀಲ ಶಿವಕುಮಾರ್ ತಮ್ಮ ಕಕ್ಷಿದಾರ ವಿಜಯ ಕುಮಾರ್ ಅವರಿಗೆ ಸೇರಿದ ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ಒಂದನೇ ಅಪರ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು.


ಕೋಟೆ ಠಾಣೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಒಂದನೇ ಆರೋಪಿ ಸೇಜಪ್ಪ ಮೃತಪಟ್ಟಿದ್ದರು. 




Read This Also:

ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?



What is a Decree..?: Definition & execution of a decree




ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್‌



NI Act- ಭದ್ರತೆಗಾಗಿ ನೀಡಿದ ಚೆಕ್‌- Stop Payment ಷರಾದೊಂದಿಗೆ ಚೆಕ್ ಅಮಾನ್ಯ: ಸುಪ್ರೀಂ ಕೋರ್ಟ್‌ ತೀರ್ಪು ಹೇಳುವುದೇನು..?


Ads on article

Advertise in articles 1

advertising articles 2

Advertise under the article